ಜುಲೈ ೫ರಂದು ಒಡಿಯೂರು ಶ್ರೀ ಸಂಸ್ಥಾನದ ಸಾಗುವಳಿ ಭೂಮಿ ಬನಾರಿಯಲ್ಲಿಕೆಸರ್‌ದ ಕಂಡೊಡೊಂಜಿ ದಿನ
ಆಗಸ್ಟ್ ೮ ಶನಿವಾರ ಒಡಿಯೂರು ಶ್ರೀ ಸಂಸ್ಥಾನದ ರಾಜಾಂಗಣದಲ್ಲಿ ಜರಗುವ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ-ಗ್ರಾಮೋತ್ಸವ – ಗುರುವಂದನಾ ಕಾರ್ಯಕ್ರಮದಂಗವಾಗಿ ದಿನಾಂಕ ೦೫-೦೭-೨೦೨೬ನೇ ಆದಿತ್ಯವಾರ ಬೆಳಿಗ್ಗೆ ಗಂಟೆ ೯.೩೦ರಿಂದ ಶ್ರೀ ಸಂಸ್ಥಾನದ ಸಾಗುವಳಿ ಭೂಮಿ ಬನಾರಿಯಲ್ಲಿ ‘ಕೆಸರ್‌ದ ಕಂಡೊಡೊAಜಿ ದಿನ’ ಕೆಸರುಗದ್ದೆ ಆಟೋಟಗಳು ಜರಗಲಿದೆ. ಮುಕ್ತ ಸ್ಪರ್ಧೆ : ನಿಧಿ ಶೋಧನೆ, ೫ ರಿಂದ ೭ನೇ ತರಗತಿಯ ಮಕ್ಕಳಿಗೆ : (ಬಾಲಕ-ಬಾಲಕಿಯರಿಗೆ ಪ್ರತ್ಯೇಕ) – * ಮಡಿಕೆ ಒಡೆಯುವ ಸ್ಪರ್ಧೆ * ಕೆಸರುಗದ್ದೆ ಓಟ * ಹಾಳೆಯಲ್ಲಿ ಎಳೆಯುವುದು – ೮ರಿಂದ ೧೦ನೇ ತರಗತಿಯ ಮಕ್ಕಳಿಗೆ : (ಬಾಲಕ-ಬಾಲಕಿಯರಿಗೆ ಪ್ರತ್ಯೇಕ) * ಕೆಸರುಗದ್ದೆ ಓಟ * ಹಾಳೆಯಲ್ಲಿ ಎಳೆಯುವುದು * ಮಡಿಕೆ ಒಡೆಯುವ ಸ್ಪರ್ಧೆ * ಮೂರು ಕಾಲಿನ ಓಟ * ಗೋಪುರ ರಚನೆ (೧೨ ಜನರ ತಂಡ), ಸಾರ್ವಜನಿಕರಿಗೆ : (ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ) * ಗೋಪುರ ರಚನೆ (೧೨ ಜನರ ತಂಡ) * ಮಡಿಕೆ ಒಡೆಯುವ ಸ್ಪರ್ಧೆ (ಮಹಿಳೆಯರಿಗೆ ಮಾತ್ರ) * ಹಗ್ಗಜಗ್ಗಾಟ (೭ ಜನರ ತಂಡ) * ಮೂರು ಕಾಲಿನ ಓಟ, ಹಿರಿಯ ನಾಗರಿಕರಿಗೆ: * ಓಟ * ಮಡಿಕೆ ಒಡೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
