Category News Reports

ಶ್ರೀ ಹನುಮೋತ್ಸವದ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

“ಮಕ್ಕಳಲ್ಲಿ ಭಾರತೀಯತೆಯ ಬೀಜ ಬಿತ್ತುವ ಕಾರ್ಯ ಮಾಡೋಣ” ಶ್ರೀ ಹನುಮೋತ್ಸವದ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಎ.16: “ಗುರುತತ್ತ್ವದ ಬೋಧನೆ ಅತೀ ಅಗತ್ಯ. ಆಕಾಶತತ್ತ್ವ ಶುದ್ಧವಾಗಿರು ವಂತದ್ದು. ಅದಕ್ಕೆ ಹೃದಯದ ಗುಣವಿದೆ. ಧರ್ಮಯುಕ್ತ ಕರ್ಮ ಜೀವನದಲ್ಲಿ ಅಳವಡಿಕೆಯಾಗಬೇಕು. ಇದರಿಂದ ಯಾವುದೇ ಅಪಾಯವಿಲ್ಲ. ರಾಮಾಯಣವು ಭಾರತೀಯ ಸಂಸ್ಕøತಿಯ ಕಣ್ಣು. ಬದುಕು ರೂಪಿಸಲು ಇದು ಸಹಕಾರಿ. ಇಂದಿನ ಕಾಲಘಟ್ಟದಲ್ಲಿ…

ಒಡಿಯೂರು: ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ

ಒಡಿಯೂರು, ದ.12: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.12-12-2021ರಿಂದ ತಾ.18-12-2021ರ ತನಕ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನಡೆಯಲಿರುವ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹಕ್ಕೆ ಪೂಜ್ಯ ಶ್ರೀಗಳವರು ದೀಪೋಜ್ವಲನದ ಮೂಲಕ ಚಾಲನೆ ನೀಡಿದರು. ಗುರುಭಕ್ತರಿಗೆ ಶ್ರೀದತ್ತ ಮಾಲಾಧಾರಣೆ ಮಾಡಿ ಅನುಗ್ರಹ ಸಂದೇಶ…

“ವೈದ್ಯ ಮಾರ್ಗಕ್ಕೆ ಪ್ರವರ್ತಕರೇ ಶ್ರೀ ಧನ್ವಂತರೀ ದೇವರು” – ಒಡಿಯೂರು ಶ್ರೀ

ನ.02: “ವೈದ್ಯಮಾರ್ಗಕ್ಕೆ ಪ್ರವರ್ತಕರೇ ವಿಷ್ಣುವಿನ ಅವತಾರಿ ಶ್ರೀ ಧನ್ವಂತರೀ ದೇವರು. ವಾತ, ಪಿತ್ತ, ಕಫಗಳಿಂದ ಬರುವ ರೋಗಗಳಿಗೆ ಧನ್ವಂತರೀ ದೇವರ ಆರಾಧನೆಯಿಂದ ಪರಿಹಾರ ಪ್ರಾಪ್ತಿಯಾಗುತ್ತದೆ. ನಮ್ಮ ಮನಸ್ಸಿಗೆ ಮತ್ತು ಆಹಾರಕ್ಕೆ ನಿಕಟವಾದ ಸಂಬಂಧವಿದೆ. ಆಹಾರವನ್ನು ಸೇವಿಸುವಾಗ ಔಷಧವೆಂದೇ ಭಾವಿಸಬೇಕು. ಆಗ ಮಾತ್ರ ಶರೀರದ ಬೆಳವಣಿಗೆಗೆ ಪೂರಕವಾಗುತ್ತದೆ. ಹಿತ-ಮಿತ-ಋತುಗಳಿಗೆ ಸರಿಯಾಗಿ ಉಣ್ಣುವುದರಿಂದ ಆದಿ-ವ್ಯಾದಿಗಳಿಗೆ ಕಡಿವಾಣ ಹಾಕಬಹುದು; ಆರೋಗ್ಯವನ್ನೂ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಧನ್ವಂತರೀ ಹವನ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನ.2ರಂದು ಮಂಗಳವಾರ ಬೆಳಿಗ್ಗೆ ಶ್ರೀ ಧನ್ವಂತರಿ ಜಯಂತಿಯ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ಧನ್ವಂತರೀ ಹವನ ಪೂಜ್ಯ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವುದು.

ಒಡಿಯೂರು ಶ್ರೀಗಳವರ ಮುಂಬೈ ಪ್ರವಾಸ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಅಕ್ಟೋಬರ 27 ಮತ್ತು 28ರಂದು ಮುಂಬೈ ಪ್ರವಾಸದಲ್ಲಿರುತ್ತಾರೆ. ಸದ್ರಿ ದಿನಗಳಲ್ಲಿ ಸಾರ್ವಜನಿಕ ಭೇಟಿಗೆ ಶ್ರೀ ಸಂಸ್ಥಾನದಲ್ಲಿ ಲಭ್ಯರಿರುವುದಿಲ್ಲ.

“ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶರದೃತು ಸಂಸ್ಕಾರ ಶಿಬಿರ 2021 ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ

ಅ.11: “ಮಕ್ಕಳೆಲ್ಲರೂ ಸಾಮಾನ್ಯರಲ್ಲ, ಅಸಾಮಾನ್ಯರು. ಭವ್ಯ ಭಾರತ ನಿರ್ಮಾಣದ ರೂವಾರಿಗಳು. ದೇಶ ಪ್ರೇಮ ಹೇಗೆ ಬೆಳೆಸಿಕೊಳ್ಳಬೇಕು? ಬದುಕನ್ನು ರೂಪಿಸಲು ಬೇಕಾದಂತಹ ವಿಚಾರಗಳು ತಿಳಿಯಬೇಕಾದರೆ ಸಂಸ್ಕಾರ ಶಿಕ್ಷಣ ಅಗತ್ಯ. ಆ ಮೂಲಕ ಆದರ್ಶ ರಾಷ್ಟ್ರ ನಿರ್ಮಾಣವಾಗಬಹುದು. ಸಂಸ್ಕøತಿಯ ಅಂತರ್ಯವೇ ಸಂಸ್ಕಾರ. ಮಾತು ಎಂದರೆ ವ್ಯಕ್ತಿತ್ವದ ಕೈಗನ್ನಡಿ. ವ್ಯಕ್ತಿತ್ವ ವಿಕಸನವೇ ಶಿಬಿರದ ಮುಖ್ಯ ಉದ್ದೇಶ. ಮಾತು ಮನಸ್ಸು ಹತ್ತಿರವಾಗಿರುವಂತದ್ದು.…

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ – ಎಸ್.ಎಸ್.ಎಲ್.ಸಿ. ಆಂಗ್ಲ ಮಾಧ್ಯಮ ಶಾಲೆ 100% ಫಲಿತಾಂಶ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆ 100% ಫಲಿತಾಂಶ ದಾಖಲಿಸಿದ್ದು, ದೀಪಶ್ರೀ – 619 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಮೈತ್ರಿ ಕೆ. – 605, ಶ್ರೇಯಸ್ – 603, ಹರ್ಷಿತಾ ಡಿ’ಸೋಜ – 601, ಪ್ರಥಮ್ ಶೆಟ್ಟಿ – 598, ಶೃಜನ್ ಸಿ.- 593, ರಜತ್…