Category Blogs

“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” – ಒಡಿಯೂರು ಶ್ರೀ ಆಶೀರ್ವಚನ

“ಭಜನೆಯಿಂದ ಮಾತ್ರ ಮನೆಗಳಲ್ಲಿ ಸುಜ್ಞಾನದ ಬೆಳಕು ಬೆಳಗುತ್ತದೆ” ಶ್ರೀ ದತ್ತ ಜಯಂತ್ಯುತ್ಸವ-ಹರಿಕಥಾ ಸತ್ಸಂಗ ಸಪ್ತಾಹ ಸಮಾರೋಪದಲ್ಲಿ ಒಡಿಯೂರು ಶ್ರೀ ಆಶೀರ್ವಚನ ದ. 18.: “ಗುರುದೇವರ ಜಯಂತಿ ಉತ್ಸವ ತತ್ತ್ವಾದರ್ಶಗಳಿಗೆ ಶಕ್ತಿ ತುಂಬಲಿದೆ. ಮೋಹ ಕ್ಷಯವಾಗದೆ ಮೋಕ್ಷ ಪ್ರಾಪ್ತಿಯಾಗದು. ದತ್ತತತ್ತ್ವ ಶ್ರೇಷ್ಠವಾದದ್ದು. ವಿಶ್ವಮಾನವಧರ್ಮದ ತತ್ತ್ವ ದತ್ತತತ್ತ್ವದಲ್ಲಿ ಅಡಗಿದೆ. ಭಾರತೀಯ ಸಂಸ್ಕøತಿ ಉಜ್ಜೀವನದ ಮೂಲ. ಆತ್ಮನಿಷ್ಠ ಸಂಸ್ಕøತಿ ಭಾರತೀಯತೆಯಲ್ಲಿ…

“ವೈದ್ಯ ಮಾರ್ಗಕ್ಕೆ ಪ್ರವರ್ತಕರೇ ಶ್ರೀ ಧನ್ವಂತರೀ ದೇವರು” – ಒಡಿಯೂರು ಶ್ರೀ

ನ.02: “ವೈದ್ಯಮಾರ್ಗಕ್ಕೆ ಪ್ರವರ್ತಕರೇ ವಿಷ್ಣುವಿನ ಅವತಾರಿ ಶ್ರೀ ಧನ್ವಂತರೀ ದೇವರು. ವಾತ, ಪಿತ್ತ, ಕಫಗಳಿಂದ ಬರುವ ರೋಗಗಳಿಗೆ ಧನ್ವಂತರೀ ದೇವರ ಆರಾಧನೆಯಿಂದ ಪರಿಹಾರ ಪ್ರಾಪ್ತಿಯಾಗುತ್ತದೆ. ನಮ್ಮ ಮನಸ್ಸಿಗೆ ಮತ್ತು ಆಹಾರಕ್ಕೆ ನಿಕಟವಾದ ಸಂಬಂಧವಿದೆ. ಆಹಾರವನ್ನು ಸೇವಿಸುವಾಗ ಔಷಧವೆಂದೇ ಭಾವಿಸಬೇಕು. ಆಗ ಮಾತ್ರ ಶರೀರದ ಬೆಳವಣಿಗೆಗೆ ಪೂರಕವಾಗುತ್ತದೆ. ಹಿತ-ಮಿತ-ಋತುಗಳಿಗೆ ಸರಿಯಾಗಿ ಉಣ್ಣುವುದರಿಂದ ಆದಿ-ವ್ಯಾದಿಗಳಿಗೆ ಕಡಿವಾಣ ಹಾಕಬಹುದು; ಆರೋಗ್ಯವನ್ನೂ…

“ಅಂತರಂಗದ ಆನಂದ ಅನುಭವಿಸಲು ಅಂತರ್‍ದೃಷ್ಟಿ ಅವಶ್ಯ” – ಒಡಿಯೂರು ಶ್ರೀ

ಕನ್ಯಾನದಲ್ಲಿ ಬೃಹತ್ ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ “ಪಂಚೇಂದ್ರಿಯಗಳಲ್ಲಿ ಶ್ರೇಷ್ಠವಾದುದು ಕಣ್ಣು. ಆಧುನಿಕ ಉಪಕರಣಗಳ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಅತಿಯಾಗಿದೆ. ಬಾಹ್ಯ ಕಣ್ಣಿಗಿಂತ ಜ್ಞಾನದ ದೃಷ್ಟಿ ಅಗತ್ಯವಾಗಿ ಮನುಷ್ಯನಿಗೆ ಬೇಕು. ಅಂತರಂಗದ ಆನಂದ ಅನುಭವಿಸಲು ಅಂತರ್‍ದೃಷ್ಟಿಯು ಅವಶ್ಯ” ಎಂದು ಪರಮಪೂಜ್ಯ ಶ್ರೀ ಶ್ರೀ…

“ಕರ್ತವ್ಯನಿಷ್ಠೆ ಸಾಧನೆಯ ಬದುಕಿಗೆ ಹೆದ್ದಾರಿ” – ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ‘ಸಂಸ್ಕøತಿ-ಸಂಸ್ಕಾರ’ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ

“ಭಜನೆ ಎಂದರೆ ಸಂಘಟನೆ ಅಥವಾ ಸೇರುವಿಕೆಯೇ ಆಗಿದೆ. ಭಜನೆ ಮಾಡುವ ಹೃದಯದಲ್ಲಿ ರಾಗ-ದ್ವೇಷಗಳಿರುವುದಿಲ್ಲ. ನಮ್ಮಲ್ಲಿ ಸಾತ್ವಿಕಭಾವವನ್ನು ಮೂಡಿಸುತ್ತದೆ. ಭಜನೆ ಮಾಡುವ ಮನೆ ಅಥವಾ ಊರಲ್ಲಿ ಶಾಂತಿ-ನೆಮ್ಮದಿ ಇರುವುದು. ಭಜನೆಯಲ್ಲಿನ ಸಾರವು ಬದುಕನ್ನೆ ಪರಿವರ್ತಿಸುತ್ತದೆ. ಅನ್ಯೋನ್ಯತೆ-ಆತ್ಮೀಯತೆ ಬೆಸೆಯಲು ಇದು ಪೂರಕ. ಯಾರಿಗೆ ಹೇಗೆ ಸಹಕಾರ ಮಾಡಬೇಕೆನ್ನುವ ವಿಚಾರವನ್ನು ಭಜನೆ ತಿಳಿಸುತ್ತದೆ. ನಮ್ಮ ಜೀವನದಲ್ಲಿ ಎಲ್ಲವನ್ನೂ ಪುನಃ ಪುನಃ…

“ಶಿಬಿರಗಳಿಂದ ಜೀವನ ಮೌಲ್ಯಗಳು ವರ್ಧಿಸುವುದು” – ಒಡಿಯೂರು ಶ್ರೀ

“ಅರಳುವ ಪ್ರತಿಭೆಗಳಿಗೆ ಶಿಬಿರಗಳು ವೇದಿಕೆಯಾಗಲಿ. ಕೌಶಲ್ಯದಿಂದ ಜೀವನ ರೂಪುಗೊಂಡಾಗ ಬದುಕೊಂದು ಕಲೆಯಾಗುವುದು. ಆಗಲೇ ಬದುಕಿಗೆ ಬೆಲೆ ಬರುವುದು. ಅರ್ಥಾತ್ ಜೀವನ ಮೌಲ್ಯಗಳು ವರ್ಧಿಸುವುದು. ಶಿಬಿರಾರ್ಥಿಗಳು ಪರಿಮಳ ತುಂಬಿದ ಬಂಗಾರದ ಹೂವಿನಂತೆ ಅರಳಬೇಕು. ನಮ್ಮಲ್ಲಿ ಸತ್‍ಸಂಕಲ್ಪವಿದ್ದರೆ ಬದುಕೂ ಬಂಗಾರವಾಗುವುದು. ಈ ಮೂಲಕ ಭವ್ಯ ರಾಷ್ಟ್ರ ನಿರ್ಮಾಣದ ಸಂಕಲ್ಪವು ಸಾಕಾರಗೊಳ್ಳುವುದು.” ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು…

“ಶಿಬಿರಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ” – ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶರದೃತು ಸಂಸ್ಕಾರ ಶಿಬಿರ 2021 ಉದ್ಘಾಟಿಸಿ ಒಡಿಯೂರು ಶ್ರೀ ಆಶೀರ್ವಚನ

ಅ.11: “ಮಕ್ಕಳೆಲ್ಲರೂ ಸಾಮಾನ್ಯರಲ್ಲ, ಅಸಾಮಾನ್ಯರು. ಭವ್ಯ ಭಾರತ ನಿರ್ಮಾಣದ ರೂವಾರಿಗಳು. ದೇಶ ಪ್ರೇಮ ಹೇಗೆ ಬೆಳೆಸಿಕೊಳ್ಳಬೇಕು? ಬದುಕನ್ನು ರೂಪಿಸಲು ಬೇಕಾದಂತಹ ವಿಚಾರಗಳು ತಿಳಿಯಬೇಕಾದರೆ ಸಂಸ್ಕಾರ ಶಿಕ್ಷಣ ಅಗತ್ಯ. ಆ ಮೂಲಕ ಆದರ್ಶ ರಾಷ್ಟ್ರ ನಿರ್ಮಾಣವಾಗಬಹುದು. ಸಂಸ್ಕøತಿಯ ಅಂತರ್ಯವೇ ಸಂಸ್ಕಾರ. ಮಾತು ಎಂದರೆ ವ್ಯಕ್ತಿತ್ವದ ಕೈಗನ್ನಡಿ. ವ್ಯಕ್ತಿತ್ವ ವಿಕಸನವೇ ಶಿಬಿರದ ಮುಖ್ಯ ಉದ್ದೇಶ. ಮಾತು ಮನಸ್ಸು ಹತ್ತಿರವಾಗಿರುವಂತದ್ದು.…

“ನಾವೆಲ್ಲರೂ ಧರ್ಮ ಸೇನಾನಿಗಳಾಗೋಣ” – ಶ್ರೀ ಲಲಿತಾ ಪಂಚಮಿ ಮಹೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ

ಅ.10: “ತ್ಯಾಗಪೂರ್ಣ ಸೇವೆಗೆ ಬಹಳ ಪ್ರಾಮುಖ್ಯತೆ ಇದೆ. ಧರ್ಮಾಚರಣೆಯ ಮೂಲಕ ಜಾಗೃತಗೊಳಿಸುವ ಕಾರ್ಯ ನಿರಂತರವಾಗಬೇಕು. ದೇಶದ ರಕ್ಷಣೆಗೆ ರಾಷ್ಟ್ರ ಸೇನಾನಿಗಳು, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಆರೋಗ್ಯ ಸೇನಾನಿಗಳಂತೆ ನಾವೆಲ್ಲರೂ ಧರ್ಮ ಸೇನಾನಿಗಳಾಗೋಣ. ಸದಾಚಾರವಿಲ್ಲದೆ ಧರ್ಮವಿಲ್ಲ. ಸದಾಚಾರದಿಂದಲೇ ಆರೋಗ್ಯ, ಸಂಪತ್ತು ವೃದ್ಧಿ ಸಾಧ್ಯ. ಸಮಾಜದಲ್ಲಿ ಅನೇಕ ವಿಚಾರಗಳು ವೈರಲ್ ಆಗುವುದಿದೆ. ಆದರ್ಶ ಸಮಾಜ ನಿರ್ಮಾಣಕ್ಕೆ ಪೂರಕವಾದ ಧಾರ್ಮಿಕ…

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ – ಎಸ್.ಎಸ್.ಎಲ್.ಸಿ. ಆಂಗ್ಲ ಮಾಧ್ಯಮ ಶಾಲೆ 100% ಫಲಿತಾಂಶ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಒಡಿಯೂರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಪ್ರೌಢಶಾಲೆ 100% ಫಲಿತಾಂಶ ದಾಖಲಿಸಿದ್ದು, ದೀಪಶ್ರೀ – 619 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಮೈತ್ರಿ ಕೆ. – 605, ಶ್ರೇಯಸ್ – 603, ಹರ್ಷಿತಾ ಡಿ’ಸೋಜ – 601, ಪ್ರಥಮ್ ಶೆಟ್ಟಿ – 598, ಶೃಜನ್ ಸಿ.- 593, ರಜತ್…

ಕೋವಿಡ್ ನಿಯಮ ಅನುಸರಿಸಿ ಜನ್ಮದಿನೋತ್ಸವ (ಗ್ರಾಮೋತ್ಸವ) ಆಚರಣೆ- ಒಡಿಯೂರು ಶ್ರೀ

“ಗುರುಭಕ್ತರು ತಮ್ಮ ತಮ್ಮ ಮನೆಯಲ್ಲೇ ಇದ್ದು ಹನುಮಾನ್ ಚಾಲೀಸಾ ಪಠಣದ ಮೂಲಕ ಜನ್ಮದಿನವನ್ನು ಆಚರಿಸಬಹುದು. ಎಲ್ಲರ ಒಳಿತಿಗಾಗಿ ಸನ್ನಿಧಿಯಲ್ಲಿ ನಾವು ಪ್ರಾರ್ಥಿಸುತ್ತೇವೆ. ಶ್ರೀ ಸಂಸ್ಥಾನದಲ್ಲಿ ಸರಳ ರೀತಿಯಲ್ಲಿ ಶ್ರೀ ಗುರುಪಾದುಕಾರಾಧನೆ ನಡೆಯುತ್ತದೆ. ಯಾವುದೇ ಲೋಪ ಬಾರದಂತೆ ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸೋಣ. ಕಾಯಿಲೆಯ ಬಗ್ಗೆ ಜಾಗೃತಿ ಇರಲಿ. ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ…

‘ಶ್ರೀಗಂಧ ಬೆಳೆಯೋಣ’ ಯೋಜನೆಗೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ

“ಪ್ರಕೃತಿ ಉಳಿದರೆ ನಮ್ಮ ಉಳಿವು” ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ‘ಮನೆಗೊಂದು ಶ್ರೀಗಂಧದ ಸಸಿ – ಶ್ರೀಗಂಧ ಬೆಳೆಯೋಣ’ ಯೋಜನೆಗೆ ಚಾಲನೆ ನೀಡಿ ಒಡಿಯೂರು ಶ್ರೀ ಆಶೀರ್ವಚನ “ಆರೋಗ್ಯಕ್ಕೆ ಹಾನಿಕಾರಕವಾದ ಅಕೇಶಿಯಾದಂತಹ ಗಿಡದ ಬದಲು ಗಿಡಮೂಲಿಕೆ, ಹಣ್ಣುಗಳ ಗಿಡಗಳನ್ನು ಬೆಳೆಸಬೇಕು. ಪ್ರಕೃತಿಯ ಉಳಿವು ನಮ್ಮಿಂದಲೇ ಅಗಬೇಕು. ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬವನ್ನು ಆಚರಿಸುವಾಗ ಒಂದೊಂದು ಗಿಡಗಳನ್ನು ನೆಟ್ಟು ಪೋಷಿಸಿದಾಗ…