“ಹೊರೆಕಾಣಿಕೆ ಉತ್ಸವಕ್ಕೆ ಮುನ್ನುಡಿಯಾಗಿದೆ”


ವಿವಿಧ ಭಾಗಗಳಿಂದ ಶ್ರೀ ಸಂಸ್ಥಾನಕ್ಕೆ ಮೆರವಣಿಗೆಯ ಮೂಲಕ ಆಗಮಿಸಿದ ಹೊರೆಕಾಣಿಕೆಯನ್ನು ಸ್ವಾಗತಿಸಿ, ಉಗ್ರಾಣದಲ್ಲಿ ದೀಪೋಜ್ವಲನಗೊಳಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಜ.೨೫: “ಹೊರೆಕಾಣಿಕೆ ಎಂಬುದು ಉತ್ಸವಕ್ಕೆ ಮುನ್ನುಡಿಯಾಗಿದೆ, ಬೇರೆ ಬೇರೆ ಭಾಗಗಳಿಂದ ಕ್ಷೇತ್ರಕ್ಕೆ ಬೇಕಾಗುವ ಸಾಮಾಗ್ರಿಗಳು ಬಂದು ತಲುಪಿದೆ. ಹೊರೆಕಾಣಿಕೆ ಬಹಳ ದೊಡ್ಡ ಸಂಭ್ರಮವಾಗಿ ನಡೆದಿದೆ. ಬೇರೆ ಬೇರೆ ಕಡೆಗಳಿಂದ ಗುರುಬಂಧುಗಳು ಒಟ್ಟು ಸೇರಿ ಜಾತ್ರೆಗೆ ಬೇಕಾದ ಸುವಸ್ತುಗಳನ್ನು ಒಪ್ಪಿಸಿದ್ದಾರೆ. ಈ ಮಹತ್ಕಾರ್ಯದಲ್ಲಿ ಪಾಲುಪಡೆದ ಎಲ್ಲರಿಗೂ ಒಳಿತಾಗಲಿ” ಎಂದು ತುಳುನಾಡ ಜಾತ್ರೆ-ಶ್ರೀಒಡಿಯೂರು ರಥೋತ್ಸವ-ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಸಮರ್ಪಣೆಗೊಂಡ ಹೊರೆಕಾಣಿಕೆಯನ್ನು ಸ್ವಾಗತಿಸಿ, ಉಗ್ರಾಣದಲ್ಲಿ ದೀಪೋಜ್ವಲನಗೊಳಿಸಿ ಪೂಜ್ಯ ಶ್ರೀಗಳವರು ಆಶೀರ್ವಚನಗೈದರು.
ಈ ಸುಸಂದರ್ಭ ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಶ್ರೀ ಒಡಿಯೂರು ರಥೋತ್ಸವ ಸಮಿತಿಯ ಕೋಶಾಧಿಕಾರಿ ಲ| ಎ. ಸುರೇಶ್ ರೈ, ಪ್ರಧಾನ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ, ಸಂಘಟನಾ ಕಾರ್ಯದರ್ಶಿ ಶ್ರೀ ಮಾತೇಶ್ ಭಂಡಾರಿ, ಸ್ವಾಗತ ಸಮಿತಿ ಸಂಚಾಲಕÀ ಶ್ರೀ ವೇಣುಗೋಪಾಲ ಮಾರ್ಲ, ಹೊರೆಕಾಣಿಕೆ ಸಮಿತಿ ಸಂಚಾಲಕ ಶ್ರೀ ದೇವಿಪ್ರಸಾದ್ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಶ್ರೀ ಎ. ಅಶೋಕ್‌ಕುಮಾರ್ ಬಿಜೈ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ, ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನಿರ್ದೇಶಕ ಕಿರಣ್ ಉರ್ವ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಶ್ರೀ ಗಣೇಶ್ ದೇವಾಡಿಗ, ಶ್ರೀ ಅಶೋಕ್ ಕುಮಾರ್ ಯು.ಎಸ್. ಹಾಗೂ ಎಲ್ಲಾ ಸಹಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
ದ.ಕ., ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಂದ ಹಲವಾರು ವಾಹನಗಳ ಮೂಲಕ ಹೊರೆಕಾಣಿಕೆ ಶ್ರೀ ಸಂಸ್ಥಾನಕ್ಕೆ ಆಗಮಿಸಿತು.