ಶ್ರೀಮದ್ಭಗವದ್ಗೀತೆಯಿಂದ ಲೌಕಿಕ-ಅಲೌಕಿಕ ಬದುಕಿಗೆ ಬೆಳಕು – ಒಡಿಯೂರು ಶ್ರೀ
ಪ್ರಪನ್ನ ಪಾರಿಜಾತಾಯ ತೋತ್ರವೇತ್ರೈಕಪಾಣಯೇ |
ಜ್ಞಾನಮುದ್ರಾಯ ಶ್ರೀಕೃಷ್ಣಾಯ ಗೀತಾಮೃತದುಹೇ ನಮಃ ||
ನಿಮಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.
ನಿಮಗೆಲ್ಲಾ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. ಶ್ರೀಕೃಷ್ಣ ಅವತಾರದ ಹಿಂದೆ ಒಂದು ಸತ್ಯ ಅಡಗಿದೆ. ಅಧರ್ಮವು ತಾಂಡವವಾಡುವಾಗ ನಿಯಂತ್ರಿಸುವುದಕ್ಕೆ ಧರ್ಮದ ರೂಪದಲ್ಲಿ ಭಗವಂತ ಅವತಾರ ಎತ್ತುತ್ತಾನೆ. ಅದರಲ್ಲಿ ಕೃಷ್ಣಾವತಾರವೂ ಒಂದು. ಕೃಷ್ಣ ಎನ್ನುವಾಗ ನಮಗೆಲ್ಲ ಮೂಡುವ ಚಿತ್ರ ಆಕರ್ಷಣೆ ಮತ್ತು ಕುತೂಹಲ. ಕೃಷ್ಣನೆಂದರೆ ಆಕರ್ಷಣೆಯ ದೇವರು. ಕ್ಷಣ-ಕ್ಷಣದಲ್ಲೂ ಧರ್ಮವನ್ನು ಉದ್ಧರಿಸುವ, ಅಧರ್ಮವನ್ನು ಮೆಟ್ಟಿ ನಿಲ್ಲುವ ಚಿತ್ರಣಗಳು ಕಂಡುಬರುತ್ತದೆ. ಶ್ರೀಕೃಷ್ಣ(ದೇವಾತ್ಮ)ನ ಮುಖದಿಂದ ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ವೈರಾಗ್ಯಭರಿತನಾದ ಅರ್ಜುನನೆನ್ನುವ ಜೀವಾತ್ಮನಿಗೆ ಬೋಧಿಸಿದ ಗೀತಾಮೃತವೇ ‘ಭಗವದ್ಗೀತೆ’. ಅರ್ಥಾತ್ ಜೀವನಗೀತೆ. ಬದುಕನ್ನು ರೂಪಿಸಬೇಕಾದ ಎಲ್ಲಾ ಮಜಲುಗಳು ಇದರಲ್ಲಿ ಅಡಗಿದೆ. ಒಬ್ಬ ಆದರ್ಶ ಮನೋವೈದ್ಯನೆಂದರೆ ಶ್ರೀಕೃಷ್ಣನೇ. ವಿಶ್ವವೇ ಅಪ್ಪಿಕೊಂಡ, ವಿಶ್ವವೇ ಒಪ್ಪಿಕೊಂಡ ಭಾರತೀಯ ಸಂಸ್ಕøತಿಯ ಪಠ್ಯವೇ ಭಗವದ್ಗೀತೆ. ಲೌಕಿಕ-ಅಲೌಕಿಕ ಬದುಕಿಗೆ ಬೆಳಕು. ಮನೋನಿಯಂತ್ರಣಕ್ಕೆ ಬೇಕಾಗಿರುವಂತಹ ಸೂತ್ರಗಳು ಇದರಲ್ಲಿ ಅಡಗಿದೆ. ಬಂಧನ ಮತ್ತು ಬಿಡುಗಡೆಯ ದಾರಿಯನ್ನು ಭಗವದ್ಗೀತೆ ತೋರಿಸುತ್ತದೆ. ಆಧ್ಯಾತ್ಮದ ಬದುಕಿಗೆ ಬೆಳಕು ಚೆಲ್ಲುತ್ತದೆ. ಅಹಂಕಾರ-ಮಮಕಾರಗಳನ್ನು ದೂರಿಕರಿಸುತ್ತದೆ. ಆದ್ದರಿಂದಲೇ ಗೀತಾಮೃತವು ವಿಶಿಷ್ಟವಾದುದು; ಅತ್ಯಮೂಲ್ಯವಾದುದು.
ತನ್ನನ್ನು ತಾನು ಅರಿತುಕೊಳ್ಳಬೇಕಾದ ‘ತತ್ತ್ವಮಸಿ’ ಅದು ನೀನೇ ಆಗಿರುವಿ ಎನ್ನುವ ವಿಚಾರವನ್ನು, ವಾಸ್ತವ ಸತ್ಯವನ್ನೂ ತಿಳಿಸಿಕೊಡುತ್ತದೆ. ಆತ್ಮನಿಷ್ಠ ಸಂಸ್ಕøತಿಯನ್ನು ಬೆಳೆಸುವರೇ ಅನುಕೂಲಕರವಾಗಿದೆ. ಭಗವದ್ಗೀತೆಯ ಸಾರ ನಮ್ಮೊಂದಿಗಿರಲಿ. ಬದುಕಿನ ಸಾರ ಉಜ್ವಲವಾಗಲಿ. ಶ್ರೀಕೃಷ್ಣ ಸಂದೇಶವನ್ನು ಮುದ್ದುಮಕ್ಕಳಿಗೆ ತಿಳಿಸಿಕೊಟ್ಟಾಗ, ನಾವೂ ನಡೆದುಕೊಂಡಾಗ ಅಂತರಂಗವು ಅರಳುವುದು.
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್