ಕೃಷಿ ಸಂಪತ್ತೇ ಭಾರತದ ಸಂಪತ್ತು
ರೈತರ ಶ್ರಮಕ್ಕೆ ಪ್ರತಿಫಲ ನಿಶ್ಚಿತ –ಒಡಿಯೂರು ಶ್ರೀ
ಕನ್ಯಾನ, ಜ.11: “ಪ್ರಕೃತಿಯನ್ನು ಉಳಿಸುವ ಕಾರ್ಯ ಎಲ್ಲೆಡೆ ಆಗಬೇಕು. ಕೃಷಿ ಸಂಪತ್ತೇ ಭಾರತದ ಸಂಪತ್ತು. ಅದು ನಮ್ಮ ಸಂಸ್ಕøತಿಯೂ ಹೌದು. ಕೋವಿಡ್‍ನಿಂದಾಗಿ ಕೃಷಿ ಪ್ರಗತಿಯತ್ತ ಸಾಗಿದೆ. ಕೃಷಿಕರ ಬೆಳವಣಿಗೆಗೆ ಸಹಕರಿಸಬೇಕು. ಕೃಷಿಯ ಆಸಕ್ತಿಯಿಂದ ಭಾರತ ಉಳಿದಿದೆ. ಬಾಹ್ಯದಲ್ಲಿ ಆಹಾರದ ಕೃಷಿ ಮಾಡುವ ಜೊತೆಗೆ ಅಂತರಂಗದಲ್ಲಿ ಅಧ್ಯಾತ್ಮದ ಕೃಷಿಯನ್ನೂ ಬೆಳೆಸುವ. ರೈತರ ಶ್ರಮಕ್ಕೆ ಪ್ರತಿಫಲ ನಿಶ್ಚಿತ. ಕೃಷಿಯಿಂದ ಶಾರೀರಿಕ ಬೆಳವಣಿಗೆ ಸಾಧ್ಯ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಕನ್ಯಾನ ಶ್ರೀ ಗುರುದೇವ ಕಲ್ಯಾಣ ಮಂಟಪದಲ್ಲಿ ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದಂಗವಾಗಿ ಆಯೋಜಿಸಿದ್ದ ಸಮಗ್ರ ಸುಸ್ಥಿರ ಸಾವಯವ ಕೃಷಿ ಅಭಿಯಾನವನ್ನು ಉದ್ಘಾಟಿಸಿ ಆಶೀರ್ವಚನಗೈದರು.
ಈ ಸುಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.
ಸಾವಯವ ಕೃಷಿ ತಜ್ಞ ಡಾ. ಕೆ.ಆರ್. ಹುಲ್ಲುನಾಚೇಗೌಡರು ಮಾತನಾಡಿ “ಕೃಷಿ ಎನ್ನುವುದು ಸಂಸ್ಕಾರವಾಗಿದ್ದು ಅದನ್ನು ಸಮರ್ಪಕವಾಗಿ ಮೈಗೂಡಿಸಿಕೊಳ್ಳಬೇಕು. ವೃತ್ತಿಯಲ್ಲಿ ಪ್ರೀತಿ ಇದ್ದಾಗ ಅಭಿವೃದ್ಧಿಯಾಗುತ್ತದೆ. ಪ್ರತಿ ಮನೆಯಲ್ಲಿ ಕೃಷಿ ಚೆನ್ನಾಗಿದ್ದಾಗ ದೇಶ ಸಮೃದ್ಧವಾಗಿರುತ್ತದೆ” ಎಂದರು.
ವೇದಿಕೆಯಲ್ಲಿ ಡಾ. ವಿಕ್ರಮ್, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕರೋಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ಶ್ರೀ ರಘುನಾಥ ಶೆಟ್ಟಿ ಪಟ್ಲಗುತ್ತು ಉಪಸ್ಥಿತರಿದ್ದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ಶ್ರೀ ಪಿ. ಲಿಂಗಪ್ಪ ಗೌಡ ಸ್ವಾಗತಿಸಿ, ಅಧ್ಯಕ್ಷ ಶ್ರೀ ಎ. ಸುರೇಶ್ ರೈ ಮಂಗಳೂರು ಇವರು ವಂದಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಕಾರ್ಯಕ್ರಮ ನಿರೂಪಿಸಿದರು.