Editor

Editor

ಶರದೃತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭ

“ಮಾನವೀಯತೆ ಬೆಳೆದಾಗ ಮಾತ್ರ ಮನುಷ್ಯ ಮನುಷ್ಯನಾಗುತ್ತಾನೆ” – ಶರದೃತು ಸಂಸ್ಕಾರ ಶಿಬಿರದ ಸಮಾರೋಪ ಸಮಾರಂಭದಲ್ಲಿ ಒಡಿಯೂರು ಶ್ರೀ “ನಾವು ನಮ್ಮನ್ನು ಬೆಳೆಸಿಕೊಳ್ಳುವ ರೀತಿ-ನೀತಿಗಳಲ್ಲಿ ಬದಲಾವಣೆ ಬೇಕಾಗಿದೆ. ವ್ಯಕ್ತಿಗೆ ಉತ್ತಮ ಸಂಸ್ಕಾರ ಸಿಕ್ಕಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ಬದುಕುವುದು ಭಗವಂತನಿಗೆ ಪ್ರಿಯವಾಗುವುದು. ಮಾನವೀಯ ಮೌಲ್ಯದ ಅರಿವಿರಬೇಕು. ಮಾನವೀಯತೆ ಬೆಳೆದಾಗ ಮಾತ್ರ…

ಶ್ರೀ ಲಲಿತಾ ಪಂಚಮಿ ಮಹೋತ್ಸವ, ಶ್ರೀಚಂಡಿಕಾಯಾಗ, ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ, ಶ್ರೀಚಂಡಿಕಾಯಾಗ, ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರಧಾನ ಸಮಾರಂಭ ಸಂಪನ್ನ “ಧರ್ಮಶ್ರದ್ಧೆ, ರಾಷ್ಟ್ರ ಭಕ್ತಿ, ಪ್ರೀತಿಭಾವದ ಬದುಕು ನಮ್ಮದಾಗಲಿ” : ಒಡಿಯೂರು ಶ್ರೀ ವಿಟ್ಲ: “ಲಲಿತೆಯನ್ನು ಪೂಜಿಸುವ ಸುದಿನವಿದು. ಕಲೆಯನ್ನು ಪೆÇೀಷಣೆ ಮಾಡುವ ಕೆಲಸ ನವರಾತ್ರಿ ಕಾಲದಲ್ಲಿ ಎಲ್ಲಾ ಕಡೆಗಳಲ್ಲಿಯೂ ಕಾಣಬಹುದು. ಧಾರ್ಮಿಕತೆ ಮತ್ತು…

ಜೋಕುಲೆ ತುಳುಕೂಟ ಉದ್ಘಾಟನೆ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜೋಕುಲೆ ತುಳುಕೂಟ ಉದ್ಘಾಟನೆ “ಉರಿಯುವ ದೀಪದಂತೆ ತುಳುನಾಡಿನ ಸಂಸ್ಕøತಿಯು ಬೆಳಗಬೇಕು. ನಾವು ಕಾಣುವ, ಉಪಯೋಗಿಸುವ ಪ್ರತಿಯೊಂದು ವಸ್ತುವಿನ ಹೆಸರನ್ನು ತುಳುಭಾಷೆಯಲ್ಲಿ ಹೇಳಲು ಪ್ರಯತ್ನಿಸಬೇಕು. ಭಾಷೆ ಉಳಿದರೆ ಮಾತ್ರ ಸಂಸ್ಕøತಿಯ ಉಳಿವು. ತುಳುವಿನ ಬಗ್ಗೆ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕು. ಪ್ರೀತಿಗೆ ಮತ್ತೊಂದು ಹೆಸರು ತುಳುಭಾಷೆ. ಅದು ಬೆಲ್ಲ ಮತ್ತು ನೀರಿನ ಸಂಬಂಧದ…

“ಮಕ್ಕಳು ಕ್ರೀಯಾಶೀಲರಾಗಿರಬೇಕು” – ಶರದೃತು ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಒಡಿಯೂರು ಶ್ರೀ

“ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಾಗಬೇಕು. ನಾವು ಯಾರು ಎಂಬ ಅರಿವು ನಮ್ಮಲ್ಲಿ ಮೂಡಿದಾಗ ಬದುಕು ಸುಂದರವಾಗುವುದು. ವ್ಯಕ್ತಿತ್ವವಿಕಸನಕ್ಕೆ ಪೂರಕವಾದ ಇಂತಹ ಶಿಬಿರಗಳಿಂದ, ಸಾಹಿತ್ಯಗಳನ್ನು ಓದುವುದರಿಂದ ನಮ್ಮ ಜ್ಞಾನ ವೃದ್ಧಿಯಾಗುವುದು. ಮನಸ್ಸು ಮತ್ತು ಶರೀರದ ಸ್ವಾಸ್ತ್ಯವನ್ನು ಕಾಪಿಡುವುದು ಯೋಗ. ಮನಸ್ಸೇ ನಮಗೆ ಶತ್ರು ಮತತು ಮಿತ್ರ. ಮಿತ್ರತ್ವವನ್ನು ಬೆಳೆಸಿಕೊಂಡಾಗ ಶತ್ರುಗಳಿರುವುದಿಲ್ಲ. ದೇಶಪ್ರೇಮದ ಜೊತೆಗೆ ಧರ್ಮಶ್ರದ್ಧೆಯು ಬೇಕು. ಶರದೃತುವಿನಲ್ಲಿ ಆಕಾಶ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಅ.1ರಿಂದ 3ರ ತನಕ ‘ಶರದೃತು ಸಂಸ್ಕಾರ ಶಿಬಿರ’

ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ಶರದೃತು ಸಂಸ್ಕಾರ ಶಿಬಿರವನ್ನು ಆಯೋಜಿಸಲಾಗಿದೆ. ಯೋಗ, ಧ್ಯಾನ, ಪ್ರಾಣಾಯಾಮ, ಚಿತ್ರಕಲೆ, ರಂಗಭೂಮಿ, ಕಾಗದದ ರಚನೆಗಳು, ಮುಖವಾಡ ತಯಾರಿ, ಕವನ ರಚನೆ, ಸ್ವರಾನುಕರಣೆ ಮುಂತಾದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ತರಬೇತಿಗಳನ್ನು ವಿವಿಧ ಸಂಪನ್ಮೂಲ ವ್ಯಕ್ತಿಗಳ ಮೂಲಕ ನೀಡಲಾಗುವುದು.

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ

ದಿನಾಂಕ 30-09-2022ನೇ ಶುಕ್ರವಾರ ಶ್ರೀ ಸಂಸ್ಥಾನದಲ್ಲಿ ಶ್ರೀ ಲಲಿತಾಪಂಚಮಿ ಮಹೋತ್ಸವ-ಶ್ರೀ ಚಂಡಿಕಾ ಯಾಗ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಬೆಳಗ್ಗೆ ಘಂಟೆ 9.00ರಿಂದ ಶ್ರೀ ಗಣಪತಿ ಹವನ, ನಾಗತಂಬಿಲ, ಶ್ರೀ ಚಂಡಿಕಾ ಯಾಗ ಆರಂಭ, ಘಂಟೆ 10.30ರಿಂದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯೋಪಸ್ಥಿತಿಯಲ್ಲಿ ಧರ್ಮಸಭೆ-ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ…

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ವಿಟ್ಲ ವಲಯ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ

“ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಜರಗಿದ ವಿಟ್ಲ ಮಲಯ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ಉದ್ಘಾಟಿಸಿ ಒಡಿಯೂರು ಶ್ರೀಗಳವರಿಂದ ಆಶೀರ್ವಚನ “ಪ್ರತಿಯೊಂದು ಮಗುವಿನ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ. ಎಲ್ಲರಲ್ಲೂ ಒಂದೇ ರೀತಿಯ ಪ್ರತಿಭೆಗಳಿರುವುದಿಲ್ಲ. ಪ್ರತಿಭೆಗಳು ಅರಳಲು ಇಂತಹ ವೇದಿಕೆ ಪೂರಕವಾಗಿದೆ. ಮಕ್ಕಳು ಜಗತ್ತನ್ನೇ ಬೆಳಗಿಸುವ ದೀಪಗಳಾಗಬೇಕು. ಸುಸಂಸ್ಕøತ ಶಿಕ್ಷಣದಿಂದ…

ಗಣಪತಿಯ ಆರಾಧನೆ ಬುದ್ಧಿವಿಕಾಸಕ್ಕೆ ಪೂರಕ

“ಗಣಪತಿಯ ಆರಾಧನೆ ಬುದ್ಧಿವಿಕಾಸಕ್ಕೆ ಪೂರಕ” – ಒಡಿಯೂರು ಶ್ರೀ “ಜೀವನದ ಜೀವಾಳ ಜಲ. ಜಲತತ್ತ್ವಕ್ಕೆ ಅಧಿಪತಿ ಗಣಪತಿ. ಗಣಪತಿ ಮಗುವಿನಿಂದ ವೃದ್ಧರವರೆಗೆ ಎಲ್ಲರಿಗೂ ಸಂತೋಷ ಕೊಡುವ ದೇವರು. ಸಂತೋಷವೇ ನಮಗೆ ಸಂಪತ್ತು, ಆನಂದವೇ ಆಸ್ತಿ. ಅನುಗ್ರಹ ಮತ್ತು ನಿಗ್ರಹ ಶಕ್ತಿಯನ್ನು ಕರುಣಿಸುವ, ನಾಲ್ಕು ವೇದಗಳಲ್ಲಿಯೂ ಪೂಜೆ ಪಡೆಯುವ ದೇವನೇ ಗಜಾನನ. ಇವನ ಆರಾಧನೆ, ಸಾರ್ವಜನಿಕ ಪೂಜೆಗಳಿಂದ…

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಶಿಕ್ಷಕರ ದಿನಾಚರಣೆ

ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಶಿಕ್ಷಕರೆಲ್ಲರೂ ಪುಷ್ಪಗಳನ್ನು ಅರ್ಪಿಸಿ ಗೌರವ ಸಲ್ಲಿಸಿ ಶಿಕ್ಷಕರ ದಿನ ಆಚರಿಸಲಾಯಿತು. ಶಾಲಾ ಸಂಚಾಲಕ ಶ್ರೀ ಸೇರಾಜೆ ಗಣಪತಿ ಭಟ್ ಇವರು ಪ್ರಸ್ತಾವನೆಗೈದು ಎಲ್ಲಾ ಶಿಕ್ಷಕ ವೃಂದದವರಿಗೆ ‘ಸಚಿತ್ರ ಶ್ರೀ ಗುರುಚರಿತಾಮೃತ’ ಕೃತಿಯನ್ನು ನೀಡಿದರು. ಶಾಲಾ ಶಿಕ್ಷಕ-ಶಿಕ್ಷಕಿಯರು ನಾಮಸಂಕೀರ್ತನೆಗೈದರು. ಶಾಲಾ ವಿದ್ಯಾರ್ಥಿಗಳು ಪುಷ್ಪಗುಚ್ಛ ನೀಡಿ…

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.31-08-2022 ನೇ ಬುಧವಾರ ಶ್ರೀ ಗಣೇಶ ಚತುರ್ಥಿಯಂದು ಪೂಜ್ಯ ಶ್ರೀಗಳವರ ದಿವ್ಯೋಪಸ್ಥಿತಿಯಲ್ಲಿ ಶ್ರೀ ಗಣಪತಿ ಅಥರ್ವಶೀರ್ಷ ಹವನ ಜರಗಲಿದೆ.