ಒಡಿಯೂರು ಶ್ರೀಗಳ ಸಂತಾಪ

ವಿಶ್ವವಂದ್ಯ, ವಿಶ್ವಸಂತ, ಉಡುಪಿ ಅಷ್ಟಮಠದ ಹಿರಿಯ ಯತಿಶ್ರೇಷ್ಠರಾದ ಪೂಜ್ಯ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಕೃಷ್ಣೈಕ್ಯರಾದುದು ಭಾರತೀಯ ಸನಾತನ ಪರಂಪರೆಗೆ ತುಂಬಲಾರದ ನಷ್ಟ. ಲೋಕೋದ್ಧಾರದ ಚುಕ್ಕಾಣಿ ಹಿಡಿದು, ಸಮನ್ವಯತೆಯ ಹರಿಕಾರರಾಗಿ ಆಧ್ಯಾತ್ಮಿಕ ಪರಿವ್ರಾಜಕರಾಗಿದ್ದ ಪೂಜ್ಯ ಶ್ರೀಗಳವರು ಅಗಲಿರುವುದು ತುಂಬಾ ದುಃಖವನ್ನುಂಟು ಮಾಡಿದೆ ಎಂದು ಒಡಿಯೂರು ಶ್ರೀಗಳವರು ಸಂತಾಪ ವ್ಯಕ್ತಪಡಿಸಿದ್ದಾರೆ.