Category Spiritual

ಸಾಧು ಸಮಾವೇಶ

“ಹಿಂದೂ ಸಮಾಜ ಮುನ್ನಡೆಯಲು ಮೂಲ ಕಾರಣವೇ ಸಂತರು” ಸಾಧು ಸಮಾವೇಶ-ಧರ್ಮಸಂದೇಶ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ದ.11: “ನಿಷ್ಕಲ್ಮಶ ಭಕ್ತಿಗೆ ಭಗವಂತನೊಲಿಯುತ್ತಾನೆ. ತುಳು ತೇರಿನ ಮೂಲಕ ತುಳುನಾಡಿಗೆ ಒಡಿಯೂರು ಶ್ರೀಗಳ ಕೊಡುಗೆ ಅಪಾರ. ತುಳುನಾಡಿಗೆ ಮೇರು ಕಿರೀಟವಿಡುವ ಕಾರ್ಯವಾಗಿದೆ. ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ಪ್ರಸಿದ್ಧಿ ಪಡೆದಿರುವ ಒಡಿಯೂರು ಶ್ರೀಗಳಿಂದ ಇನ್ನಷ್ಟು ಸತ್ಕರ್ಮಗಳಾಗಲಿ. ಸಂತರಿಂದಾಗಿ ಇಂದು ಸಂಸ್ಕೃತಿ …

‘ಚಲನಶೀಲ ಬದುಕಿಗೆ ಆಧ್ಯಾತ್ಮದ ಬೆಳಕು ಅವಶ್ಯ’ – ಪೂಜ್ಯ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಕಾರ್ಯಕ್ರಮಗಳ ಸಮಾಲೋಚನಾ ಸಭೆಯಲ್ಲಿ ಒಡಿಯೂರು ಶ್ರೀ ಆಶೀರ್ವಚನ

ಒಡಿಯೂರು, ನ.05: “ಜನಸೇವೆಯೇ ಜನಾರ್ದನ ಸೇವೆ. ಮನುಷ್ಯನ ಬದುಕಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಮಾನವೀಯ ಮೌಲ್ಯವರ್ಧನೆಗೆ ಪೂರಕವಾಗಿ ಜ್ಞಾನವಾಹಿನಿ ನಿರಂತರ ನಡೆಯಲು ಚಾಲನೆ ನೀಡಿದ್ದೇವೆ. ಸುಖ-ದುಃಖವನ್ನು ಹಂಚಿ ಬಾಳಬೇಕು. ಇದರ ಸಮತೋಲನಕ್ಕೆ ಅಧ್ಯಾತ್ಮ ನಮಗೆ ಮುಖ್ಯ. ಚಲನಶೀಲ ಬದುಕಿಗೆ ಆಧ್ಯಾತ್ಮದ ಬೆಳಕು ಬೇಕು. ನಾವೆಲ್ಲರೂ ಒಂದೊಂದು ಬೆಳಕಾಗಬೇಕು. ಅಂಧಾಕಾರದ ಮಸಿಯನ್ನು ತೆಗೆದಾಗ ಅಧ್ಯಾತ್ಮದ ಬೆಳಕು ಬೆಳಗುತ್ತದೆ.…

“ವೈದ್ಯ ಮಾರ್ಗಕ್ಕೆ ಪ್ರವರ್ತಕರೇ ಶ್ರೀ ಧನ್ವಂತರೀ ದೇವರು” – ಒಡಿಯೂರು ಶ್ರೀ

ನ.02: “ವೈದ್ಯಮಾರ್ಗಕ್ಕೆ ಪ್ರವರ್ತಕರೇ ವಿಷ್ಣುವಿನ ಅವತಾರಿ ಶ್ರೀ ಧನ್ವಂತರೀ ದೇವರು. ವಾತ, ಪಿತ್ತ, ಕಫಗಳಿಂದ ಬರುವ ರೋಗಗಳಿಗೆ ಧನ್ವಂತರೀ ದೇವರ ಆರಾಧನೆಯಿಂದ ಪರಿಹಾರ ಪ್ರಾಪ್ತಿಯಾಗುತ್ತದೆ. ನಮ್ಮ ಮನಸ್ಸಿಗೆ ಮತ್ತು ಆಹಾರಕ್ಕೆ ನಿಕಟವಾದ ಸಂಬಂಧವಿದೆ. ಆಹಾರವನ್ನು ಸೇವಿಸುವಾಗ ಔಷಧವೆಂದೇ ಭಾವಿಸಬೇಕು. ಆಗ ಮಾತ್ರ ಶರೀರದ ಬೆಳವಣಿಗೆಗೆ ಪೂರಕವಾಗುತ್ತದೆ. ಹಿತ-ಮಿತ-ಋತುಗಳಿಗೆ ಸರಿಯಾಗಿ ಉಣ್ಣುವುದರಿಂದ ಆದಿ-ವ್ಯಾದಿಗಳಿಗೆ ಕಡಿವಾಣ ಹಾಕಬಹುದು; ಆರೋಗ್ಯವನ್ನೂ…

“ಅಂತರಂಗದ ಆನಂದ ಅನುಭವಿಸಲು ಅಂತರ್‍ದೃಷ್ಟಿ ಅವಶ್ಯ” – ಒಡಿಯೂರು ಶ್ರೀ

ಕನ್ಯಾನದಲ್ಲಿ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ “ಪಂಚೇಂದ್ರಿಯಗಳಲ್ಲಿ ಶ್ರೇಷ್ಠವಾದುದು ಕಣ್ಣು. ಆಧುನಿಕ ಉಪಕರಣಗಳ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಅತಿಯಾಗಿದೆ. ಬಾಹ್ಯ ಕಣ್ಣಿಗಿಂತ ಜ್ಞಾನದ ದೃಷ್ಟಿ ಅಗತ್ಯವಾಗಿ ಮನುಷ್ಯನಿಗೆ ಬೇಕು. ಅಂತರಂಗದ ಆನಂದ ಅನುಭವಿಸಲು ಅಂತರ್‍ದೃಷ್ಟಿಯು ಅವಶ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ…

“ನಾವೆಲ್ಲರೂ ಧರ್ಮ ಸೇನಾನಿಗಳಾಗೋಣ” – ಶ್ರೀ ಲಲಿತಾ ಪಂಚಮಿ ಮಹೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

ಅ.10: “ತ್ಯಾಗಪೂರ್ಣ ಸೇವೆಗೆ ಬಹಳ ಪ್ರಾಮುಖ್ಯತೆ ಇದೆ. ಧರ್ಮಾಚರಣೆಯ ಮೂಲಕ ಜಾಗೃತಗೊಳಿಸುವ ಕಾರ್ಯ ನಿರಂತರವಾಗಬೇಕು. ದೇಶದ ರಕ್ಷಣೆಗೆ ರಾಷ್ಟ್ರ ಸೇನಾನಿಗಳು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಆರೋಗ್ಯ ಸೇನಾನಿಗಳಂತೆ ನಾವೆಲ್ಲರೂ ಧರ್ಮ ಸೇನಾನಿಗಳಾಗೋಣ. ಸದಾಚಾರವಿಲ್ಲದೆ ಧರ್ಮವಿಲ್ಲ. ಸದಾಚಾರದಿಂದಲೇ ಆರೋಗ್ಯ, ಸಂಪತ್ತು ವೃದ್ಧಿ ಸಾಧ್ಯ. ಸಮಾಜದಲ್ಲಿ ಅನೇಕ ವಿಚಾರಗಳು ವೈರಲ್ ಆಗುವುದಿದೆ. ಆದರ್ಶ ಸಮಾಜ ನಿರ್ಮಾಣಕ್ಕೆ ಪೂರಕವಾದ ಧಾರ್ಮಿಕ…

“ಪಾರದರ್ಶಕತೆಯ ವ್ಯವಹಾರದಿಂದ ಸಹಕಾರಿಯು ಯಶಸ್ಸನ್ನು ಸಾಧಿಸಬಹುದು”- ಒಡಿಯೂರು ಶ್ರೀ

“ಸಹಕಾರಿಯು ಯಶಸ್ಸು ಸಾಧಿಸಲು ವ್ಯವಹಾರದಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ವ್ಯವಹಾರದಲ್ಲಿ ಒಂದು ಬಾಹ್ಯ ಮತ್ತು ಇನ್ನೊಂದು ಅಂತರಂಗದ ವ್ಯವಹಾರ. ಲೌಕಿಕ ಬದುಕಿನಲ್ಲಿ ಬಾಹ್ಯ ವ್ಯವಹಾರದೊಂದಿಗೆ ಹೃದಯ ಶ್ರೀಮಂತಿಕೆ ಬೆಳೆಸಿಕೊಂಡಾಗ ಒಳಿತನ್ನು ಕಾಣಲು ಸಾಧ್ಯ. ಇದರಲ್ಲಿ ಸಮಾಜಮುಖಿ ಚಿಂತನೆ ಮತ್ತು ಪರಿಶುದ್ಧತೆ ಇರಬೇಕು. ಅಧ್ಯಾತ್ಮದ ಬದುಕಿಗೆ ಒಂದೇ ಉದ್ದೇಶ, ಸಮಾಜೋದ್ಧಾರಕ್ಕೆ ವಿವಿಧೋದ್ದೇಶ ಬೇಕು. ಇವೆಲ್ಲವೂ ನಮ್ಮ ಮನಸ್ಸಿನ…

“ಮೋಹ ಕ್ಷಯವಾಗದೆ ಮೋಕ್ಷ ದೊರಕದು” – ಒಡಿಯೂರು ಶ್ರೀ

  “ಬದುಕಿನಲ್ಲಿ ಬುದ್ಧಿ-ಸಿದ್ಧಿ, ಲಾಭ-ಶುಭಕ್ಕೆ ಗಣಪತಿ ಆರಾಧನೆ ಅಗತ್ಯ. ಜಲಾಧಿಪತಿಯಾದಂತಹ ಗಣಪತಿಯನ್ನು ಅರಸಿನ, ಗೋಮಯದಲ್ಲಿಯೂ ತಯಾರು ಮಾಡಿ ಆರಾಧಿಸುವುದಿದೆ. ನಮ್ಮಲ್ಲಿ ದೇವತ್ವವನ್ನು ತುಂಬಿಸಿಕೊಳ್ಳುವುದೇ ಆರಾಧನೆಯ ಉದ್ದೇಶ. ಅರ್ಥ, ಕಾಮದ ಮೋಹದಿಂದಾಗಿ ಧರ್ಮವನ್ನು ಮರೆಯಬಾರದು. ಅದು ನಮ್ಮನ್ನು ಅಧಃಪತನಕ್ಕೆ ಕೊಂಡೊಯ್ಯುತ್ತದೆ. ಮೋಹ ಕ್ಷಯವಾಗದೆ ಮೋಕ್ಷ ದೊರಕದು. ನಮ್ಮನ್ನೆಲ್ಲ ಸಂರಕ್ಷಣೆ ಮಾಡುವವನೇ ಗಣಪತಿ. ವಿಶ್ವವನ್ನೇ ಆವರಿಸಿರುವಂತಹ ರೋಗ ಒಂದೆಡೆಯಾದರೆ…