ಶ್ರೀ ಒಡಿಯೂರು ಸಂಸ್ಥಾನದಲ್ಲಿ ಅಖಂಡ ಭಗವನ್ನಾಮ ಸಂಕೀರ್ತನೆ ಆರಂಭ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ರಾಮನವಮಿಯಿಂದ ಮೊದಲ್ಗೊಂಡು ಎಪ್ರಿಲ್ ೨ ಹನುಮಜ್ಜಯಂತಿಯ ತನಕ ಜರಗುವ ಅಖಂಡ ಭಗವನ್ನಾಮ ಸಂಕೀರ್ತನೆ. ಮಾರ್ಚ್೨೭ ಶ್ರೀ ರಾಮನವಮಿಯ ದಿನ ಪ್ರಾತಃಕಾಲ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಶ್ರೀ ರಾಮ ಪರಿವಾರ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಅಖಂಡ ನಾಮಸಂಕೀರ್ತನೆ ಆರಂಭಗೊ0ಡಿತು. ಸಾಧ್ವಿ ಶ್ರೀ ಮಾತಾನಂದಮಯೀಯವರು ಸಂಕೀರ್ತನೆಗೈದರು. ಶ್ರೀ ಸಂಸ್ಥಾನದ ಎಲ್ಲಾ ಸಹಸಂಸ್ಥೆಗಳ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.
