“ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕ”
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ದ.ಕ. ವಿಟ್ಲ ಸ್ಥಳೀಯ ಸಂಸ್ಥೆಯ ಉತ್ಸವ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ ದ.22: “ನಮ್ಮ ಬದುಕಿನಲ್ಲಿ ಶಿಸ್ತು ವಿಶೇಷವಾದ ಪಾತ್ರವನ್ನು ವಹಿಸುತ್ತದೆ; ವಹಿಸಬೇಕು. ಶಿಸ್ತಿನಿಂದಲೇ ಸ್ವಸ್ತಿ. ಶಿಸ್ತು ಇಲ್ಲದಿದ್ದರೆ ಬದುಕು ಬದುಕಾಗುವುದಿಲ್ಲ. ಬದುಕು ನಿಂತ ನೀರಾಗದೆ ನಿರಂತರ ಹರಿಯುವಂತಾಗಬೇಕು. ಬದುಕು ಸುಸೂತ್ರವಾಗಿ ನಡೆಯಬೇಕಿದ್ದರೆ ವ್ಯಕ್ತಿಯಲ್ಲಿ ವ್ಯಕ್ತಿತ್ವ ತುಂಬಿರಬೇಕು. ವ್ಯಕ್ತಿತ್ವವನ್ನು…