10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
“ದೇಶಪ್ರೇಮದೊಂದಿಗೆ ಧರ್ಮಪ್ರಜ್ಞೆ ಮೈಗೂಡಿಸಿಕೊಳ್ಳಿ” ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಎ.13: “ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು. ಪ್ರಜ್ಞಾವಂತ ಪ್ರಜೆಗಳÀ ನಿರ್ಮಾಣದಿಂದ ಸದೃಢ ರಾಷ್ಟ್ರ ಕಟ್ಟುವುದು ನಮ್ಮ ಮುಖ್ಯ ಧ್ಯೇಯ. ಜಗತ್ತು ಒಂದು ಪಾಠಶಾಲೆ. ಅದರಲ್ಲಿ ಗುಣಾತ್ಮಕತೆಯನ್ನು ಆಯ್ಕೆ ಮಾಡುವ ಮೂಲಕ ಬದುಕನ್ನು ರೂಪಿಸಬೇಕು. ದೇಶಪ್ರೇಮದೊಂದಿಗೆ ಧರ್ಮಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು. ಆದರ್ಶವ್ಯಕ್ತಿಗಳಾಗಿ ವಿಕಸನಗೊಳ್ಳಿರಿ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ಗುರುದೇವ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
“ಮಕ್ಕಳು ಎಂದರೆ ಕೇವಲ ಕಾಗದದ ಹೂವುಗಳಲ್ಲ, ಪರಿಮಳಯುಕ್ತ ಬಂಗಾರದ ಹೂವುಗಳಾಗಬೇಕು” ಎಂದು ಸಾಧ್ವಿ ಶ್ರೀ ಮಾತನಂದಮಯೀ ಯವರು ತಮ್ಮ ಆಶೀರ್ವಚನದ ಮೂಲಕ ಮಕ್ಕಳಿಗೆ ಶುಭಹಾರೈಸಿದರು.
ಶಾಲಾ ಸಂಚಾಲಕರಾದ ಶ್ರೀ ಸೇರಾಜೆ ಗಣಪತಿ ಭಟ್, ಹಿರಿಯ ಪತ್ರಕರ್ತರಾದ ಶ್ರೀ ಯಶವಂತ ವಿಟ,್ಲ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಯಸ್. ರೈ, ಹಿರಿಯ ಶಿಕ್ಷಕರಾದ ಶ್ರೀ ಲೋಹಿತ್ ಭಂಡಾರಿ, ಶ್ರೀ ಶೇಖರ ಶೆಟ್ಟಿ ಬಾಯಾರು ಹಾಗೂ ಶಾಲಾ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಮಾರಂಭವನ್ನು ಕು| ಕೃತಿ ಯಂ. ನಿರೂಪಿಸಿದರು. ಕು| ಮೇಘ ಸ್ವಾಗತಿಸಿ, ಕು| ಸುಶ್ಮಿತಾ ಧನ್ಯವಾದವಿತ್ತರು.