ಆಧ್ಯಾತ್ಮ ಭವನ
ಶ್ರೀ ಸಂಸ್ಥಾನದಲ್ಲಿ ವಿದ್ಯಾದಾನ, ಅನ್ನದಾನ, ಅಭಯದಾನದೊಂದಿಗೆ ಆರೋಗ್ಯದಾನದ ರಚನಾತ್ಮಕ ಕೆಲಸ ಕಾರ್ಯಗಳು ಸದ್ದುಗದ್ದಲವಿಲ್ಲದೆ ನಡೆಯುತ್ತದೆ. ನೇತ್ರ್ರ ತಪಾಸಣಾ ಶಿಬಿರ, ಹೃದಯ ಸಂಬಂಧಿ ಕಾಯಿಲೆ ಪರೀಕ್ಷೆ, ರಕ್ತದಾನ ಶಿಬಿರ ಹೀಗೆ ಹಲವು ಆರೋಗ್ಯ ಕಾಪಾಡುವ ಸೇವೆ ಇಲ್ಲಿ ಜರಗುತ್ತದೆ. ಸ್ವತಃ ಪೂಜ್ಯಶ್ರೀಗಳು ವಿವಿಧ ವ್ಯಾದಿಗಳಿಗೆ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡುವರು. ಹಲವರು ಸ್ವಾಮೀಜಿಯವರ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.
ಅಪೂರ್ವ ಔಷಧೀಯ ಗಿಡಗಳನ್ನು ಬೆಳೆಸಿ ಸಂರಕ್ಷಿಸುವ ಹನುಮಗಿರಿ ಆರೋಗ್ಯಧಾಮ ಮತ್ತು ಆಧ್ಯಾತ್ಮ ಪ್ರೇಮಿಗಳಿಗೆ ವಿಶ್ರಾಂತ ಬದುಕನ್ನು ಸುಖಕರಗೊಳಿಸುವ ಆಧ್ಯಾತ್ಮ ಭವನ ನಿರ್ಮಾಣದ ಎರಡು ಯೋಜನೆಗಳ ಬಗ್ಗೆ ಪೂಜ್ಯ ಶ್ರೀಗಳು ಯೋಚಿಸಿದ್ದಾರೆ. ಈ ಯೋಜನೆಗೆ ಹಲವು ಸೇವಾ ಸಂಸ್ಥೆಗಳು ಟ್ರಸ್ಟ್ಗಳು, ವಿದ್ಯಾಸಂಸ್ಥೆಗಳು ಪ್ರೋತ್ಸಾಹದ ಸಹಕಾರ ನೀಡಲು ಮುಂದೆ ಬಂದಿದೆ.