Editor

Editor

ಐ.ಟಿ.ಐ.ನ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ

“ಶಿಸ್ತು ಮತ್ತು ಶ್ರದ್ಧೆಯಿಂದ ಜೀವನದಲ್ಲಿ ಯಶಸ್ಸು ಸಾಧ್ಯ” ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ನ ವಿದ್ಯಾರ್ಥಿಗಳ ಪ್ರವೇಶೋತ್ಸವ ಮತ್ತು ಬೀಳ್ಕೊಡುಗೆ ಸಮಾರಂಭ ಒಡಿಯೂರು ಶ್ರೀ ಆಶೀರ್ವಚನ “ನಮ್ಮನ್ನು ನಾವು ಸದ್ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಸಂಸ್ಕಾರಯತ ಜೀವನದಿಂದ ಆದರ್ಶ ಬದುಕು ನಮ್ಮದಾಗಬಹುದು. ಜೀವನದಲ್ಲಿ ಕೌಶಲ್ಯವೂ ಅಗತ್ಯ. ಕೈಗಾರಿಕಾ ತರಬೇತಿ ಸಂಸ್ಥೆಗಳ ಮೂಲಕ ತರಬೇತಿಯ ಜೊತೆಗೆ ಕೌಶಲ್ಯವನ್ನು ಮೈಗೂಡಿಸಿಕೊಳ್ಳಿ. ಶಿಸ್ತು ಮತ್ತು…

ಮುದ್ದುಕೃಷ್ಣ ವೇಷಸ್ಪರ್ಧೆ

“ಕೃಷ್ಣವೇಷ ಹಾಕುವ ಜೊತೆಗೆ ಕೃಷ್ಣನ ಆದರ್ಶವನ್ನು ಬೆಳೆಸಬೇಕು” – ಒಡಿಯೂರು ಶ್ರೀ “ತಾಯಿ ಮಕ್ಕಳ ಸಂಬಂಧದ ವಿಚಾರಗಳನ್ನು ಕೃಷ್ಣಲೀಲೆ ತಿಳಿಸುತ್ತದೆ. ಇವರ ನಡುವಿನ ಪ್ರೀತಿಯಲ್ಲಿ ಯಾವುದೇ ಕಲ್ಮಶಗಳಿರುವುದಿಲ್ಲ. ನಾವು ಮಗುವಿನಿಂದ ಎಲ್ಲವನ್ನು ಕಲಿಯಬಹುದು. ಮಗುವಿನ ಮನಸ್ಸೂ ಹಾಗೆ ಪರಿಶುದ್ದವಾಗಿರುತ್ತದೆ. ಕೃಷ್ಣನ ಸಂದೇಶದಂತೆ ಅವರವರ ಮನಸ್ಸೇ ಮಿತ್ರರು ಮತ್ತು ಶತ್ರುಗಳು. ಸತ್ಸಂಗಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮನಸ್ಸಿನ ನಿಯಂತ್ರಣ…

ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವ

“ನಾಗಾರಾಧನೆ ಪ್ರಕೃತಿಯ ಆರಾಧನೆ” ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ ಆ. 2: “ಇಹಪರದ ಸುಖಕ್ಕೆ ಧರ್ಮಮಾರ್ಗ ರಹದಾರಿ. ಪ್ರೀತಿಭಾವದ ಕೊರತೆ ನಮ್ಮಲ್ಲಿದೆ. ತಿಳುವಳಿಕೆಯ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ತಾಂಡವವಾಡುತ್ತಿದೆ. ಅಮೃತತ್ವವನ್ನು ಪಡೆಯುವುದೇ ನಮ್ಮ ಉದ್ದೇಶವಾಗಬೇಕು. ನಮ್ಮಲ್ಲಿರುವ ನಂಬಿಕೆಯೇ ನಮ್ಮನ್ನು ಮುನ್ನಡೆಸುವುದು. ಅದನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕು. ನಮ್ಮ ಕರ್ತವ್ಯದಲ್ಲಿ…

ಕೆಸರ್‍ದ ಕಂಡೊಡೊಂಜಿ ದಿನ

“ಯುವಸಮೂಹ ಕೃಷಿ ಸಂಸ್ಕೃತಿಗೆ ಮನಮಾಡಬೇಕು” ಶ್ರೀ ಸಂಸ್ಥಾನದ ಸಾಗುವಳಿ ಭೂಮಿಯಲ್ಲಿ ‘ಕೆಸರ್‍ದ ಕಂಡೊಡೊಂಜಿ ದಿನ’ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಜು. 3: “ಮಣ್ಣು ಸಂಸ್ಕೃತಿಯ ಒಂದು ಭಾಗ. ಪ್ರಕೃತಿಯ ಆರಾಧನೆ, ಸಂರಕ್ಷಣೆ ಎಲ್ಲರಿಂದಲೂ ಆಗಬೇಕು. ಧರ್ಮ ಸಂರಕ್ಷಣೆಯ ವಿಚಾರದಲ್ಲಿ ಪ್ರತಿಯೊಬ್ಬರ ಪಾತ್ರ ಮುಖ್ಯವಾಗಿದೆ. ಯುವ ಸಮೂಹ ಇಂತಹ ಚಟುವಟಿಕೆಗಳಿಗೆ ಮನಮಾಡಿ ತೊಡಗಿಸಿಕೊಳ್ಳುವಂತಾಗಬೇಕು” ಎಂದು ಪರಮಪೂಜ್ಯ…

ಧೈರ್ಯದಿಂದ ಮುನ್ನಡೆದರೆ ಯಶಸ್ಸು ಖಂಡಿತ

“ಧೈರ್ಯದಿಂದ ಮುನ್ನಡೆದರೆ ಯಶಸ್ಸು ಖಂಡಿತ” ಜಿಲ್ಲಾ ಮಟ್ಟದ ಒಳಾಂಗಣ ಮತ್ತು ಹೊರಾಂಗಣ ಸ್ಪರ್ಧೆಗಳನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಜು. 30: “ಸಮಾಜದಲ್ಲಿ ಮನುಷ್ಯ ಶಾಂತಿ, ನೆಮ್ಮದಿಗೆ ಬಯಸುವ ಕಾಲ ಬಂದಿದೆ. ಅಂತರಂಗದ ಬಾಗಿಲು ತೆರೆಯಬೇಕು. ಅಲ್ಲಿ ಆನಂದದ ಸೆಲೆ ಇರುತ್ತದೆ. ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ನಡೆಯಬೇಕು. ಧೈರ್ಯದಿಂದ ಮುನ್ನಡೆದರೆ…

ಯುವ ಸಮುದಾಯ ಜಾಗ್ರತರಾದಾಗ ದೇಶ ಸದೃಢ

“ಯುವ ಸಮುದಾಯ ಜಾಗ್ರತರಾದಾಗ ದೇಶ ಸದೃಢ” ಒಡಿಯೂರು ಶ್ರೀಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಮುಂಬಯಿ ಘಟಕದ 21ನೇ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ಮುಂಬಯಿ, ಜು.24: “ಸುಖ ದುಃಖಗಳನ್ನು ಸಮತೋಲನದಲ್ಲಿಡಲು ಆಧ್ಯಾತ್ಮಿಕತೆ ಬೇಕು. ಸುಖವೆಂದರೆ ಮನಸ್ಸಿನ ಒಂದು ಸ್ಥಿತಿಯಾಗಿದೆ. ಮನಸ್ಸನ್ನು ಏಕಾಗ್ರತೆಯಲ್ಲಿಟ್ಟು ಆಧ್ಯಾತ್ಮಿಕದ ವಿಚಾರಧಾರೆಗಳನ್ನು ನಮ್ಮಲ್ಲಿ ಇರಿಸಿಕೊಂಡಾಗ ಧರ್ಮದ ಕಡೆಗೆ…

ಗ್ರಾಮೋತ್ಸವ 2022

“ಅರಿವಿನೊಂದಿಗೆ ಮಾಡುವ ಸೇವೆ ಭಗವಂತನಿಗೆ ಪ್ರಿಯ” ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವ – ಗುರುವಂದನ ನೂತನ ಶ್ರೀ ಮಾತಾ ಅನ್ನಛತ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಸಂದೇಶ ಆ. 8: “ಅರಿತು ಮಾಡಿದ ಸೇವೆ ಅರ್ಥಪೂರ್ಣವಾಗಿರುತ್ತದೆ. ಅಹಂಕಾರ, ಮಮಕಾರವಿಲ್ಲದ ಸೇವೆ ಭಗವಂತನಿಗೆ ಸಲ್ಲುತ್ತದೆ. ಜ್ಞಾನಪೂರ್ಣತೆಯಿಂದ ಸಂಪತ್ತನ್ನು ಸದ್ವಿನಿಯೋಗಿಸಿದಾಗ ಅದಕ್ಕೆ ಮೌಲ್ಯ ತುಂಬುತ್ತದೆ. ತ್ಯಾಗ ತುಂಬಿದ…

75ನೇ ಸ್ವಾತಂತ್ರ್ಯೋತ್ಸವ-ಅಮೃತ ಮಹೋತ್ಸವ ಆಚರಣೆ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವ-ಅಮೃತ ಮಹೋತ್ಸವ ಆಚರಣೆಯಲ್ಲಿ ಒಡಿಯೂರು ಶ್ರೀ “ವಿಶ್ವಗುರು ಎಂದು ಮಾನ್ಯತೆ ಪಡೆದ ಭಾರತ ಶ್ರೇಯಸ್ಸಿನ ಮಾರ್ಗದ ಶ್ರೇಷ್ಠತೆಯ ಬಗ್ಗೆ ವಿಶ್ವಕ್ಕೆ ಕಲಿಸಿಕೊಟ್ಟಿದೆ. ದೇಶಕ್ಕೊಂದು ಸಂವಿಧಾನ ಇದ್ದಂತೆ ಬದುಕಿಗೂ ಸಂವಿಧಾನ ಬೇಕು. ಅದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರನ್ನು ಸ್ಮರಿಸುವುದು ಮತ್ತು ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಯುವ ಕಾರ್ಯ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀವೃತಪೂಜೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ತಾ.05-08-2022ನೇ ಶುಕ್ರವಾರ ಅಪರಾಹ್ನ ಘಂಟೆ 2.30ರಿಂದ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ವತಿಯಿಂದ ಸಾಮೂಹಿಕ ಶ್ರೀವರಮಹಾಲಕ್ಷ್ಮೀವೃತಪೂಜೆ ನಡೆಯಲಿರುವುದು.