ಒಡಿಯೂರು ಶ್ರೀ ಸಂಸ್ಥಾನದಿಂದ ಮುದ್ದುಕೃಷ್ಣ ವೇಷ ಸ್ಪರ್ಧೆ
ಕೃಷ್ಣ ಸಂಸ್ಕೃತಿಯ ದ್ಯೋತಕ. ಸಂಸ್ಕೃತಿಯ ಬೆಳಕು ರಾಮ-ಕೃಷ್ಣರು. ಮಕ್ಕಳನ್ನು ಸಂಸ್ಕೃತಿಯ ಉಳುವಿನ ಹರಿಕಾರರನ್ನಾಗಿ ಬೆಳೆಸಬೇಕು. ಆ ಮೂಲಕ ಭವ್ಯ ಭಾರತ ನಿರ್ಮಾಣದ ಭವಿಷ್ಯ ಬರೆಯುವಂತಾಗಬೇಕು. ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಗುರುಬಂಧುಗಳು ತಮ್ಮ ತಮ್ಮ ಮನೆಯಲ್ಲೇ ಆಚರಿಸಿ ಸಂಭ್ರಮಿಸಬೇಕೆಂದು ಒಡಿಯೂರು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದ್ದಾರೆ.
ಶ್ರೀ ಸಂಸ್ಥಾನದಲ್ಲಿ ಮುದ್ದುಕೃಷ್ಣ ವೇಷಧಾರಿ ಮಕ್ಕಳ ವೀಡಿಯೋ ಮೂಲಕ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುವುದು. ಆಗಸ್ಟ್ 11, 2020ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ನಾಲ್ಕು ವರುಷದೊಳಗಿನ ಮಕ್ಕಳು ‘ಮುದ್ದುಕೃಷ್ಣ ವೇಷ’ದಲ್ಲಿ ತಮ್ಮ ತಮ್ಮ ಮನೆಯಲ್ಲಿ 60ಸೆಕೆಂಡ್ಸ್‍ಗಳ ವೀಡಿಯೋ ಚಿತ್ರೀಕರಣ ಮಾಡಿ ಶ್ರೀ ಸಂಸ್ಥಾನಕ್ಕೆ ಕಳುಹಿಸಬೇಕು.
ಭಾಗವಹಿಸುವವರು 9480760799 ನಂಬ್ರಕ್ಕೆ ವಾಟ್ಸ್‍ಆಪ್ ಮಾಡಿ ಪೋಷಕರ ಹೆಸರು, ಮಗುವಿನ ಹೆಸರು, ಊರು, ಹುಟ್ಟಿದ ದಿನಾಂಕವನ್ನು ದಾಖಲಿಸಬೇಕು.
• ತಾ. 12-08-2020ರಂದು ಅಪರಾಹ್ಣ 2.00 ಘಂಟೆಯೊಳಗೆ ವಿಡಿಯೋವನ್ನು ಕಳುಹಿಸಬೇಕು.
• ವೇಷ ಮತ್ತು ಅಭಿನಯಕ್ಕೆ ಮಾತ್ರ ಪ್ರಾಶಸ್ತ್ಯ.
• ವಿಜೇತರಿಗೆ ಪ್ರಥಮ-ದ್ವಿತೀಯ ವಿಶೇಷ ಬಹುಮಾನ ನೀಡಲಾಗುವುದು.