ಜನತಾ ಕಫ್ರ್ಯೂ ಬೆಂಬಲಕ್ಕೆ ಒಡಿಯೂರು ಶ್ರೀ ಕರೆ:
ವಿಶ್ವವನ್ನೇ ಗಂಭೀರವಾಗಿ ಅಲ್ಲೋಲಕಲ್ಲೋಲಗೊಳಿಸಿರುವ ಕರೋನಾ(ಕೋವಿಡ್-19) ವೈರಸ್‍ನ ವಿರುದ್ಧ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರು ಕರೆ ನೀಡಿದ ಪ್ರಾಥಮಿಕ ಹಂತದ ಜನತಾ ಕಫ್ರ್ಯೂಗೆ ಭಾರತೀಯರು ಬೆಂಬಲಿಸಬೇಕು. ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಿಡುವುದು ಎಲ್ಲರ ಕರ್ತವ್ಯವಾಗಿದೆ. ಎಲ್ಲರೂ ಪ್ರಾಮಾಣಿಕವಾದ ಸಹಕಾರದಿಂದ ಈ ಮಹಾಪಿಡುಗನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಸ್ವಯಂಪ್ರೇರಿತರಾಗಿ ಬದ್ಧತೆಯನ್ನು ಕಾಪಾಡಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಜನತೆಯಲ್ಲಿ ವಿನಂತಿಸಿದ್ದಾರೆ.