“ಭಾರತ ದೇಶದ ಹೃದಯವೇ ಅಧ್ಯಾತ್ಮ”

ಶ್ರೀ ಸಂಸ್ಥಾನದಲ್ಲಿ ಜರಗಿದ ಜನ್ಮದಿನೋತ್ಸವ – ಗ್ರಾಮೋತ್ಸವ ೨೦೨೬ – ಸೇವಾ ಸಂಭ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ಜನ್ಮದಿನದ ಶುಭಸಂದೇಶ
ಆ.೦೮: “ಅರ್ಹ ವ್ಯಕ್ತಿಗಳಿಗೆ ಸೇವೆ ಮಾಡುವ ಮನಸ್ಸು ನಮ್ಮದಾಗಬೇಕು. ಅಹಂಕಾರ, ಮಮಕಾರವನ್ನು ಮೀರಿ ಬದುಕುವ ಕೆಲಸವಾಗಲಿ. ಭಾರತ ದೇಶದ ಹೃದಯವೇ ಆಧ್ಯಾತ್ಮ. ಪರಿಸರ ಉಳಿದರೆ ನಾವು ಉಳಿಯಲು ಸಾಧ್ಯ. ಧರ್ಮ ಸೂತ್ರದಲ್ಲಿ ಬದುಕಿದರೆ ಬದುಕು ಸಾರ್ಥಕ. ಧರ್ಮದ ಸೂತ್ರ ಸಡಿಲವಾಗದಂತೆ ಬದುಕುವ ಜಾಣ್ಮೆ ನಮ್ಮದಾಗಬೇಕು. ಆಧ್ಯಾತ್ಮದ ಬದುಕಿನಲ್ಲಿರುವ ಸುಖ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದ ಆತ್ರೇಯ ಮಂಟಪದಲ್ಲಿ ಜರಗಿದ ಗ್ರಾಮೋತ್ಸವ ೨೦೨೬-ಸೇವಾ ಸಂಭ್ರಮ ಸಮಾರಂಭದಲ್ಲಿ ಪೂಜ್ಯ ಸ್ವಾಮೀಜಿಯವರು ಜನ್ಮದಿನದ ಶುಭಸಂದೇಶ ನೀಡಿದರು.
ವಿಶೇಷ ಆಹ್ವಾನಿತರಾದ ಮಂಗಳೂರು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಮಾತನಾಡಿ “ಗ್ರಾಮೀಣ ಕ್ಷೇತ್ರಗಳಲ್ಲಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಕ್ಷೇತ್ರಗಳಲ್ಲಿ ಒಡಿಯೂರು ಅಗ್ರಸ್ಥಾನದಲ್ಲಿದೆ. ಶ್ರೀ ಸಂಸ್ಥಾನ ಜಿಲ್ಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ದ.ಕ.ಜಿಲ್ಲೆ ಸುಸಂಸ್ಕೃತ ವಿದ್ಯಾವಂತರ ಜಿಲ್ಲೆ. ಇಂತಹ ಧಾರ್ಮಿಕ ಕ್ಷೇತ್ರಗಳು ಸಂಸ್ಕೃತಿಯ ಬೆಳವಣಿಗೆಗೆ ಪೂರಕ. ಯುವ ಸಮಾಜವನ್ನು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಬಳಸಿಕೊಳ್ಳಬೇಕಿದೆ. ಡ್ರಗ್ಸ್ ಪಿಡುಗನ್ನು ದೂರ ಮಾಡುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಜಾಗೃತ ಸಮಾಜ ನಿರ್ಮಾಣದಲ್ಲಿ ಪೋಷಕರ ಪಾತ್ರ ಬಹಳಷ್ಟಿದೆ. ನಾವೆಲ್ಲರು ಒಂದಾಗಿ ಒಟ್ಟಾಗಿ ಸೇರಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸೋಣ” ಎಂದರು.
ಬೆ0ಗಳೂರು ಎಂ.ಆರ್.ಜಿ. ಗ್ರೂಪ್‌ನ ಆಡಳಿತ ನಿರ್ದೇಶಕ ಡಾ. ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ “ನನ್ನ ಹಾಗೂ ಕ್ಷೇತ್ರದ ಸಂಬ0ಧ ಬಹಳಷ್ಟು ಹಳೆಯದು. ಕ್ಷೇತ್ರದ ಶಕ್ತಿ ಅಪಾರ. ಇಂತಹ ಸಭೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಬೇಧ – ಭಾವ ಮಾಡದೆ ಎಲ್ಲರನ್ನೂ ಸಮಾನವಾಗಿ ಕಾಣುವವರು ಒಡಿಯೂರು ಶ್ರೀಗಳು. ಬದುಕಿನಲ್ಲಿ ಸಂಕಲ್ಪ ಶಕ್ತಿ ಅತೀ ಮುಖ್ಯ. ಬದುಕು ಕಟ್ಟಿಕೊಳ್ಳುವಾಗ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ದೇವರ ಅನುಗ್ರಹ ಇದ್ದಾಗ ಎಲ್ಲವನ್ನೂ ಮೀರಿ ಯಶಸ್ಸು ಗಳಿಸಬಹುದು. ಕನಸು ಹಾಗೂ ಸಂಕಲ್ಪ ಇದ್ದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ಎಲ್ಲರ ಪ್ರೀತಿ ವಿಶ್ವಾಸವೇ ದೊಡ್ಡ ಆಸ್ತಿಯಾಗಿದೆ. ಸಂಪಾದನೆಯಲ್ಲಿ ಒಂದ0ಶವನ್ನು ಸಮಾಜಕ್ಕೆ ನೀಡುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಕ್ಷೇತ್ರ ಅಭಿವೃದ್ಧಿಯಲ್ಲಿ ನಮ್ಮಿಂದಾದ ಸಹಕಾರ ನೀಡಲು ನಾನು ಸದಾ ಬದ್ಧನಾಗಿದ್ದೇನೆ” ಎಂದರು.
ಹಿರಿಯ ವಕೀಲರು, ಆನೆಕಲ್ಲು ಶ್ರೀ ಜಲದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಒ. ಶ್ಯಾಮ ಭಟ್ ಅವರು ಮಾತನಾಡಿ, “ಒಡಿಯೂರಿನ ಮಣ್ಣಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ಒಂದಕ್ಕೊ0ದು ಪೂರಕವಾದ ಕೆಲಸ ನಮ್ಮ ಈ ಭಾಗದಲ್ಲಿ ನಡೆಯುತ್ತಿದೆ. ಭಗವಂತನ ಕೃಪೆಯಿಂದ ಎಲ್ಲವನ್ನೂ ಸಾಧಿಸಲು ಸಾಧ್ಯ. ರಾಷ್ಟçಮಟ್ಟಕ್ಕೆ ತಲುಪುವ ಕೆಲಸ ಕ್ಷೇತ್ರದಿಂದ ಆಗುತ್ತಿದೆ. ಪೂಜ್ಯ ಶ್ರೀಗಳ ತಪೋಶಕ್ತಿಯ ಫಲ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿದೆ” ಎಂದರು.
ದೋಹಕತಾರ್ ಎ.ಟಿ.ಎಸ್.ನ ಆಡಳಿತ ನಿರ್ದೇಶಕರಾದ ಡಾ. ರವಿ ಶೆಟ್ಟಿ ಮೂಡಂಬೈಲ್ ಅವರು ಮಾತನಾಡಿ “ಪೂಜ್ಯ ಶ್ರೀಗಳ ಹುಟ್ಟುಹಬ್ಬದ ಆಚರಣೆ ಇತರರಿಗೆ ಮಾದರಿ. ಶ್ರೀಗಳ ಪ್ರೇರಣಾ ಶಕ್ತಿ ಅಪಾರ. ಶ್ರೀಗಳ ಸಂದೇಶ ಸಮಾಜದ ಬದಲಾವಣೆಗೆ ಪೂರಕವಾಗಿದೆ. ಎಲ್ಲರೂ ಜೊತೆಯಾಗಿ ಕ್ಷೇತ್ರದ ಬೆಳವಣಿಗೆಯಲ್ಲಿ ಸಹಕರಿಸೋಣ” ಎಂದರು.
ಗೌರವಾಭಿನ0ದನೆ ಸ್ವೀಕರಿಸಿದ ಖ್ಯಾತ ಪರಿಸರವಾದಿ, ‘ಗ್ರೀನ್ ಹೀರೋ ಆಫ್ ಇಂಡಿಯಾ’ ಡಾ. ಆರ್.ಕೆ. ನಾಯರ್ ಮಾತನಾಡಿ “ಒಡಿಯೂರು ಗಡಿನಾಡ ಸ್ವರ್ಗವಾಗಿದೆ. ಇಲ್ಲಿ ನನಗೆ ನಡೆದ ಸನ್ಮಾನ ಸ್ವರ್ಗದಲ್ಲಿ ನಡೆದ ಸನ್ಮಾನಕ್ಕೆ ಸಮನವಾಗಿದೆ. ವಿಧಿ ಬರಹ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವರಾಶಿಗಳಿಂದ ನಾವು ಕಲಿಯಲು ಬಹಳಷ್ಟಿದೆ. ಪ್ರಕೃತಿಯನ್ನು ಉಳಿಸಿದರೆ ಅದರ ಅನುಗ್ರಹ ನಮಗೆ ಲಭಿಸಲು ಸಾಧ್ಯ. ಪ್ರಕೃತಿಯೊಂದಿಗೆ ಬೆರೆತು ಬಾಳುವ ಕೆಲಸವಾಗಬೇಕು. ಹಸಿರು ಪರಿಸರ ಉಳಿವು ಇಂದಿನ ಅಗತ್ಯ. ಸಾಂಸ್ಕೃತಿಕ, ಧಾರ್ಮಿಕ ಆಚರಣೆಗಳ ಜತೆಯಲ್ಲಿ ಸ್ವಾವಲಂಬಿ ಕೃಷಿ ಬದುಕು ರೂಪಿಸಿಕೊಂಡಾಗ ದೇಶ ಗ್ರಾಮ ಸ್ವರಾಜ್ಯವಾಗುತ್ತದೆ. ಕ್ಷೇತ್ರ ಸಂರಕ್ಷಣೆಯೊ0ದಿಗೆ ಧರ್ಮ ಸಂರಕ್ಷಣೆ ಸಾಧ್ಯ” ಎಂದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿದ್ದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬೋಂಬೆ ಬಂಟ್ಸ್ ಎಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಶ್ರೀ ಶ್ಯಾಮ್ ಎನ್. ಶೆಟ್ಟಿ, ಸಿ.ಬಿ.ಡಿ., ನವಿಮುಂಬೈನ ಉದ್ಯಮಿ ಶ್ರೀ ಭಾಸ್ಕರ ಆರ್. ಶೆಟ್ಟಿ, ಪ್ರಗತಿಪರ ಕೃಷಿಕ ಶ್ರೀ ಶ್ಯಾಮಪ್ರಸಾದ ಕೊಣಲೆ, ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಮುಂಬೈ ಘಟಕದ ಅಧ್ಯಕ್ಷರಾದ ಶ್ರೀ ವಾಮಯ್ಯ ಬಿ. ಶೆಟ್ಟಿ, ಸ್ವಾಗತ ಸಮಿತಿ ಅಧ್ಯಕ್ಷ ಲ| ಎ. ಸುರೇಶ್ ರೈ, ಕಾರ್ಯಾಧ್ಯಕ್ಷ ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಮುಂಬೈ ಉದ್ಯಮಿ ಶ್ರೀ ಬೊಳ್ನಾಡುಗುತ್ತು ಚಂದ್ರಹಾಸ ಎಂ. ರೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮಹಾರಾಷ್ಟç ಮುಂಬೈ ಘಟಕದ ಅಧ್ಯಕ್ಷ ಶ್ರೀ ದಾಮೋದರ ಎಸ್. ಶೆಟ್ಟಿ ಮುಂಬೈ, ಪುಣೆ ಘಟಕದ ಮಾಜಿ ಅಧ್ಯಕ್ಷ ಶ್ರೀ ಉಷಾಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ರೋಹಿತ್ ಡಿ. ಶೆಟ್ಟಿ ನಗ್ರಿಗುತ್ತು, ಒಡಿಯೂರು ಶ್ರೀ ಯುವಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ಡಾ. ಅದೀಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ಗುರುದೇವ ಸೇವಾಬಳಗ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಶ್ರೀ ಪ್ರಕಾಶ್ ಕೆ.ಶೆಟ್ಟಿ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಕದ್ರಿ ನವನೀತ ಶಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಗಳು:
ಬೆಳಗ್ಗೆ ಶ್ರೀ ಗಣಪತಿ ಹವನ, ಮಹಾಪೂಜೆ, ಬಳಿಕ ಶ್ರೀ ರವಿರಾಜ್ ಶೆಟ್ಟಿ ಒಡಿಯೂರು ಮತ್ತು ಬಳಗದವರಿಂದ ನಾಮಸಂಕೀರ್ತನೆ ನಡೆಯಿತು. ಪೂಜ್ಯ ಶ್ರೀಗಳವರನ್ನು ಭವ್ಯ ಮೆರವಣಿಗೆಯಲ್ಲಿ ರಾಜಾಂಗಣಕ್ಕೆ ಸ್ವಾಗತಿಸಲಾಯಿತು.
ರಾಜಾಂಗಣದ ಬಳಿ ನೂತನವಾಗಿ ನಿರ್ಮಿಸಿದ ಪರಶುರಾಮ ದೇವರ ಭವ್ಯ ಮೂರ್ತಿಯನ್ನು ಪೂಜ್ಯ ಸ್ವಾಮೀಜಿಯವರು ಅನಾವರಣಗೊಳಿಸಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಶ್ರೀಗುರುಪಾದುಕಾರಾಧನೆಗೈದರು. ವೇ|ಮೂ| ಚಂದ್ರಶೇಖರ ಉಪಾಧ್ಯಾಯ ಕುರೋಮೂಲೆ ವಿಧಿವಿಧಾನ ನೆರವೇರಿಸಿದರು. ಸಮಿತಿ ಅಧ್ಯಕ್ಷ ಶ್ರೀ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತು ಶ್ರೀಮತಿ ಸರಿತಾ ಎಲ್.ಶೆಟ್ಟಿ ದಂಪತಿ ಗುರುವಂದನೆ ಸಲ್ಲಿಸಿದರು. ಪಂಚದ್ರವ್ಯಗಳಿ0ದ ತುಲಾಭಾರ, ಉಯ್ಯಾಲೆ ಸೇವೆ, ಗುರುಕುಲದ ಪುಟಾಣಿಗಳಿಂದ ಗುರುವಂದನೆ ನಡೆಯಿತು.
ರಾತ್ರಿ ಘಂಟೆ ೭ರಿಂದ ಶ್ರೀ ಸನ್ನಿಧಿಯಲ್ಲಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ, ಮಹಾಪೂಜೆಯೊಂದಿಗೆ ಸಮಾರಂಭ ಸಂಪನ್ನಗೊ0ಡಿತು.
ಸೇವಾ ಚಟುವಟಿಕೆಗಳು: ಒಟ್ಟು ೧೫೩ ಮಂದಿಗೆ ಸಹಾಯಹಸ್ತ ವಿತರಣೆ
೭೬ ಮಂದಿ ಅನಾರೋಗ್ಯಪೀಡಿತರಿಗೆ, ೨೩ ಕುಟುಂಬಕ್ಕೆ ಮನೆ ನಿರ್ಮಾಣ/ದುರಸ್ತಿಗೆ, ೧೯ ಮಂದಿಗೆ ಪ್ರತಿಭಾ ಪುರಸ್ಕಾರ, ೨೮ ಮಂದಿಗೆ ಮರಣ ಸಾಂತ್ವನ, ೭ ಶ್ರದ್ಧಾ ಕೇಂದ್ರಗಳಿಗೆ ಸಹಾಯ
ಗ್ರಾಮೋತ್ಸವದ ವಿಶೇಷತೆ:

  • ಸ್ಥಳೀಯ ೧೩ ಸರಕಾರಿ ಶಾಲೆಗಳಿಗೆ ಗೌರವ ಶಿಕ್ಷಕರ ನೇಮಕ * ಏಕಕಾಲದಲ್ಲಿ ೧೦೯ ಕಡೆಗಳಲ್ಲಿ ಸ್ವಚ್ಛತಾ ಅಭಿಯಾನ * ೧೭ವೈದ್ಯಕೀಯ ಶಿಬಿರಗಳು/ರಕ್ತದಾನ ಶಿಬಿರಗಳು * ೭೨೨ ಉಚಿತ ಕನ್ನಡಕ ವಿತರಣೆ * ಅರ್ಹರಿಗೆ ವೈದ್ಯಕೀಯ ಶುಶ್ರೂಷೆಗೆ ಸಹಾಯ * ಆರೋಗ್ಯ ಮಾಹಿತಿ ಶಿಬಿರ * ಸಸಿ ವಿತರಣೆ – ವನಮಹೋತ್ಸವ ಆಚರಣೆ * ವ್ಯಸನಮುಕ್ತ ಸಮಾಜ – ಜಾಗೃತಿ ಕಾರ್ಯಕ್ರಮ * ಆಟಿಡೊಂಜಿ ದಿನ – ಕೆಸರ ಕಂಡಡೊ0ಜಿ ದಿನ * ಕ್ರೀಡಾಕೂಟಗಳು