ವಿಶ್ವವು ಕರೋನಾ ಖಾಯಿಲೆಯಿಂದ ಮುಕ್ತವಾಗಲಿ – ಒಡಿಯೂರು ಶ್ರೀ

ಅಪರೂಪವಾಗಿ ಇಂತಹ ಹಲವಾರು ಸೋಂಕಿನ ಖಾಯಿಲೆಗಳು ಈ ಹಿಂದೆಯೂ ಕಾಡಿದೆ, ಈಗಲೂ ಕಾಡುತ್ತಿದೆ. ಮುನ್ನೆಚ್ಚರಿಕೆ ಅವಶ್ಯ. ಈ ಸಂದರ್ಭದಲ್ಲಿ ನಮ್ಮ ಭಾರತೀಯ ಪದ್ಧತಿಯ ಆಹಾರಗಳು, ಪ್ರಾಣಾಯಾಮದಂತಹ ಯೋಗಾಭ್ಯಾಸಗಳು, ಆಯುರ್ವೇದ ಹಾಗೂ ಇನ್ನಿತ್ಯಾದಿ ಅನುಕೂಲಕರವಾದಂತಹ ಔಷಧಿಗಳನ್ನು ಉಪಯೋಗ ಮಾಡುವುದರಿಂದ ನಿಯಂತ್ರಣ ಸಾಧ್ಯವಾಗಬಹುದು. ಕೆಲವೇ ದಿನಗಳಲ್ಲಿ ಈ ರೋಗವು ನಿಯಂತ್ರಣಕ್ಕೆ ಬರಲಿ ಎಂದು ಆರಾಧ್ಯದೇವರನ್ನು ಪ್ರಾರ್ಥಿಸುತ್ತೇವೆ.