‘ಭಗವಂತ ನೀಡಿದ ಆಯುಷ್ಯವನ್ನು ಸನ್ನಡತೆ-ಸತ್ಕರ್ಮದಲ್ಲಿ ಕಳೆಯೋಣ’- ಪೂಜ್ಯ ಶ್ರೀಗಳವರ ಜನ್ಮದಿನೋತ್ಸವದ ಪ್ರಯುಕ್ತ ಗುರುವಂದನಾ ಸಮಾರಂಭದಲ್ಲಿ – ಒಡಿಯೂರು ಶ್ರೀ ಆಶೀರ್ವಚನ
“ತ್ಯಾಗದ ಬದುಕಿನಲ್ಲಿ ನಿಜವಾದ ಸುಖವಿದೆ. ಬದುಕು ಬದುಕಾಗಲು ಅಧ್ಯಾತ್ಮ ಅಗತ್ಯ. ಧರ್ಮದ ಚೌಕಟ್ಟಿನಲ್ಲಿ ಶ್ರೇಯಸ್ಸಿನ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಭಗವಂತ ನೀಡಿದ ಆಯುಷ್ಯವನ್ನು ಸನ್ನಡತೆ, ಸತ್ಕರ್ಮದಲ್ಲಿ ಕಳೆಯಬೇಕು. ಆತ್ಮೋನ್ನತಿಯ ಜೊತೆಗೆ ಸಮಾಜೋನ್ನತಿಯೂ ಆಗಬೇಕು. ಆತ್ಮನಿಷ್ಠ ಸಂಸ್ಕøತಿಯಿಂದ ಯಾವುದೇ ಅಪಾಯ ಆಗದು. ಇಂದು ಆಟಿ ಅಮಾವಾಸ್ಯೆಯ ದಿನ. ಸಪ್ತವರ್ಣ(ಹಾಲೆ) ಮರದ ರಸದಲ್ಲಿ…