“ಬೆಳಗಿ – ಬೆಳಗಿಸೋಣ” – ಒಡಿಯೂರು ಶ್ರೀನಿಮಗೆಲ್ಲ ದೀಪಾವಳಿ ಹಬ್ಬದ ಶುಭಾಶಯಗಳು.
ದೀಪದಿಂದ ದೀಪ, ಪ್ರೀತಿಯಿಂದ ಪ್ರೀತಿ. ಇದು ಬದುಕಿನ ಸೇತುವಾಗಬೇಕು. ದೀಪಾವಳಿ ಹಬ್ಬವು ಅಂತರ0ಗ-ಬಹಿರ0ಗಗಳನ್ನು ಬೆಳಗುವಂತಿರಲಿ. ಆದರೆ ದೀಪಾವಳಿಯ ನಿಮಿತ್ತವಾಗಿ, ಹಬ್ಬದ ಹಿಗ್ಗುವಿಕೆಯಲ್ಲಿ ಚಟ್-ಚಟ್, ಪಟ್-ಪಟಾಲ್ ಪಟಾಕಿ ಸಿಡಿಸುವಲ್ಲಿ ಎಚ್ಚರವಿರಲಿ. ಇನ್ನೊಬ್ಬರ ಕಣ್ಣಿಗೂ – ಶರೀರಕ್ಕೋ ಹಾನಿಯಾಗದಿರಲಿ. ನಾವು ಇನ್ನೊಬ್ಬರಿಗೆ ತೊಂದರೆ ಕೊಡದೆ, ಅವರ ಕಷ್ಟಗಳಿಗೆ ನೆರವಾಗಬೇಕು. ಇಲ್ಲಿ ನಿಜಾರ್ಥದ ಮಾನವೀಯತೆ ಅಡಕವಾಗಿದೆ. ಮಾನವೀಯ ಮೌಲ್ಯಗಳು ನಮ್ಮಲ್ಲಿ ತುಂಬಿಕೊ0ಡಾಗ ದೀಪಾವಳಿ ಹಬ್ಬವಾಗುತ್ತದೆ, ಅಜ್ಞಾನದ ಅಂಧಾಕಾರವನ್ನು ನೀಗಿಸಿ, ಸುಜ್ಞಾನದ ಬೆಳಕನ್ನು ಪಡೆಯುವುದೇ ದೀಪಾವಳಿ. ಬನ್ನಿ ದೀಪಾವಳಿ ಆಚರಿಸೋಣ. ಬೆಳಗಿ-ಬೆಳಗಿಸೋಣ. ದೀಪದಿಂದ ದೀಪ ಹಚ್ಚೋಣ. ಅಧ್ಯಾತ್ಮದ ಬೆಳಕಿನಿಂದ ಬೆಳಗೋಣ, ಬೆಳಗಿಸೋಣ. ಪ್ರೀತಿ ತುಂಬಿದ ಹೃದಯಗಳು ಬೆಸೆದುಕೊಳ್ಳಲಿ. ರಾಷ್ಟೊತ್ಥಾನಕ್ಕೆ ಇದು ಹೇತು ಆಗಲಿ. ಪ್ರಜ್ಞಾವಂತ ಪ್ರಜೆಗಳಿಂದ ರಾಷ್ಟç ತುಂಬಲಿ.
