ಒಡಿಯೂರು ಶ್ರೀ ಸಂಸ್ಥಾನದಲ್ಲಿ ನಾಟಕೋತ್ಸವ – ತುಳು ನಾಟಕ ಸ್ಪರ್ಧೆ
ಒಡಿಯೂರು ಶ್ರೀ ಸಂಸ್ಥಾನದಲ್ಲಿ ನಾಟಕೋತ್ಸವ – ತುಳು ನಾಟಕ ಸ್ಪರ್ಧೆ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ದಶಂಬರ 1ರಿಂದ 7ರ ತನಕ ಜರಗುವ ಶ್ರೀ ದತ್ತ ಜಯಂತಿ ಮಹೋತ್ಸವದ ಸುಸಂದರ್ಭ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ
ತುಳು ನಾಟಕ ಸ್ಪರ್ಧೆ ನಡೆಯಲಿದೆ.
ನಿಯಮಗಳು:
1) ನೈತಿಕ ಮೌಲ್ಯಯುಕ್ತ, ಸಂದೇಶ ಭರಿತ ಯಾವುದೇ ಕಥಾವಸ್ತುವನ್ನು ಆಧರಿಸಿದ ಕೃತಿಯಾಗಿರಬೇಕು.
2) ಸಾಮಾಜಿಕ, ಪೌರಾಣಿಕ, ಜಾನಪದ, ಚಾರಿತ್ರಿಕ, ಕಾಲ್ಪನಿಕ ಯಾವುದೇ ಸ್ವರೂಪದಲ್ಲಿರಬಹುದು.
3) ಪ್ರದರ್ಶನದ ಅವಧಿ ಕನಿಷ್ಟ 1.30 – ಗರಿಷ್ಟ 2.00 ಗಂಟೆ.
4) ಪ್ರವೇಶ ಪತ್ರ ಕಳುಹಿಸಲು ಕೊನೆಯ ದಿನಾಂಕ: 31-10-2022
5) ಪೂರ್ವಮುದ್ರಿತ ಸಂಭಾಷಣೆ, ಸಂಗೀತ ಬಳಸಬಹುದು.
6) ಪ್ರವೇಶ ದೃಢೀಕರಣ ಶುಲ್ಕ – ರೂ. 2000/-, (ಹಿಂತಿರುಗಿಸಲಾಗುವುದು)
ವ್ಯವಸ್ಥೆ:
* ವೇದಿಕೆ : 30x 25 ಜಿeeಣ
* ಸಾಮಾನ್ಯ ಧ್ವನಿ, ಬೆಳಕು ವ್ಯವಸ್ಥೆ ಇದೆ. ಹೆಚ್ಚುವರಿ ಬೇಕಿದ್ದಲ್ಲಿ ತಂಡವೇ ಹೊಂದಿಸಬೇಕು.
* ಊಟೋಪಚಾರ ವ್ಯವಸ್ಥೆ ಕ್ಷೇತ್ರದ ವತಿಯಿಂದ ಇದೆ.
* ಅಂಕದ ಪರದೆ, ಎರಡು ಕಪ್ಪು /ನೀಲಿ ಪರದೆ ಮಾತ್ರ ಇರುತ್ತದೆ.
ಬಹುಮಾನಗಳು:
* ಪ್ರಥಮ : ರೂ. 30,000
* ದ್ವಿತೀಯ : ರೂ. 20,000
* ತೃತೀಯ : ರೂ. 10,000 ಹಾಗೂ ಶಾಶ್ವತ ಫಲಕಗಳು.
* ಅತ್ಯುತ್ತಮ ನಟ, ನಟಿ, ಪೋಷಕ ಪಾತ್ರ, ಸಂಗೀತ ನಿರ್ದೇಶಕ, ರಂಗ ನಿರ್ಮಾಣ, ನಿರ್ದೇಶಕ, ಉತ್ತಮ ಕೃತಿಗೆ, ವೇಷ ಭೂಷಣಕ್ಕೆ ಬಹುಮಾನ ಇದೆ.
ಆಸಕ್ತ ತಂಡಗಳು ತಮ್ಮ ನಾಟಕ ಹಾಗೂ ತಂಡಗಳ ಪೂರ್ಣ ವಿವರದೊಂದಿಗೆ ಪ್ರವೇಶ ಅಪೇಕ್ಷಾ ಪತ್ರ ವನ್ನು ತಾ.31-10-2022 ಮುಂಚಿತವಾಗಿ ಕಳುಹಿಸಬೇಕು. 9ರಿಂದ 10 ನಾಟಕಗಳನ್ನು ಆಯ್ಕೆಮಾಡಿ, ಪ್ರದರ್ಶನದ ದಿನ – ಸಮಯ ನಿಗದಿ ಮಾಡಲಾಗುವುದು.
ವಿಳಾಸ : ಪ್ರಧಾನ ಸಂಚಾಲಕರು, ಒಡಿಯೂರು ನಾಟಕೋತ್ಸವ ಸಮಿತಿ, ಒಡಿಯೂರು
ಶ್ರೀ ಗುರುದೇವದತ್ತ ಸಂಸ್ಥಾನಮ್, ಬಂಟ್ವಾಳ ತಾಲೂಕು.
ಮಾಹಿತಿಗೆ : ಕದ್ರಿ ನವನೀತ ಶೆಟ್ಟಿ – 9448123061/ ಸಂತೋಷ್ ಭಂಡಾರಿ – 9480760799
ಸಂಘಟಕರ ತೀರ್ಮಾನವೇ ಅಂತಿಮ