ಶ್ರೀ ದತ್ತ ಜಯಂತಿ ಮಹೋತ್ಸವ-ಹರಿಕಥಾ ಸತ್ಸಂಗ:“ಎಲ್ಲಿ ತೃಪ್ತಿ ಇದೆಯೋ ಅಲ್ಲೇ ಭಗವಂತ”
ಶ್ರೀ ದತ್ತ ಜಯಂತಿ ಮಹೋತ್ಸವ-ಹರಿಕಥಾ ಸತ್ಸಂಗ ಸಪ್ತಾಹ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನದ.1: “ಗುರುಪರಂಪರೆಯನ್ನು ಸದಾ ನಾವು ಗೌರವಿಸಬೇಕಾಗಿದೆ. ಗುರುವಿನಿಂದ ದೇವರ ಅನುಗ್ರಹ ಸಾಧ್ಯ. ಇದೊಂದು ವಿಶೇಷ ಸಂಭ್ರಮದ ದಿನವಿದು. ಆಧ್ಯಾತ್ಮದೆಡೆಗೆ ಸಾಗಿದಾಗ ಜೀವನ ಆನಂದಮಯವಾಗಿರುತ್ತದೆ. ಸತ್ಸಂಗ, ಅಧ್ಯಾತ್ಮದ ಅನುಭೂತಿಯನ್ನು ಅನುಭಾವಗಳ ಮೂಲಕ ಸಿದ್ಧಿಸಿಕೊಳ್ಳಬೇಕು.
ಮನುಷ್ಯ ಉತ್ಸವ ಪ್ರಿಯ. ಭಗವಂತ ಏನನ್ನು ಬಯಸುವುದಿಲ್ಲ. ಮಾಧವನಲ್ಲಿ ಭಕ್ತಿ ಇರಬೇಕು. ಮಾನವನಲ್ಲಿ ಪ್ರೀತಿ ಇರಬೇಕು ಆಗ ಬದುಕು ಹಸನಾಗಲು ಸಾಧ್ಯ. ಮನುಷ್ಯನಿಗೆ ಎಲ್ಲಿ ತೃಪ್ತಿ ಸಿಗುತ್ತದೋ ಅಲ್ಲಿ ಭಗವಂತನಿದ್ದಾನೆ. ಹಿರಿಯರ ಪ್ರೇರಣೆ ಕಿರಿಯರಿಗೆ ದಾರಿದೀವಿಗೆ.
ಪ್ರತಿಯೊಬ್ಬರ ಮಾತಿನೊಳಗಿನ ಮಾರ್ಮಿಕತೆಯನ್ನು ತಿಳಿಯುವ ಮನಸ್ಸು ನಮ್ಮದಾಗಬೇಕು. ಜಗತ್ತಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ದೇಶದ್ರೋಹಿಗಳ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ದೇಶದ ಸಂರಕ್ಷಣೆ ಬಗ್ಗೆ ನಾವೆಲ್ಲರೂ ಗಮನಕೊಡಬೇಕಾಗಿದೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಯವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ದ.1ರಿಂದ ದ.7ರ ತನಕ ಸಂಸ್ಥಾನದಲ್ಲಿ ನಡೆಯಲಿರುವ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹದ ಪ್ರಯುಕ್ತ ಜರಗಲಿರುವ ಹರಿಕಥಾ ಸತ್ಸಂಗ ಸಪ್ತಾಹವನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀ, ಮುಂಬೈನ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಪುಣೆಯ ಉದ್ಯಮಿ ಶ್ರೀ ಉಷಾಕುಮಾರ್ ಶೆಟ್ಟಿ, ಹರಿದಾಸ ಶ್ರೀ ಶಂ.ನಾ.ಅಡಿಗ ಕುಂಬ್ಳೆ, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಶ್ರೀ ಎ.ಸಿ. ಭಂಡಾರಿ, ಹಿರಿಯ ಪತ್ರಕರ್ತ ಶ್ರೀ ಮಲಾರು ಜಯರಾಮ ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶ್ರೀ ಎ.ಸುರೇಶ್ ರೈ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀ ಯಶವಂತ ವಿಟ್ಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.