“ಒಡಲೆಂಬ ಗದ್ದೆಯಲ್ಲಿ ಅಧ್ಯಾತ್ಮದ ಕೃಷಿ ಮಾಡೋಣ”


ಗ್ರಾಮೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ‘ಕೆರ್ದ ಕಂಡೊಡೊಂಜಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ನಮ್ಮ ಒಡಲೂ ಒಂದು ಗದ್ದೆಯೆ. ಅದರಲ್ಲೂ ಕೃಷಿ ಮಾಡಲು ಸಾಧ್ಯ. ನಾವು ಕೃಷಿ ಮಾಡುವಾಗ ಕಳೆ ಬರುವಂತಹದು ಸಹಜ. ಕಳೆ ತೆಗೆಯುವ ಕೆಲಸ ಮಾಡಿದಾಗ ಸರಿಯಾದ ಫಲವನ್ನು ಪಡೆಯಲು ಸಾಧ್ಯ. ಹಾಗೆಯೇ ಒಡಲೆಂಬ ಗದ್ದೆಯಲ್ಲೂ ಕಾಮ, ಕ್ರೋಧ, ಲೋಭಗಳೆಂಬ ಕಳೆ ಬರುತ್ತದೆ. ಅದನ್ನು ಮೀರಿದಾಗ ಹೃದಯದ ಕೃಷಿಯೂ ಚೆನ್ನಾಗಿ ಆಗಬಹುದು. ಅದುವೇ ಅಧ್ಯಾತ್ಮದ ಕೃಷಿ. ಕೆಸರ್ದ ಕಂಡೊಡೊಂಜಿ ದಿನ ಕಾರ್ಯಕ್ರಮವು ಮಕ್ಕಳಿಗೆ ಮನೋರಂಜನೆಯ ಜೊತೆಗೆ ಕೃಷಿಯು ನೆನಪಿನಲ್ಲಿ ಉಳಿಯಲಿ ಎಂಬ ಪ್ರಯತ್ನವಾಗಿದೆ. ಮಣ್ಣಿನ ಸ್ನಾನಕ್ಕೆ ಆಯುರ್ವೇದದಲ್ಲಿ ವಿಶೇಷ ಸ್ಥಾನವಿದೆ. ಕೃಷಿ ಮೂಲ ಸಂಸ್ಕೃತಿ ನಮ್ಮದು. ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು” ಎಂದು ಪೂಜ್ಯ ಸ್ವಾಮೀಜಿಯವರು ಜನ್ಮದಿನೋತ್ಸವ-ಗ್ರಾಮೋತ್ಸವ ೨೦೨೬ರ ಅಂಗವಾಗಿ ಒಡಿಯೂರು ಶ್ರೀಸಂಸ್ಥಾನದ ಸಾಗುವಳಿ ಭೂಮಿ ಬನಾರಿಯಲ್ಲಿ ಆಯೋಜಿಸಿದ್ದ ‘ಕೆಸರ್ ಕಂಡೊಡೊಂಜಿ ದಿನ’ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿದ್ದರು.
ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಶ್ರೀ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿ ಗುತ್ತು, ಪ್ರಧಾನ ಕೋಶಾಧಿಕಾರಿ ಶ್ರೀ ಎ. ಅಶೋಕ್ಕುಮಾರ್ ಬಿಜೈ, ಉಪಾಧ್ಯಕ್ಷರುಗಳಾದ ಶ್ರೀ ಕೆ.ಎನ್. ವೆಂಕಟರಮಣ ಹೊಳ್ಳ ಕಾಸರಗೋಡು, ಶ್ರೀ ಗಣಪತಿ ಭಟ್ ಸೇರಾಜೆ, ಶ್ರೀಮತಿ ಹರಿಣಾಕ್ಷಿ ಜೆ. ಶೆಟ್ಟಿ ಪುತ್ತೂರು, ಸಂಘಟನಾ ಕಾರ್ಯದರ್ಶಿ ಶ್ರೀ ಶಶಿಧರ ಶೆಟ್ಟಿ ಜಮ್ಮದಮನೆ, ಕ್ರೀಡೋತ್ಸವ ಸಮಿತಿ ಸಂಚಾಲಕ ಶ್ರೀ ರಮೇಶ್ ಶೆಟ್ಟಿ ಅನೆಯಾಲಗುತ್ತು, ಪೊಳಲಿ ಸೈಂಟ್ ಡೊಮನಿಕ್ ಶಾಲಾ ದೈಹಿಕ ಶಿಕ್ಷಕ ಶ್ರೀ ರವೀಂದ್ರ ಶೆಟ್ಟಿ, ಅಳಿಕೆ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಕ ಶ್ರೀ ದೀಪಕ್, ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲ್, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
