ಒಡಿಯೂರು: ಶ್ರೀ ದತ್ತ ಮಹಾಯಾಗ ಸಪ್ತಾಹ ಆರಂಭ

ಒಡಿಯೂರು, ದ.12: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ತಾ.12-12-2021ರಿಂದ ತಾ.18-12-2021ರ ತನಕ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನಡೆಯಲಿರುವ ಶ್ರೀ ದತ್ತ ಜಯಂತಿ ಮಹೋತ್ಸವ-ಶ್ರೀ ದತ್ತ ಮಹಾಯಾಗ ಸಪ್ತಾಹಕ್ಕೆ ಪೂಜ್ಯ ಶ್ರೀಗಳವರು ದೀಪೋಜ್ವಲನದ ಮೂಲಕ ಚಾಲನೆ ನೀಡಿದರು.
ಗುರುಭಕ್ತರಿಗೆ ಶ್ರೀದತ್ತ ಮಾಲಾಧಾರಣೆ ಮಾಡಿ ಅನುಗ್ರಹ ಸಂದೇಶ ನೀಡಿದ ಪೂಜ್ಯ ಶ್ರೀಗಳವರು “ಶ್ರೀ ದತ್ತಮಾಲಾಧಾರಣೆ-ಸಪ್ತಾಹ ವೃತಾಚರಣೆ ಜೀವನಮೌಲ್ಯ ವರ್ಧನೆಗೆ ಪೂರಕ. ಕರ್ಮ ನಡೆಸುವವರಲ್ಲಿ ಪಾಪ-ಪುಣ್ಯದ ಲೇಪವಿರುವುದು. ಸತ್ಕರ್ಮದಿಂದ ಪುಣ್ಯ ಪ್ರಾಪ್ತವಾಗುವುದು. ಜೀವ-ದೇವನ ಭಾವದ ಜಾಗೃತಿಗೆ ಮಾಲಾಧಾರಣೆ ಅಗತ್ಯ. ನಮ್ಮೊಳಗೆ ಜಾಗೃತಿ ಅವಶ್ಯ. ಧರ್ಮಾಚರಣೆಯ ಮೂಲಕ ಜಾಗೃತಿ. ಆತ್ಮವಿಶ್ವಾಸ ವೃದ್ಧಿಸಬೇಕು. ಅಂತರಂಗ ಶುದ್ಧಿ, ಪ್ರೀತಿತತ್ತ್ವಕ್ಕೆ ಭಗವಾನ್ ದತ್ತಾತ್ರೇಯರೇ ಪ್ರೇರಣೆ” ಎಂದರು.
ಈ ಸುಸಂದರ್ಭ ಹರಿಕಥಾ ಪರಿಷತ್ (ರಿ.), ಮಂಗಳೂರು ಇವರು ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮದ ಪ್ರಯುಕ್ತ ಆಯೋಜಿಸಿದ ಹರಿಕಥಾ ಸತ್ಸಂಗ ಸಪ್ತಾಹವನ್ನು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಉದ್ಘಾಟಸಿ ಆಶೀರ್ವಚನಗೈದು “ಭಾರತೀಯ ಸಂಸ್ಕøತಿಯ ಎರಡು ಕಣ್ಣುಗಳೆಂದರೆ ಒಂದು ದಾಸ ಸಾಹಿತ್ಯ, ಇನ್ನೊಂದು ವ್ಯಾಸ ಸಾಹಿತ್ಯ. ಇವೆರಡೂ ಸಂಸ್ಕøತಿಯನ್ನು ಉಳಿಸುವ ದೊಡ್ಡ ಕಾರ್ಯವನ್ನು ಮಾಡುತ್ತಿದೆ. ಲೌಕಿಕ-ಅಲೌಕಿಕ ಅಂತಃಸತ್ವವನ್ನು ಬೆಳೆಸುವ ಮೂಲಕ ಬದುಕಿಗೆ ಬೇಕಾಗುವ ಮಾರ್ಗದರ್ಶವನ್ನೀಯುತ್ತಿದೆ. ಯಾಗ ಆರಂಭದ ದಿನದಿಂದ ಪೂರ್ಣಾಹುತಿಯ ತನಕ ಸಪ್ತಾಹ ಪರ್ಯಂತ ಹರಿಕಥಾ ಸತ್ಸಂಗವನ್ನು ಆಯೋಸಿರುವುದು ಅಭಿನಂದನೀಯ” ಎಂದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮುಂಬೈ ಸಮಿತಿಯ ಅಧ್ಯಕ್ಷ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ, ಹರಿಕಥಾ ಪರಿಷತ್‍ನ ಅಧ್ಯಕ್ಷ ಶ್ರೀ ಕೆ. ಮಹಾಬಲ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಅಶೋಕ್‍ಕುಮಾರ್ ಬಿಜೈ, ಪೂಜ್ಯ ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಮಂಗಳೂರು ವಲಯ ಸಂಯೋಜಕರಾದ ಶ್ರೀ ನಾಗರಾಜ ಆಚಾರ್ಯ, ಹಿರಿಯ ಪತ್ರಕರ್ತ ಶ್ರೀ ಮಲಾರ್ ಜಯರಾಮ ರೈ, ಡಾ. ಎಸ್.ಪಿ. ಗುರುದಾಸ್, ಮಂಗಳೂರು ಇವರುಗಳು ಉಪಸ್ಥಿತರಿದ್ದರು.
ಕಲಾಸಾರಥಿ ತೋನ್ಸೆ ಪುಷ್ಕಳಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ.ಎಸ್.ಪಿ. ಗುರುದಾಸ್ ‘ಶ್ರೀಗುರುದತ್ತಾತ್ರೇಯ ಮಹಾತ್ಮ್ಯೆ’ ಹರಿಕಥಾ ಸತ್ಸಂಗ ನಡೆಸಿಕೊಟ್ಟರು. ಶ್ರೀ ರವಿರಾಜ್ ಶೆಟ್ಟಿ ಒಡಿಯೂರು ಹಾರ್ಮೋನಿಯಂನಲ್ಲಿ ಶ್ರೀ ಮಂಗಲ್‍ದಾಸ್ ಗುಲ್ವಾಡಿ ತಬಲದಲ್ಲಿ ಸಹಕರಿಸಿದರು. ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ ನಡೆಯಿತು. ಸಂಜೆ ವಿಶೇಷ ಪಲ್ಲಕ್ಕಿ ಸೇವೆ, ರಂಗಪೂಜೆ, ಬೆಳ್ಳಿರಥೋತ್ಸವ ಸೇವೆ ಸಂಪನ್ನಗೊಂಡಿತು.