ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ
|| ಜೈ ಗುರುದೇವ್ ||
“ಪರೋಕಾರ ಮನೋಭಾವದ ಜೊತೆ ಮಾನವೀಯ ಮೌಲ್ಯ ಬೆಳೆಸಿಕೊಂಡಾಗ ಸುಸಂಸ್ಕøತ ಸಮಾಜ ನಿರ್ಮಾಣ”
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ
“ಆತ್ಮವಿಶ್ವಾಸ ವೃದ್ಧಿಸಿಕೊಂಡು ಗ್ರಾಮದ ಜನರ ಭೇಟಿ, ಗುಂಪುಗಳ ರಚನೆ ಎಲ್ಲವನ್ನೂ ಪ್ರೀತಿಯಿಂದ ಮಾಡಿದಾಗ ಯಶಸ್ಸು. ಶಿಸ್ತು-ಸಂಯಮ, ಪರೋಪಕಾರದ ಮನೋಭಾವದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸುಸಂಸ್ಕøತ ಸಮಾಜ ನಿರ್ಮಾಣದ ಸೇನಾನಿಗಳಾಗಬೇಕು. ಸಂಸ್ಕಾರದಿಂದ ಮಾತ್ರ ಬದುಕು ಸುಂದರವಾಗಲು ಸಾಧ್ಯ. ಸಂಸ್ಕಾರಯುತ ಸಂಘಟನೆಯ ರೂವಾರಿಗಳಾಗಿ ನೀವೆಲ್ಲರೂ ಸಮಾಜದಲ್ಲಿ ಗುರುತಿಸ್ಪಡಬೇಕು. ನೀವು ಸೇವೆ ಮಾಡುವ ಸಂಸ್ಥೆಯ ಬೇರುಗಳನ್ನು ಗಟ್ಟಿಗೊಳಿಸುವ ಪ್ರಾಮಾಣಿಕ ಸೇವೆ ತಮ್ಮಿಂದಾಗಲಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಪ್ರಾಂಗಣದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಿಬ್ಬಂದಿಗಳ ಸಭೆ – ಸಂಸ್ಕøತಿ ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನಗೈದರು.
ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ನಿರ್ದೇಶಕ ವೇಣುಗೋಪಾಲ ಮಾರ್ಲ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಉಡುಪಿ ವಲಯ ಅಧ್ಯಕ್ಷರಾದ ಕೆ. ಪ್ರಭಾಕರ ಶೆಟ್ಟಿ, ಯಶವಂತ್ ವಿಟ್ಲ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಪಧ್ಮನಾಭ ಒಡಿಯೂರು ಇವರು ಉಪಸ್ಥಿತರಿದ್ದರು.
ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ ಇವರು ಯೋಜನೆಯ ಮುಂದಿನ ಕಾರ್ಯವೈಖರಿಯ ಬಗ್ಗೆ ಮಾತನಾಡಿದರು. ಯೋಜನಾ ನಿರ್ದೇಶಕ ಕಿರಣ್ ಉರ್ವ ಯೊಜನೆಯ ಬಗ್ಗೆ ಮಾಹಿತಿ ನೀಡಿದರು.
ವಿಸ್ತರಾಣಧಿಕಾರಿ ಯಶೋಧರ್ ಸಾಲ್ಯಾನ್ ಸ್ವಾಗತಿಸಿ, ಸಂಯೋಜಕಿ ಶ್ರೀಮತಿ ಕಾವ್ಯಲಕ್ಷ್ಮಿ ಧನ್ಯವಾದವಿತ್ತರು. ಸಂಯೋಜಕಿ ಶ್ರೀಮತಿ ಲೀಲಾ ಕಾರ್ಯಕ್ರಮ ನಿರೂಪಿಸಿದರು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಧ್ಯಾನ-ಪ್ರಾಣಾಯಾಮ, ಶ್ರೀಮಧ್ಬಗವದ್ಗೀತೆ, ಶ್ರೀ ಹನುಮಾನ್ ಚಾಲೀಸ ಪಠಣ, ನಾಮ ಸಂಕೀರ್ತನೆ ಜರಗಿತು.