Category News Reports

“ತ್ಯಾಗದಿಂದ ಕೂಡಿದ್ದರೆ ಬದುಕು ಸಾರ್ಥಕ” ಶ್ರೀ ದತ್ತಮಾಲಾಧಾರಣೆಗೈದು ಒಡಿಯೂರು ಶ್ರೀ ಆಶೀರ್ವಚನ

“ಬೋಗದ ಬದುಕು ನಿಜಾರ್ಥದ ಬದುಕಲ್ಲ. ತ್ಯಾಗದಿಂದ ಕೂಡಿದ್ದರೆ ಮಾತ್ರ ಬದುಕು ಸಾರ್ಥಕವೆನಿಸುತ್ತದೆ. ಸಮರಸ ತತ್ತ್ವವೆನಿಸಿದ ಗುರುತತ್ತ್ವ ಪ್ರತಿಯೊಬ್ಬರ ಬದುಕಿನಲ್ಲಿಯೂ ಅನುಷ್ಠಾನವಾಗಬೇಕಿದೆ. ಸಮುದ್ರದ ವಾತಾವರಣ ವ್ಯತ್ಯಯವಾದಾಗ ಸುನಾಮಿಗಳು ಏಳುವಂತೆ ನಮ್ಮ ಶರೀರದಲ್ಲಿ ಕಾಮ, ಕ್ರೋಧಗಳು ಅಧಿಕವಾದಾಗಲೂ ತ್ರಿಕರಣಾದಿಯಾಗಿ ಎಲ್ಲವೂ ಏರುಪೇರಾಗಬಹುದು. ಬದುಕಿನ ಅಥ್ ಅರಿವಾದಾಗ ನಾವು ಉತ್ತಮರಾಗುತ್ತೇವೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು…

“ಕಾನೂನಿನಲ್ಲಿ ಕಠಿಣತೆ ಇಲ್ಲದಿದ್ದರೆ ಅನಾಹುತ ಹೆಚ್ಚಾಗುತ್ತದೆ”- ಒಡಿಯೂರು ಶ್ರೀ

“ರಾಮಾಯಣ, ಮಹಾಭಾರತದಂತಹ ಪುರಾಣಗಳು ಯಕ್ಷಗಾನ ಕಲೆಯ ಮೂಲಕ ಹಳ್ಳಿಗಳ ಜನರನ್ನು ಮುಟ್ಟುತ್ತವೆ. ಯಕ್ಷಗಾನದ ಮೂಲಕ ಪ್ರಸಿದ್ಧಿ ಪಡೆದ ಅರ್ಹರಿಗೆ ಪ್ರಶಸ್ತಿ ನೀಡುವುದು ಅರ್ತಪೂರ್ಣವಾಗಿದೆ. ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳಲ್ಲಿ ಬರುವ ಅನೇಕ ರಕ್ಕಸರನ್ನು ನಾವು ಕಲೆಯ ಪ್ರೀತಿಯಿಂದ ನೋಡುತ್ತೇವೆ. ಇಂದಿಗೂ ದೇಶದಲ್ಲಿ ಅನೇಕ ಜಾತಿಯ ರಕ್ಕಸರು ಇದ್ದಾರೆ. ಸಜ್ಜನರಿಂದ ರಕ್ಕಸರ ಸಂಹಾರವೂ ಆಗುತ್ತಿರಬೇಕು. ಕಾನೂನಿನಲ್ಲಿ ಕಠಿಣತೆ ಇಲ್ಲದಿದ್ದರೆ…

ಮಾನವೀಯ ಮೌಲ್ಯಗಳನ್ನು ವೃದ್ಧಿಸಲು ಪ್ರವಚನ ಮಾಲಿಕೆ ಪೂರಕ – ಒಡಿಯೂರು ಶ್ರೀ

“ವಿಶ್ವ ಮಾನವ ಧರ್ಮದ ಪ್ರತಿಪಾದಕರಾಗಿ ದತ್ತಾತ್ರೇಯರು ಅವತರಿಸಿದರು. ಮಾನವೀಯ ಮೌಲ್ಯಗಳನ್ನು ವೃದ್ಧಿಸಲು ಪ್ರವಚನ ಮಾಲಿಕೆ ಪೂರಕ. ಅಂತರ್ಯದ ಕಡೆಗೆ ಗಮನಹರಿಸುವವರು ನಾವಾಗಬೇಕು. ಗುರುಗೀತೆ, ಅವಧೂತ ಗೀತೆಯಂತಹ ಕೃತಿಗಳು ನಮ್ಮ ಜೀವನಕ್ಕೆ ಅನುಕೂಲಕರವಾದ ವಿಚಾರವನ್ನು ತಿಳಿಸಿದೆ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂದೇಶ ನೀಡಿದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆಯುತ್ತಿರುವ ಶ್ರೀ ದತ್ತ…

‘ಶ್ರೀ ಗುರುಚರಿತಾಮೃತ ಪ್ರವಚನ’ಕ್ಕೆ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರಿಂದ ಚಾಲನೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಸಂದರ್ಭ ನಡೆದ ‘ಶ್ರೀ ಗುರುಚರಿತಾಮೃತ ಪ್ರವಚನ’ಕ್ಕೆ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರಿಂದ ಚಾಲನೆ. ಸಾಧ್ವಿ ಶ್ರೀ ಮಾತಾನಂದಮಯೀ, ಪೂಜ್ಯ ಶ್ರೀಗಳವರ ಮಾತೃಶ್ರೀ ಶ್ರೀಮತಿ ಅಂತಕ್ಕೆ, ಪ್ರವಚನಕಾರರಾದ ಪ್ರೊ. ಚಂದ್ರಪ್ರಭಾ ಆರ್. ಹೆಗ್ಡೆ, ಮುಂಬೈನ ಉದ್ಯಮಿ ವಾಮಯ್ಯ ಬಿ. ಶೆಟ್ಟಿ,…

ಆತ್ಮನಿಷ್ಠ ಸಂಸ್ಕೃ ತಿಯ ಸೊಬಗು ದತ್ತತತ್ತ್ವದಲ್ಲಿದೆ. – ಒಡಿಯೂರು ಶ್ರೀ

“ಆತ್ಮನಿಷ್ಠ ಸಂಸ್ಕೃತಿಯ ಸೊಬಗು ದತ್ತತತ್ತ್ವದಲ್ಲಿದೆ. ಅದೊಂದು ಸುಂದರವಾದ ಸಂಸ್ಕೃತಿ. ದತ್ತ ತತ್ತ್ವವೇ ಸಮರಸ ತತ್ತ್ವ. ಸಮರಸ ತತ್ತ್ವವೇ ಆತ್ಮ ತತ್ತ್ವ. ಆತ್ಮತತ್ತ್ವವನ್ನು ಅರಿತರೆ ಎಲ್ಲರಲ್ಲೂ ಭಗವಂತನಿದ್ದಾನೆ ಎಂಬ ಅರಿವು ನಮಗಾಗುತ್ತದೆ. ಆಗ ನಮ್ಮಿಂದ ಯಾವುದೇ ದುಷ್ಕರ್ಮಗಳು ಆಗುವುದಕ್ಕೆ ಸಾಧ್ಯವಿಲ್ಲ. ಅದೊಂದು ಅನುಭಾವದ ವಿಚಾರವಾಗಿದೆ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸಂದೇಶ ನೀಡಿದರು. ಒಡಿಯೂರು…

‘ಶಾಲೆಗಳ ಮೂಲಕ ರಾಷ್ಟ್ರ ಕಟ್ಟುವ ಕಾಯಕ ನಡೆಯಬೇಕು’ – ಒಡಿಯೂರು ಶ್ರೀ

  ‘ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ’ದ ವಾರ್ಷಿಕೋತ್ಸವವು ವಿಜೃಂಭಣೆಯಿಂದ ದಿನಾಂಕ 25.11.2019ನೇ ಸೋಮವಾರದಂದು ನಡೆಯಿತು. ಪೂಜ್ಯ ಸಾಧ್ವಿ ಶ್ರೀ ಮಾತಾನಂದಮಯಿಯವರು ದೀಪೋಜ್ವಲನೆಗೈದು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವದಿಸಿದರು. ಬಳಿಕ ಕ್ರಮವಾಗಿ ಶ್ರೀ ಗುರುದೇವ ಗುರುಕುಲದಿಂದ ತೊಡಗಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ಮನರಂಜನಾ ಕಾರ್ಯಕ್ರಮಗಳೊಂದಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. 11.00…

ದ. 5ರಿಂದ 11ರ ತನಕ ಶ್ರೀದತ್ತ ಜಯಂತ್ಯುತ್ಸವ – ಶ್ರೀ ದತ್ತ ಮಹಾಯಾಗ ಸಪ್ತಾಹ – ಯಕ್ಷಗಾನ ಬಯಲಾಟ ಸಪ್ತಾಹ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.05-12-2019 ರಿಂದ ತಾ.11-12-2019ರ ತನಕ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಮಾರ್ಗದರ್ಶನ ಹಾಗೂ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹವು ವಿವಿಧ ವೈದಿಕ – ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಸಾ೦ಸ್ಕೃತಿಕ ಕಾರ್ಯಕ್ರಮದಂಗವಾಗಿ ಯಕ್ಷಗಾನ ಬಯಲಾಟ ಸಪ್ತಾಹವು ಜರಗಲಿರುವುದು.…

ಒಡಿಯೂರು ಶ್ರೀ ಪುಣೆಗೆ

ಒಡಿಯೂರು ಶ್ರೀಗಳವರು ನ.18ರಿಂದ 22ರ ತನಕ ಪುಣೆ ಹಾಗೂ ಅಹಮದ್‍ನಗರಕ್ಕೆ ಭೇಟಿ ನೀಡಲಿದ್ದಾರೆ. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುಣೆ ಘಟಕವು ಪುಣೆ ಮಹಾನಗರದಲ್ಲಿ ಆಯೋಜಿಸಿರುವ ವಿವಿಧ ಗುರುವಂದನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ. ಸದ್ರಿ ದಿನಗಳಲ್ಲಿ ಒಡಿಯೂರು ಶ್ರೀ ಸಂಸ್ಥಾನದಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಿರುವುದಿಲ್ಲ.