ಜುಲೈ ೧೨ರಂದು ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಒಳಾಂಗಣ ಸ್ಪರ್ಧೆಗಳು


ಆಗಸ್ಟ್ ೮ ಶನಿವಾರ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗುವ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ – ಗುರುವಂದನಾ ಕಾರ್ಯಕ್ರಮದಂಗವಾಗಿ ದಿನಾಂಕ ೧೨-೦೭-೨೦೨೬ನೇ ಆದಿತ್ಯವಾರ ಬೆಳಿಗ್ಗೆ ಗಂಟೆ ೯.೩೦ರಿಂದ ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಒಳಾಂಗಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪುರುಷರಿಗೆ: * ವೃಕ್ಷಾಸನ * ಗೋಣಿಚೀಲ ಓಟ * ಸಂಗೀತ ಕುರ್ಚಿ * ನೆನಪು ಶಕ್ತಿ ಸ್ಪರ್ಧೆ
ಮಹಿಳೆಯರಿಗೆ: * ಸಂಗೀತ ಕುರ್ಚಿ * ಆನೆಗೆ ಬಾಲ ಇಡುವುದು * ರಂಗೋಲಿ ಸ್ಪರ್ಧೆ * ನೆನಪು ಶಕ್ತಿ ಸ್ಪರ್ಧೆ
ಬಾಲಕಿಯರಿಗೆ (೬ರಿಂದ ೧೦ನೇ ತರಗತಿ ಮಕ್ಕಳಿಗೆ): * ಸಂಗೀತ ಕುರ್ಚಿ *ರಂಗೋಲಿ ಸ್ಪರ್ಧೆ * ಶ್ರೀಮದ್ಭವದ್ಗೀತೆ ಕಂಠಪಾಠ (೨ನೇ ಅಧ್ಯಾಯ / ಶ್ಲೋಕ ೬-೧೦) * ದೇಶಭಕ್ತಿಗೀತೆ (ಯಾವುದೇ ಭಾಷೆಯ) * ಕಾಲಿಗೆ ಕಟ್ಟಿದ ಬಲೂನ್ ಒಡೆಯುವ ಸ್ಪರ್ಧೆ ಬಾಲಕರಿಗೆ (೬ರಿಂದ ೧೦ನೇ ತರಗತಿ ಮಕ್ಕಳಿಗೆ): * ದೇಶಭಕ್ತಿಗೀತೆ (ಯಾವುದೇ ಭಾಷೆಯ) * ಶ್ರೀಮದ್ಭವದ್ಗೀತೆ ಕಂಠಪಾಠ (೧ನೇ ಅಧ್ಯಾಯ / ಶ್ಲೋಕ ೧-೫) * ಪೆನ್ಸಿಲ್ ಡ್ರಾಯಿಂಗ್(೩೦ ನಿಮಿಷ) * ಕಾಲಿಗೆ ಕಟ್ಟಿದ ಬಲೂನ್ ಒಡೆಯುವ ಸ್ಪರ್ಧೆ ಮುಕ್ತ ಸ್ಪರ್ಧೆಗಳು: ಹಿರಿಯರಿಗೆ: (೧೦ನೇ ತರಗತಿಯಿಂದ ಮೇಲ್ಪಟ್ಟು) * ಚೀಟಿ ಹೆಕ್ಕಿ ಅಭಿನಯಿಸುವುದು (೫ ನಿಮಿಷ) * ಹನುಮಾನ್‌ಚಾಲೀಸಾ ಪಠಣ (೫ ಜನರ ತಂಡ)

  • ಭಗವದ್ಗೀತೆ ಪಠಣ-೫ನೇ ಅಧ್ಯಾಯ / ಮೊದಲ ೮ ಶ್ಲೋಕಗಳು * ದಾಸರ ಪದಗಳ ಭಜನಾ ಅಂತ್ಯಾಕ್ಷರಿ (೬ ಜನರ ತಂಡ) ಕಿರಿಯರ ವಿಭಾಗ: (೧ರಿಂದ ೫ನೇ ತರಗತಿ) * ಯಾವುದಾರೂ ೩ ಶ್ಲೋಕ ಕಂಠಪಾಠ * ಭಕ್ತಿಗೀತೆ (ದಾಸರಪದ) * ಸಂಗೀತ ಕುರ್ಚಿ ಮೊದಲಾದ ಸ್ಪರ್ಧೆಗಳು ಜರಗಲಿವೆ.