“ತ್ಯಾಗ-ಸೇವಾಗುಣವಿಲ್ಲದ ಬದುಕಿಗೆ ಬೆಲೆಯೇ ಇಲ್ಲ”

ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಮಹಾರಾಷ್ಟç ಘಟಕದ ನವಿಮುಂಬೈ ಸದಸ್ಯರು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀಗಳವರಿಂದ ದಿವ್ಯ ಸಂದೇಶ
“ನಮ್ಮ ಬದುಕಿನಲ್ಲಿ ಸೇವೆ ಹಾಗೂ ತ್ಯಾಗದ ಗುಣಗಳಿದ್ದಾಗ ಮಾತ್ರ ಜೀವನ ಸಮೃದ್ಧಗೊಳ್ಳಲು ಮತ್ತು ಯಾವುದೇ ಕಾರ್ಯಗಳಾದರೂ ಯಶಸ್ಸು ಕಾಣಲು ಸಾಧ್ಯ. ಈ ಪರಿಸರದ ಜನರಲ್ಲಿರುವ ಅರ್ಪಣಾಭಾವ, ತ್ಯಾಗ-ಸೇವಾ ಗುಣಗಳಿಂದಾಗಿಯೇ ಇಲ್ಲೊಂದು ಭವ್ಯವಾದ ಕ್ಷೇತ್ರ ನಿರ್ಮಾಣಗೊಳ್ಳಲು ಸಾಧ್ಯವಾಗಿದೆ. ಇಂದಿನ ಯುವಪೀಳಿಗೆಯೂ ಇಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿದೆ. ತ್ಯಾಗ-ಸೇವಾಗುಣವಿಲ್ಲದ ಬದುಕಿಗೆ ಬೆಲೆಯೇ ಇಲ್ಲ. ಇನ್ನೊಬ್ಬರಿಗೆ ಉಪಕಾರ ಮಾಡುತ್ತಾ ಬದುಕುವ ದೊಡ್ಡ ಗುಣವೇ ನಮ್ಮ ನಿಜವಾದ ಹೃದಯ ಸಂಪತ್ತು” ಎಂದು ಪೂಜ್ಯ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಿದರು.
ನವಿಮುಂಬೈ ನೆರುಲ್‌ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಮಹಾರಾಷ್ಟç ಘಟಕದ ನವಿಮುಂಬೈನ ಗುರುಭಕ್ತರು ಆಯೋಜಿಸಿದ್ದ ಸಾರ್ವಜನಿಕ ಗುರುವಂದನಾ ಕಾರ್ಯಕ್ರಮದಲ್ಲಿ ದೀಪೋಜ್ವಲನಗೊಳಿಸಿ ಆಶೀರ್ವಚನಗೈದ ಪೂಜ್ಯ ಶ್ರೀಗಳವರು “ಇಂದಿನ ಬದಲಾದ ಕಾಲಘಟ್ಟದ ಬಗ್ಗೆ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳು ಸೇವೆಯಾಗಿ ಉಳಿಯದೆ ವೃತ್ತಿಯಾಗಿ ಬದಲಾಗುತ್ತಿರುವುದು ವಿಷಾದನೀಯ. ನಾವು ಮಾಡುವ ಸತ್ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿದು ಇತರರಿಗೆ ಆದರ್ಶವಾಗುತ್ತವೆ. ಪ್ರತಿಯೊಬ್ಬರ ಬದುಕು ರಾಜನಂತಿರಬೇಕು. ಆಲೋಚನೆ ಸಂನ್ಯಾಸಿಯAತಿರಬೇಕು. ಹೆತ್ತವರು ಮಕ್ಕಳಿಗೆ ಆಸ್ತಿ ಮಾಡಲು ಶ್ರಮಿಸುವ ಬದಲು ಮಕ್ಕಳನ್ನೇ ಸತ್ಪçಜೆಗಳನ್ನಾಗಿಸಿ ಆಸ್ತಿಯನ್ನಾಗಿ ರೂಪಿಸಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಮೊಬೈಲ್ ದಾಸರಾಗಿ ಕಾಲ ಕಳೆಯುವ ಬದಲು ಭಜನೆಯಲ್ಲಿ ತೊಡಗುವುದು ಉತ್ತಮ. ಈ ನವಿಮುಂಬೈ ಭಾಗದ ಮಕ್ಕಳು ಭಜನೆಯ ಮೂಲಕ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ” ಎಂದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರ ದಿವ್ಯ ಉಪಸ್ಥಿತಿಯಲ್ಲಿ ಹಿರಿಯರಾದ ಶ್ರೀ ಶೋಧನ್ ಮೆಂಡನ್ ಮತ್ತು ಶ್ರೀಮತಿ ವಸಂತಿ ದಂಪತಿಗಳು ಶ್ರೀ ಗುರುಪಾದುಕಾರಾಧನೆಗೈದರು.
ಈ ಸುಸಂದರ್ಭ ಇತ್ತೀಚಿನ ಪಾಲಿಕಾ ಚುನಾವಣೆಯಲ್ಲಿ ನಗರ ಸೇವಕರಾಗಿ ಪುನರಾಯ್ಕೆಯಾದ ಶ್ರೀ ಸುರೇಶ್ ಜಿ. ಶೆಟ್ಟಿಯವರನ್ನು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು “ಹಿರಿಯರ ಮತ್ತು ಗುರುಗಳ ಅನುಗ್ರಹ ನಮ್ಮ ಮೇಲಿದ್ದಾಗ ಮಾತ್ರ ಜೀವನದಲ್ಲಿ ಅಂದುಕೊAಡ ನಿರ್ದಿಷ್ಟ ಗುರಿ ತಲುಲಪು ಸಾಧ್ಯ. ನನ್ನ ಜೀವನದ ಪ್ರತಿ ಒಳ್ಳೆಯ ಕಾರ್ಯದಲ್ಲೂ ಪೂಜ್ಯ ಶ್ರೀಗಳವರ ಆಶೀರ್ವಾದ ಇದೆ. ಸನ್ಮಾನದಿಂದ ಸಾಮಾಜಿಕ ಜವಾಬ್ದಾರಿಯು ಇನ್ನಷ್ಟು ಹೆಚ್ಚಿಸಿದೆ. ಸಮಾಜಸೇವೆ ಮಾಡಲು ಮತ್ತು ರಾಜಕೀಯವಾಗಿ ಬೆಳೆಯಲು ನನಗೆ ಪ್ರೇರಣೆಯಾಗಿದೆ” ಎಂದರು.
ಬಳಗದ ಅಧ್ಯಕ್ಷ ಶ್ರೀ ದಾಮೋದರ ಎಸ್.ಶೆಟ್ಟಿ ಹಾಗೂ ಪದಾಧಿಕಾರಿಗಳು, ಕ್ಷೇತ್ರದ ಟ್ರಸ್ಟಿಗಳು ಉಪಸ್ಥಿತರಿದ್ದರು. ಆರಂಭದಲ್ಲಿ ಜೈ ಗುರುದೇವ ಭಜನಾ ಮಂಡಳಿ ನವಿಮುಂಬೈ ಇವರಿಂದ ಭಜನಾ ಸತ್ಸಂಗ ಜರಗಿತು.
ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಶ್ರೀ ಮೋಹನ್‌ದಾಸ್ ಶೆಟ್ಟಿ ಸನ್ಮಾನಿತರ ಪರಿಚಯ ವಾಚಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ಶ್ರೀ ಪೇಟೆಮನೆ ಪ್ರಕಾಶ್ ಕೆ. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.