ಒಡಿಯೂರು ಶ್ರೀ ಸಂಸ್ಥಾನದಿಂದ ದಿನ ಬಳಕೆ ಸಾಮಾಗ್ರಿ ವಿತರಣೆ:
ಕರೋನಾ (ಕೋವಿಡ್-19)ದ ಪರಿಣಾಮ ಲಾಕ್ಡೌನ್ನಿಂದಾಗಿ ತೊಂದರೆಗೀಡಾದ ಜನತೆಗೆ ಸ್ಪಂದಿಸಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಿಂದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕರೋಪಾಡಿ ಗ್ರಾಮದ ಸಾವಿರಕ್ಕೂ ಮಿಕ್ಕಿ ಮನೆಗಳಿಗೆ ಅಕ್ಕಿ, ಸಕ್ಕರೆ, ಚಾಹುಡಿ, ಸಾಂಬಾರುಹುಡಿ ಇತ್ಯಾದಿ ದಿನ ಬಳಕೆಯ ವಸ್ತುಗಳನ್ನು ವಿತರಿಸಿದರು. ಸಕಾಲದಲ್ಲಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನಿರ್ದೇಶಕರಾದ ಶ್ರೀ ಕಿರಣ್ ಉರ್ವ, ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ರಘುರಾಮ ಶೆಟ್ಟಿ ಪಟ್ಲಗುತ್ತು, ಬಂಟ್ವಾಳ ತಾಲೂಕು ವಿಸ್ತರಣಾಧಿಕಾರಿ ಶ್ರೀ ಸದಾಶಿವ ಅಳಿಕೆ, ಶ್ರೀ ಸುಬ್ರಾಯ ದೇವಸ್ಥಾನ, ವಗೆನಾಡು ಕ್ಷೇತ್ರ ನಿರ್ವಹಣಾ ಸಮಿತಿಯ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು ಹಾಗೂ ಗ್ರಾಮ ಬಂಧುಗಳು ಮತ್ತು ಶ್ರೀ ಸಂಸ್ಥಾನದ ಕಾರ್ಯಕರ್ತರು ಸಹಕರಿಸಿದರು.