ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವ
“ನಾಗಾರಾಧನೆ ಪ್ರಕೃತಿಯ ಆರಾಧನೆ”
ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರ ಪಂಚಮಿ ಮಹೋತ್ಸವದಲ್ಲಿ
ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ
ಆ. 2: “ಇಹಪರದ ಸುಖಕ್ಕೆ ಧರ್ಮಮಾರ್ಗ ರಹದಾರಿ. ಪ್ರೀತಿಭಾವದ ಕೊರತೆ ನಮ್ಮಲ್ಲಿದೆ. ತಿಳುವಳಿಕೆಯ ಕೊರತೆಯಿಂದ ಸಮಾಜದಲ್ಲಿ ಅಶಾಂತಿ ತಾಂಡವವಾಡುತ್ತಿದೆ. ಅಮೃತತ್ವವನ್ನು ಪಡೆಯುವುದೇ ನಮ್ಮ ಉದ್ದೇಶವಾಗಬೇಕು. ನಮ್ಮಲ್ಲಿರುವ ನಂಬಿಕೆಯೇ ನಮ್ಮನ್ನು ಮುನ್ನಡೆಸುವುದು. ಅದನ್ನು ಗಟ್ಟಿಗೊಳಿಸುವ ಕಾರ್ಯವಾಗಬೇಕು. ನಮ್ಮ ಕರ್ತವ್ಯದಲ್ಲಿ ಆತ್ಮತೃಪ್ತಿ ಬೇಕು. ನಾಗದೋಷಕ್ಕೆ ಯಾವುದೇ ಜಾತಿ ಬೇಧವಿಲ್ಲ. ಸಂಪತ್ತಿನ ಅಧಿಪತಿ ನಾಗರಾಜ. ಪ್ರಕೃತಿಯ ಉಳಿವು ನಾಗಾರಾಧನೆಯಿಂದಾಗುತ್ತದೆ. ಇದೊಂದು ಪ್ರಕೃತಿಯ ಆರಾಧನೆಯೇ. ನಾಗಾರಾಧನೆಯು ನಂಬಿಕೆಯ ಒಂದು ವಿಚಾರ. ನಂಬಿಕೆ ನಮ್ಮಲ್ಲಿಲ್ಲದಿದ್ದರೆ ಬದುಕು ಬದುಕಾಗದು” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಶ್ರೀ ಸಂಸ್ಥಾನದಲ್ಲಿ ಜರಗಿದ ನಾಗರಪಂಚಮಿ ಮಹೋತ್ಸವ-ಸಾರ್ವಜನಿಕ ಆಶ್ಲೇಷ ಬಲಿಪೂಜೆಯ ಸಂದರ್ಭ ನಾಗರಪಂಚಮಿಯ ಸಂದೇಶ ನೀಡಿದರು.
ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು.
ಬೆಳಿಗ್ಗೆ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಕಲ್ಪೋಕ್ತಪೂಜೆ ನೆರವೇರಿತು.
ಮಧ್ಯಾಹ್ನ ಸಾರ್ವಜನಿಕ ಆಶ್ಲೇಷಬಲಿಪೂಜೆಯ ಮಹಾಮಂಗಳಾರತಿ, ಆರಾಧ್ಯದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆಯ ಬಳಿಕ ಮಹಾಸಂತರ್ಪಣೆ ಏರ್ಪಟ್ಟಿತು. ರಾತ್ರಿ ವಿಶೇಷ ರಂಗಪೂಜೆ, ಮಹಾಪೂಜೆ ಸಂಪನ್ನಗೊಂಡಿತು.