“ರಕ್ತದಾನದಲ್ಲಿ ಪ್ರಾಣದಾನದ ಫಲವಿದೆ”

ರಾಜಾಂಗಣದಲ್ಲಿ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ -ಸೇವಾ ಸಂಭ್ರಮದ ಪ್ರಯುಕ್ತ ಸಂಘಟಿಸಿದ ಬೃಹತ್ ವೈದ್ಯಕೀಯ ಸೇವಾ ಶಿಬಿರವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರು ಆಶೀರ್ವಚನಗೈದರು.
“ಮನುಷ್ಯನಿಗೆ ಜೀವನದಲ್ಲಿ ಆರೋಗ್ಯ, ಆಯುಷ್ಯ ಬಹಳಷ್ಟು ಶ್ರೇಷ್ಠವಾದುದು. ಆರೋಗ್ಯ ಕಾಪಿಡಲು ಆಹಾರಪದ್ಧತಿ ಸರಿಯಾಗಿರಬೇಕು. ಋತುಗಳಿಗೆ ಅನುಗುಣವಾದ ಆಹಾರಪದ್ದತಿ ನಮ್ಮದಾಗಬೇಕು. ಬದುಕು ಚಲನಶೀಲವಾದುದು. ದೇಹ ಮತ್ತು ಮನಸ್ಸು ಜೊತೆ ಜೊತೆಯಾಗಿ ಸಾಗಿದಾಗ ಬದುಕು ಹಸನಾಗಬಹುದು. ಬದುಕಿನಲ್ಲಿ ತಾಳ್ಮೆ, ಸಹನೆ ಅತೀ ಮುಖ್ಯ. ರಕ್ತದಾನದಲ್ಲಿ ಪ್ರಾಣದಾನದ ಫಲವಿದೆ. ರಾಷ್ಟ್ರಿಯ ಆದರ್ಶಗಳಲ್ಲಿ ತ್ಯಾಗ ಮತ್ತು ಸೇವೆ ಪ್ರಮುಖವಾದುದು. ಉಪಕಾರ ಸ್ಮರಣೆ ನಮ್ಮದಾಗಲಿ” ಎಂದು ಪೂಜ್ಯ ಸ್ವಾಮೀಜಿಯವರು ರಾಜಾಂಗಣದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ, ಗ್ರಾಮೋತ್ಸವ -ಸೇವಾ ಸಂಭ್ರಮದ ಪ್ರಯುಕ್ತ ಸಂಘಟಿಸಿದ ಬೃಹತ್ ವೈದ್ಯಕೀಯ ಸೇವಾ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನಗೈದರು.
ಶ್ರೀ ಗುರುದೇವ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಒಡಿಯೂರು, ಶಾರದಾ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಂಗಳೂರು, ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ದೇರಳಕಟ್ಟೆ, ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಒನ್‌ಸೈಟ್ ಎಸ್ಪಿಲಾರ್ ಲಕ್ಸೋಟಿಕ್ ಫೌಂಡೇಶನ್ ಬೆಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕನ್ಯಾನ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ., ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮತ್ತು ಒಡಿಯೂರು ಶ್ರೀ ಯುವ ಸೇವಾಬಳಗ, ಒಡಿಯೂರು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಇದರ ಸಹಯೋಗದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ದಿವ್ಯ ಉಪಸ್ಥಿತಿಯನ್ನು ಕರುಣಿಸಿದ್ದರು.
ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಸಂದೀಪ್ ಬೇಕಲ್ ಆರ್, ಮಂಗಳೂರು ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಇನ್‌ಚಾರ್ಜ್ ಶ್ರೀ ಅಶೋಕ್, ದೇರಳಕಟ್ಟೆ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್‌ನ ಪ್ರಾಂಶುಪಾಲರಾದ ಡಾ. ಮಿತ್ರ ಎನ್. ಹೆಗ್ಡೆ, ದೇರಳಕಟ್ಟೆ ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ನ್ಯೂರೋ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾ. ಅನಂತನ್ ಆರ್., ಬೆಂಗಳೂರಿನ ಒನ್‌ಸೈಟ್ ಎಸ್ಪಿಲಾರ್ ಲಕ್ಸೋಟಿಕ್ ಫೌಂಡೇಶನ್‌ನ ವ್ಯವಸ್ಥಾಪಕ ಶ್ರೀ ಧರ್ಮಪ್ರಸಾದ್ ರೈ, ಒಡಿಯೂರು ಶ್ರೀ ವಿವಿಧೋದ್ದೇಶ ಅಧ್ಯಕ್ಷ ಲ| ಎ. ಸುರೇಶ್ ರೈ, ಸಮಿತಿಯ ಅಧ್ಯಕ್ಷ ಶ್ರೀ ಲೋಕನಾಥ ಶೆಟ್ಟಿ ತಾಳಿಪ್ಪಾಡಿ, ಪ್ರಧಾನ ಕೋಶಾಧಿಕಾರಿ ಎ. ಅಶೋಕ್ ಕುಮಾರ್ ಬಿಜೈ, ಉಪಾಧ್ಯಕ್ಷ ಶ್ರೀ ಕೆ.ಎನ್. ವೆಂಕಟರಮಣ ಹೊಳ್ಳ ಕಾಸರಗೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಶ್ರೀ ಮಾತೇಶ್ ಭಂಡಾರಿ ಸ್ವಾಗತಿಸಿದರು. ಶ್ರೀ ಗುರುದೇವ ಐ.ಟಿ.ಐ.ನ ಪ್ರಾಂಶುಪಾಲ ಶ್ರೀ ಪ್ರವೀಣ್‌ಕುಮಾರ್ ಎನ್. ವಂದಿಸಿದರು.