ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಜಯಂತಿ
ಅ.22: “ಆಯುಷ್ಯ, ಆರೋಗ್ಯ, ಯಶಸ್ಸು ಕರುಣಿಸುವವನೇ ಧನ್ವಂತರೀ. ಜಲೂಕವನ್ನು ಧರಿಸಿ ಅವತರಿಸಿದ ಧನ್ವಂತರೀ ದೇವರನ್ನು ಕಂಡಾಗ ಎಲ್ಲ ಗಿಡಗಳಲ್ಲಿಯೂ ಔಷಧೀಯ ಗುಣವಿದೆ ಎಂಬುದನ್ನು ತಿಳಿಯಬಹುದು. ನಾವು ಸೇವಿಸುವ ಆಹಾರವೇ ಔಷಧಿಯಾಗಬೇಕು. ವಾರಕ್ಕೊಂದು ಉಪವಾಸ ಮಾಡಲು ದಾಸರು ತಿಳಿಸಿದ್ದಾರೆ. ಇದರ ಉದ್ದೇಶವೇ ಆರೋಗ್ಯವನ್ನು ಕಾಪಿಡುವುದಾಗಿದೆ. ಧನ್ವಂತರೀ ಜಯಂತಿಯ ಆಚರಣೆ ಸಂಸ್ಕೃತಿಯನ್ನು ಉಳಿಸುವುದಾಗಿದೆ. ಸಂಸ್ಕೃತಿಯನ್ನು ಬೆಳೆಸಬೇಕಾದರೆ ಸಂಸ್ಕಾರ ಅಗತ್ಯ.…