Category News Reports

ಒಡಿಯೂರು ಶ್ರೀಗಳ ಸಂತಾಪ

ಮಡಿಯಾಳ ನಾರಾಯಣ ಭಟ್ಟರ ಬಳಿಕ ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಆದುನಿಕ ಶೈಕ್ಷಣಿಕ ಕ್ರಾಂತಿಯ ಹರಿಕಾರ, ಅನುಪಮ ತ್ಯಾಗಜೀವಿ ಶ್ರೀ ಯು. ಗಂಗಾಧರ ಭಟ್ ಅವರ ನಿಧನಕ್ಕೆ ವಿಷಾಧಿಸಿ, ಅಗಲಿದ ದಿವ್ಯಾತ್ಮಕ್ಕೆ ಆರಾಧ್ಯದೇವರು ಚಿರಶಾಂತಿಯನ್ನು ಕರುಣಿಸಲೆಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಪ್ರಾರ್ಥಿಸಿ ಸಂತಾಪ…

ಒಡಿಯೂರು ಸಂಸ್ಥಾನದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ವೇ| ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ನಡೆಯಿತು. ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. 

“ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯವೂ ಅಲ್ಲ”-ಒಡಿಯೂರುಶ್ರೀ

ಸ್ವಾತಂತ್ರ್ಯ ವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯ ವೂ ಅಲ್ಲ, ಸುವ್ಯವಸ್ಥಿತ ವಾದ ಆಡಳಿತಕ್ಕೆ ಪ್ರಜ್ಞಾವಂತ ಪ್ರಜೆಗಳಿಂದ ಸಾಧ್ಯ. ದೇಶದ ಉನ್ನತಿಯು ದೇಶದ ಕೌಶಲ್ಯಯುತ ಜನರಿಂದ ಅವಲಂಬಿಸಿದೆ,ದೇಶದ ಬಲಿಷ್ಠ ತೆಗೆ ಬೇಕಾದ ರೂಪುರೇಷೆ ಗಳ ತಯಾರಿ ಹಾಗೂ ದೇಶದ ಸಂರಕ್ಷಣೆ ಪ್ರತಿಯೊಬ್ಬರ ಪ್ರಜೆಯ ಕರ್ತವ್ಯ. ಬದುಕು ಶಿಕ್ಷಣದ ಅಗತ್ಯಕ್ಕಾಗಿ ಒಂದರಿಂದ ಐದನೆಯ ತರಗತಿಯವರೆಗೆ ಮಾತೃ ಶಿಕ್ಷಣ…

“ಪ್ರಜ್ಞಾವಂತ ಪ್ರಜೆಗಳಿಂದಲೇ ಆದರ್ಶ ರಾಷ್ಟ್ರ” –ಒಡಿಯೂರು ಶ್ರೀ

“ದಾಸ್ಯದಿಂದ ಮುಕ್ತವಾಗಿರುವುದೇ ಸ್ವಾತಂತ್ರ್ಯ. ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ಸುವ್ಯವಸ್ಥಿತವಾದ ಆಡಳಿತ ನೋಡಬೇಕಾದರೆ ಪ್ರಜ್ಞಾವಂತ ಪ್ರಜೆಗಳಿರಬೇಕು. ಆಗಲೇ ಆದರ್ಶ ರಾಷ್ಟ್ರವಾಗುವುದು. ಧರ್ಮದಂಡದ ಮೂಲಕ ಆಡಳಿತ ನಡೆಸಿದಾಗ ಅಹಂಕಾರವಿರುವುದಿಲ್ಲ. ರಾಜ ದಂಡ, ಧರ್ಮದಂಡ ಎರಡೂ ಅವಶ್ಯಕ. ಧರ್ಮವನ್ನು ಮರೆತ ರಾಜನಿಗೂ ಉಳಿಗಾಲವಿಲ್ಲ. ದೇಶದ ಬಲಿಷ್ಠತೆಗೆ, ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಭಾರತದ ದೇಶದ ಅಡಿಪಾಯವೇ ಅಧ್ಯಾತ್ಮಿಕತೆ. ಇದರಿಂದಾಗಿ ಭಾರತಕ್ಕೆ ಯಾವುದೇ ಅಪಾಯವಿಲ್ಲ.…

2019-20ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ

2019-20ನೇ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶ್ರೀಗುರುದೇವ ಆಂಗ್ಲ ಮಾಧ್ಯಮ ಶಾಲೆಯು ಶೇಕಡಾ 100 ಫಲಿತಾಂಶವನ್ನು ದಾಖಲಿಸಿರುತ್ತದೆ ಮತ್ತು ಶ್ರೀ ಗುರುದೇವ ಕನ್ನಡ ಮಾಧ್ಯಮ ಶಾಲೆಯು ಶೇಕಡಾ 80 ರ ಫಲಿತಾಂಶವನ್ನು ಪಡೆದಿರುತ್ತದೆ. 4 ವಿದ್ಯಾರ್ಥಿಗಳು A+ ಗ್ರೇಡ್ ಹಾಗೂ 7ವಿದ್ಯಾರ್ಥಿಗಳು A ಗ್ರೇಡ್‍ಗಳನ್ನು ಪಡೆದಿರುತ್ತಾರೆ. ಆಂಗ್ಲಮಾದ್ಯಮದಲ್ಲಿ ಜಿತೇಶ್ ಪಿ ಶೆಟ್ಟಿ…

ಒಡಿಯೂರು ಶ್ರೀ ಸಂಸ್ಥಾನದಿಂದ ಮುದ್ದುಕೃಷ್ಣ ವೇಷ ಸ್ಪರ್ಧೆ

ಕೃಷ್ಣ ಸಂಸ್ಕೃತಿಯ ದ್ಯೋತಕ. ಸಂಸ್ಕೃತಿಯ ಬೆಳಕು ರಾಮ-ಕೃಷ್ಣರು. ಮಕ್ಕಳನ್ನು ಸಂಸ್ಕೃತಿಯ ಉಳುವಿನ ಹರಿಕಾರರನ್ನಾಗಿ ಬೆಳೆಸಬೇಕು. ಆ ಮೂಲಕ ಭವ್ಯ ಭಾರತ ನಿರ್ಮಾಣದ ಭವಿಷ್ಯ ಬರೆಯುವಂತಾಗಬೇಕು. ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಗುರುಬಂಧುಗಳು ತಮ್ಮ ತಮ್ಮ ಮನೆಯಲ್ಲೇ ಆಚರಿಸಿ ಸಂಭ್ರಮಿಸಬೇಕೆಂದು ಒಡಿಯೂರು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಸಂದೇಶ ನೀಡಿದ್ದಾರೆ. ಶ್ರೀ ಸಂಸ್ಥಾನದಲ್ಲಿ ಮುದ್ದುಕೃಷ್ಣ…

ರಾಮಮಂದಿರ ಶಿಲಾನ್ಯಾಸದ ಸವಿನೆನಪಿಗೆ ಒಡಿಯೂರು ಶ್ರೀಗಳವರಿಂದ ಕದಂಬವನಕ್ಕೆ ಚಾಲನೆ

ಕೋಟಿ ಕೋಟಿ ಭಾರತೀಯರ ಕನಸಾದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಭೂಮಿಪೂಜೆ ಸಂಪನ್ನಗೊಳ್ಳುತ್ತಿರುವ ಐತಿಹಾಸಿಕ ಸುಮುಹೂರ್ತದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು “ಶ್ರೀ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲಿ, ಈ ಐತಿಹಾಸಿಕ ದಿನದ ಸವಿನೆನಪಿಗಾಗಿ ಒಡಿಯೂರು ಶ್ರೀ ಸಂಸ್ಥಾನದ ಪರಿಸರದಲ್ಲಿ ‘ಕದಂಬವನ’ವನ್ನು…

‘ಶ್ರೀರಾಮ ಮಂದಿರ ನಿರ್ಮಾಣ; ಧರ್ಮದ ಪುನರುತ್ಥಾನ’ – ಒಡಿಯೂರು ಶ್ರೀ

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ನಿರ್ಮಾಣಕ್ಕೆ ಮುಹೂರ್ತ ನಿಗದಿಯಾಗಿರುವುದು, ರಾಮಭಕ್ತರ ಅರ್ಥಾತ್ ಪ್ರಜ್ಞಾವಂತ ಪ್ರಜೆಗಳ ಕನಸು ನನಸಾಗುವ ಸಮಯ ಒದಗಿಬಂದಿರುವುದು ಸಂತಸದ ವಿಚಾರ. ಭಾರತೀಯ ಪರಂಪರೆಯಲ್ಲಿ ರಾಮಾಯಣ-ಮಹಾಭಾರತ ಸಂಸ್ಕøತಿಯ ಕಣ್ಣುಗಳಿದ್ದಂತೆ. ‘ರಾಮ’ ಎನ್ನುವ ಎರಡಕ್ಷರವೇ ಅದ್ಭುತವಾದುದು. ಪರಿಶುದ್ಧವಾದ ಆಕಾಶ, ಅಗ್ನಿ, ವಾಯು ತತ್ತ್ವಗಳ ಚಿಂತನೆಯು ಅಡಗಿರುವುದಲ್ಲದೆ ಪಂಚಭೂತಾತ್ಮಗಳ ಸರ್ವಸ್ವವೂ ಇದರಲ್ಲಿದೆ. ಸುಲಲಿತವಾಗಿ ‘ರಾಮ’ ಎನ್ನಲು ಅನುಕೂಲವಾದುದು.…

ಒಡಿಯೂರು ಶ್ರೀಗಳ ಸಂತಾಪ

ವಿಟ್ಲ ಅರಸರೆಂದೇ ಪ್ರಖ್ಯಾತರಾದ, ಒಡಿಯೂರು ಶ್ರೀ ಸಂಸ್ಥಾನದ ಮುಖ್ಯ ಅಭಿಮಾನಿಗಳೂ ಆದ ಶ್ರೀಯುತ ಜನಾರ್ದನ ವರ್ಮ ಅರಸರು ದೈವಾಧೀನರಾಗಿರುವುದು ಬೇಸರದ ಸಂಗತಿ. ಇವರ ಕಾಲಾವಧಿಯಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿರುವುದು ಅಲ್ಲದೆ ವಿಟ್ಲ ಸೀಮೆಯಲ್ಲಿ ಹಲವಾರು ದೇವಸ್ಥಾನಗಳು ಜೀರ್ಣೋದ್ಧಾರಗೊಂಡಿರುವುದು ಸ್ಮರಣೀಯ. ಸರಳ ವ್ಯಕ್ತಿತ್ವದ, ಮೃಧು ನಡೆ-ನುಡಿಯ, ಅರಸೊತ್ತಿಗೆಯನ್ನು ಕರ್ತವ್ಯವೆಂದು ಪಾಲಿಸಿಕೊಂಡು ಬಂದಿರುವುದು…