“ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯವೂ ಅಲ್ಲ”-ಒಡಿಯೂರುಶ್ರೀ
ಸ್ವಾತಂತ್ರ್ಯ ವೆಂದರೆ ಸ್ವೇಚ್ಛೆಯಲ್ಲ , ಸ್ವೇಚ್ಛೆ ಸ್ವಾತಂತ್ರ್ಯ ವೂ ಅಲ್ಲ, ಸುವ್ಯವಸ್ಥಿತ ವಾದ ಆಡಳಿತಕ್ಕೆ ಪ್ರಜ್ಞಾವಂತ ಪ್ರಜೆಗಳಿಂದ ಸಾಧ್ಯ. ದೇಶದ ಉನ್ನತಿಯು ದೇಶದ ಕೌಶಲ್ಯಯುತ ಜನರಿಂದ ಅವಲಂಬಿಸಿದೆ,ದೇಶದ ಬಲಿಷ್ಠ ತೆಗೆ ಬೇಕಾದ ರೂಪುರೇಷೆ ಗಳ ತಯಾರಿ ಹಾಗೂ ದೇಶದ ಸಂರಕ್ಷಣೆ ಪ್ರತಿಯೊಬ್ಬರ ಪ್ರಜೆಯ ಕರ್ತವ್ಯ. ಬದುಕು ಶಿಕ್ಷಣದ ಅಗತ್ಯಕ್ಕಾಗಿ ಒಂದರಿಂದ ಐದನೆಯ ತರಗತಿಯವರೆಗೆ ಮಾತೃ ಶಿಕ್ಷಣ ಅಗತ್ಯವೆಂದು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರು ಧ್ವಜಾರೋಹಣಗೈದು ಶುಭ ಸಂದೇಶ ನೀಡಿದರು.ಸಾಧ್ವಿ ಶ್ರೀ ಮಾತಾನಂದಮಯಿಯವರು ಉಪಸ್ಥಿತರಿದ್ದರು. ಶಾಲಾ ಸಂಚಾಲಕ ಸೇರಾಜೆ ಗಣಪತಿ ಭಟ್,ಸಂಸ್ಥಾನದ ಕಾರ್ಯನಿರ್ವಾಹಣ ಅಧಿಕಾರಿ ಪದ್ಮನಾಭ ಒಡಿಯೂರು, ಒಡಿಯೂರು ಶ್ರೀ ಗ್ರಾಮವಿಕಾಸ ಕೇಂದ್ರ ನಿರ್ದೇಶಕ ಕಿರಣ್ ಯು, ಶಾಲಾ ಮುಖ್ಯೋಪಾಧ್ಯಾಯ ಜಯಪ್ರಕಾಶ ಶೆಟ್ಟಿ.ಎ ,ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್ ರೈ ,ಯಶವಂತ್ ವಿಟ್ಲ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ನಿರ್ದೇಶಕ ತಾರನಾಥ ಶೆಟ್ಟಿ ಒಡಿಯೂರು ಹಾಗೂ ವಿದ್ಯಾಪೀಠದ ಎಲ್ಲಾ ಶಿಕ್ಷಕ ಶಿಕ್ಷಕಿಯರು ಉಪಸ್ಥಿತಿತರಿದ್ದರು.