ಒಡಿಯೂರು ಶ್ರೀ ಸಂಸ್ಥಾನದಲ್ಲಿ ನಾಗರ ಪಂಚಮಿ ಮಹೋತ್ಸವ – ಸಾರ್ವಜನಿಕ ಆಶ್ಲೇಷ ಬಲಿಪೂಜೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ೧೭-೦೮-೨೦೨೬ರಂದು ನಾಗರ ಪಂಚಮಿ ಮಹೋತ್ಸವ – ಸಾರ್ವಜನಿಕ ಆಶ್ಲೇಷ ಬಲಿ ಪೂಜೆ ವಿವಿಧ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಪೂರ್ವಾಹ್ಣ ಗಂಟೆ ೯ಕ್ಕೆ ಸ್ವಯಂ ಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಬಳಿಕ ಆಶ್ಲೇಷಬಲಿಪೂಜೆ ಆರಂಭ, ಬೆಳಿಗ್ಗೆ ೧೧.೩೦ಕ್ಕೆ ಪೂಜ್ಯ ಶ್ರೀಗಳವರು ನಾಗರ ಪಂಚಮಿಯ ಶುಭಸಂದೇಶ ನೀಡಲಿದ್ದಾರೆ. ಮಧ್ಯಾಹ್ನ ಗಂಟೆ ೧೨.೩೦ಕ್ಕೆ ಮಹಾಮಂಗಳಾರತಿ, ಆರಾಧ್ಯದೇವರಿಗೆ ಕಲ್ಪೋಕ್ತಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಹಾಸಂತರ್ಪಣೆ ಜರಗಲಿದೆ. ಅಪರಾಹ್ಣ ಗಂಟೆ ೨.೩೦ರಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ‘ಲಂಕಾದಹನ-ಕುಮಾರ ವಿಜಯ’ ಯಕ್ಷಗಾನ ಬಯಲಾಟ. ರಾತ್ರಿ ರಂಗಪೂಜೆ, ಮಹಾಪೂಜೆ ನಡೆಯಲಿದೆ.
