“ಆದರ್ಶ ಜೀವನಕ್ಕೆ ಪಠ್ಯವೇ ರಾಮಾಯಣ ಮತ್ತು ಮಹಾಭಾರತ”

ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ
ಎ.೧೨: “ವಸಂತ ಋತುವಿನಲ್ಲಿ ರಾಮನವಮಿ ಮತ್ತು ಹನುಮಜ್ಜಯಂತಿ ವಿಶೇಷವಾದ ಪರ್ವಕಾಲ. ಧರ್ಮವು ಬದುಕಿನ ಪಯಣಕ್ಕೆ ಹೆದ್ದಾರಿ. ಆ ಮೂಲಕ ಇಹದಿಂದ ಪರಕ್ಕೆ ಸೇರಲು ಸಾಧ್ಯ. ಅಧಿ ಆತ್ಮನ ಅರಿವು ಮೂಡಿಸಲು ಅಧ್ಯಾತ್ಮ ಸಹಕಾರಿ. ರಾಮಾಯಣ ಎಂದರೆ ರಾಮನ ನಡೆ. ರಾಮಾಯಣದ ಜೀವಾಳ ಆಂಜನೇಯ. ರಾಮ ಅಂತರ್ಗತ ಮುಖ್ಯಪ್ರಾಣ. ಮುಖ್ಯಪ್ರಾಣಾಂತರ್ಗತ ರಾಮ. ರಾಮ ವನವಾಸಕ್ಕೆ ತೆರಳಿದ ಉದ್ದೇಶವೇ ಭೋಗದ ಜೀವನದಲ್ಲಿ ಸುಖವಿಲ್ಲ, ಕ್ಷಣಿಕ ಸುಖ ಮಾತ್ರ ಇರುತ್ತದೆ. ತ್ಯಾಗದ ಜೀವನದಿಂದ ಸುಖವಿದೆ ಎಂಬ ಅರಿವಿನಿಂದ. ನಮ್ಮ ಜೀವನದಲ್ಲಿ ಸುಖ-ದುಃಖಗಳು ಬರುತ್ತಾ ಇರುತ್ತವೆ. ಇದರಿಂದ ಅನುಭವವೂ ಆಗುತ್ತದೆ. ಆಗ ನಾವು ಪರಿಶುದ್ಧರಾಗಲು ಅನುಕೂಲವಾಗುತ್ತದೆ. ಅಧ್ಯಾತ್ಮಿಗಳಾದಾಗ ಸಮಾಜದ ಎಲ್ಲಾ ಗೊಂದಲಗಳಿಗೆ ಇತಿ ಹಾಡಲು ಸಾಧ್ಯ. ರಾಷ್ಟçದಲ್ಲಿ ಶಾಂತಿ, ನೆಮ್ಮದಿ ನೆಲೆಯಾಗಲು ರಾಮನ ಆದರ್ಶಗಳೊಂದಿಗೆ ರಾಷ್ಟçಪ್ರೇಮವನ್ನು ಬೆಳೆಸಿಕೊಳ್ಳಬೇಕು. ನಮ್ಮ ಜೀವನದಲ್ಲಿ ನಿತ್ಯ ಯಜ್ಞ ನಡೆಯಬೇಕು. ಆದರ್ಶ ಜೀವನಕ್ಕೆ ಪಠ್ಯವೇ ರಾಮಾಯಣ ಮತ್ತು ಮಹಾಭಾರತ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಜರಗಿದ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ-ಅಖಂಡ ಭಗವನ್ನಾಮಸಂಕೀರ್ತನೆಯ ಮಂಗಲೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಅವರು ಒಡಿಯೂರು ಶ್ರೀ ಗುರುದೇವ ಆಧ್ಯಾತ್ಮ ಕೇಂದ್ರದ ಪೋಷಕ ಅಭಿಯಾನದ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿದರು.
ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯಸಾನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕಾಧ್ಯಕ್ಷ ಶ್ರೀ ದಾಮೋದರ ಎಸ್. ಶೆಟ್ಟಿ ನೇರುಳ್, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಶ್ರೀ ಲೋಕನಾಥ ಜಿ.ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಮುಂಬೈ ಘಟಕದ ಮಾಜಿ ಅಧ್ಯಕ್ಷೆ ಶ್ರೀಮತಿ ರೇವತಿ ವಾಮಯ್ಯ ಶೆಟ್ಟಿ, ಒಡಿಯೂರು ಶ್ರೀ ಯುವ ಸೇವಾ ಬಳಗ, ಮುಂಬೈ ಘಟಕದ ಅಧ್ಯಕ್ಷ ಡಾ. ಅದಿಪ್ ಕೆ.ಶೆಟ್ಟಿ, ಮಂಗಳೂರಿನ ಉದ್ಯಮಿ ಶ್ರೀ ಭರತ್‌ಭೂಷಣ್, ಮುಂಬೈನ ಸಚೀಂದ್ರನಾಥ್ ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಸರ್ವಾಣಿ ಪಿ.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಪಿ.ಆರ್.ಒ. ಶ್ರೀ ಮಾತೇಶ್ ಭಂಡಾರಿ ಸ್ವಾಗತಿಸಿ, ಒಡಿಯೂರುದ ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಭಗವನ್ನಾಮ ಸಂಕೀರ್ತನೆ ಮಂಗಲ:
ಪ್ರಾತಃಕಾಲ ಅಖಂಡ ಭಗವನ್ನಾಮ ಸಂಕೀರ್ತನೆಯ ಮಂಗಲ, ಆರಾಧ್ಯದೇವರ ಪೂಜೆಯ ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ನಾಗತಂಬಿಲ ಜರಗಿತು. ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಶ್ರೀಮದ್ರಾಮಾಯಣ ಮಹಾಯಜ್ಞ ಆರಂಭವಾಯಿತು. ಮಧ್ಯಾಹ್ನ ಯಜ್ಞದ ಪೂರ್ಣಾಹುತಿ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ‘ನರಕಾಸುರ ವಧೆ’ ಯಕ್ಷಗಾನ ಪ್ರದರ್ಶನಗೊಂಡಿತು. ಬಳಿಕ ಶ್ರೀಮತಿ ಶ್ರುತಿ ಹರಿಹರ ಅವರ ನೃತ್ಯ ಮಂಥನ ತಂಡದವರಿAದ ನೃತ್ಯ ಕಾರ್ಯಕ್ರಮ ಏರ್ಪಟ್ಟಿತು. ರಾತ್ರಿ ಸಾಮೂಹಿಕ ಶ್ರೀ ಹನುಮದ್ವçತಪೂಜೆ, ರಂಗಪೂಜೆ, ಬೆಳ್ಳಿರಥೋತ್ಸವ, ಉಯ್ಯಾಲೆ ಸೇವೆ ನಡೆಯಿತು.
೧೪೪ ಗಂಟೆಗಳ ಭಗವನ್ನಾಮ ಸಂಕೀರ್ತನೆಯಲ್ಲಿ ರಾಜ್ಯದ ವಿವಿಧೆಡೆಗಳ ೧೦೮ ಭಜನಾ ಮಂಡಳಿಗಳು ಪಾಲ್ಗೊಂಡಿದ್ದವು.