“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” – ಒಡಿಯೂರು ಶ್ರೀ ಆಶೀರ್ವಚನ
“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” ಶ್ರೀ ದತ್ತ ಜಯಂತ್ಯುತ್ಸವ-ಹರಿಕಥಾ ಸತ್ಸಂಗ ಸಪ್ತಾಹ ಸಮಾರೋಪದಲ್ಲಿ ಒಡಿಯೂರು ಶ್ರೀ ಆಶೀರ್ವಚನ ದ. 18.: “ಗುರುದೇವರ ಜಯಂತಿ ಉತ್ಸವ ತತ್ತ್ವಾದರ್ಶಗಳಿಗೆ ಶಕ್ತಿ ತುಂಬಲಿದೆ. ಮೋಹ ಕ್ಷಯವಾಗದೆ ಮೋಕ್ಷ ಪ್ರಾಪ್ತಿಯಾಗದು. ದತ್ತತತ್ತ್ವ ಶ್ರೇಷ್ಠವಾದದ್ದು. ವಿಶ್ವಮಾನವಧರ್ಮದ ತತ್ತ್ವ ದತ್ತತತ್ತ್ವದಲ್ಲಿ ಅಡಗಿದೆ. ಭಾರತೀಯ ಸಂಸ್ಕøತಿ ಉಜ್ಜೀವನದ ಮೂಲ. ಆತ್ಮನಿಷ್ಠ ಸಂಸ್ಕøತಿ ಭಾರತೀಯತೆಯಲ್ಲಿ…