ಸಮಾಜದ ಸಂಪೂರ್ಣ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಶ್ರೀ ಗುರುದೇವ ಪಬ್ಲಿಕ್ ಚ್ಯಾರಿಟೇಬಲ್ ಟ್ರಸ್ಟ್ (ರಿ.) ಕೆಲವೊಂದು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸಮಸ್ತ ಹಿತದ ಹಂಬಲವುಳ್ಳ ಸಮರ್ಥ ಸೇವಾರ್ಥಿಗಳಿಗೆ ಈ ಯೋಜನೆಗಳಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ರೂಪದಲ್ಲಿ ನೀಡಬಯಸುವ ಸಹಾಯಧನವನ್ನು ಕೃತಜ್ಞತಾಪೂರ್ವಕ ಸ್ವೀಕರಿಸಲಾಗುವುದು. ಈ ಸಹಾಯಧನಕ್ಕೆ ಸರಕಾರದ ಆದಾಯ ತೆರಿಗೆ ವಿನಾಯಿತಿ (80-ಜಿ) ಇದೆ.

* ಅಕ್ಷರನಿಧಿ ಯೋಜನೆ : ಆರ್ಥಿಕವಾಗಿ ದುರ್ಬಲರಾಗಿದ್ದು, ಶಿಕ್ಷಣದಲ್ಲಿ ಆಸಕ್ತಿ ಇರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಕಾರ.

* ಅಕ್ಷಯನಿಧಿ (ನಾರಾಯಣ ಸೇವೆ) : ಶ್ರೀ ಸಂಸ್ಥಾನಕ್ಕೆ ಭೇಟಿ ನೀಡುವ ಭಕ್ತ ಜನತೆಗೆ ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ಪ್ರಸಾದ; ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಭೋಜನದ ವ್ಯವಸ್ಥೆ.

* ಆರೋಗ್ಯಧಾಮ ಯೋಜನೆ : ಔಷಧೀಯ ಸಸ್ಯಗಳ ಸಂರಕ್ಷಣೆ ಹಾಗೂ ಪುನರುಜ್ಜೀವನ, ಶ್ರೀ ಸಂಸ್ಥಾನದ ನೈರುತ್ಯ ಭಾಗದಲ್ಲಿರುವ ‘ಹನುಮಗಿರಿ’ಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು.

* ನವ ನಿಕೇತನ : ಆರ್ಥಿಕವಾಗಿ ಹಿಂದುಳಿದ, ಗೃಹ ನಿರ್ಮಾಣದ ಅಗತ್ಯವಿರುವವರಿಗೆ ಸಮುದಾಯ ಮನೆಗಳನ್ನು ನಿರ್ಮಿಸುವುದು, ಹಳೆ ಮನೆಗಳ ದುರಸ್ತಿಗೆ ಆರ್ಥಿಕ ಅಥವಾ ವಸ್ತು ರೂಪದ ಸಹಾಯ.

* ಗೋ ಸೇವಾ ಯೋಜನೆ : ಗೋ ಸಂರಕ್ಷಣೆ-ಸಮೃದ್ಧಿ. ಸಂಸ್ಕಾರ-ಸಹಕಾರ-ಸಂಘಟನೆ-ಸಮೃದ್ಧಿ ಎನ್ನುವ ಧ್ಯೇಯವನ್ನು ಅಳವಡಿಸಿಕೊಂಡು ಗ್ರಾಮೀಣ ಅಭಿವೃದ್ಧಿಯ ಪಥದಲ್ಲಿ ಈ ಮೇಲಿನ ಯೋಜನೆಗಳನ್ನು ಸೇವಾರ್ಥಿಗಳ ಸಹಾಯ-ಸಹಕಾರದೊಂದಿಗೆ ಹಂತಹಂತವಾಗಿ ಸಂಯೋಜಿಸಲಾಗುವುದು.

ಯೋಜನೆಗಳ ಸಾಕಾರಕ್ಕೆ ನಗದಾಗಿ ಸಹಕರಿಸುವವರು ಸೇವಾವಿಭಾಗದಲ್ಲಿ ಸಂದಾಯ ಮಾಡಬಹುದು.
 

ಬ್ಯಾಂಕ್ ಖಾತೆ ಸಂಖ್ಯೆ – 01662200028216 (ಐ ಫ್ ಸ್ ಸಿ ನಂಬರ್ : SYNB-40166 )– ಸಿಂಡಿಕೇಟ್ ಬ್ಯಾಂಕ್) 
ಅಥವಾ
ಬ್ಯಾಂಕ್ ಖಾತೆ ಸಂಖ್ಯೆ – 200201010005858 ( ಐ ಫ್ ಸ್ ಸಿ ನಂಬರ್ : VIJB-0002002) ವಿಜಯ ಬ್ಯಾಂಕ್, ಬಾಯಾರು ಶಾಖೆಗೆ ಸಂದಾಯ ಮಾಡಬಹುದು.
 
Help Us to Help Others. Together, yes WE can!