ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ

|| ಜೈ ಗುರುದೇವ್ ||
ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ
ದಿನಾಂಕ ೧೨-೦೪-೨೦೨೫ನೇ ಶನಿವಾರ ಶ್ರೀ ಸಂಸ್ಥಾನದಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ- ಅಖಂಡ ಭಗವನ್ನಾಮಸಂಕೀರ್ತನೆಯ ಮಂಗಲೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಪ್ರಾತಃಕಾಲ ಅಖಂಡ ಭಗವನ್ನಾಮ ಸಂಕೀರ್ತನೆಯ ಮಂಗಲ, ಆರಾಧ್ಯದೇವರ ಪೂಜೆಯ ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ. ನಂತರ -ಶ್ರೀಮದ್ರಾಮಾಯಣ ಮಹಾಯಜ್ಞ ಆರಂಭ. ಬೆಳಗ್ಗೆ ಗಂಟೆ ೧೧.೩೦ಕ್ಕೆ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ. ಮಧ್ಯಾಹ್ನ ಯಜ್ಞದ ಪೂರ್ಣಾಹುತಿ, ಪ್ರಸಾದ ವಿತರಣೆ, ಮಹಾಸಂತರ್ಪಣೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನರಕಾಸುರ ವಧೆ ಯಕ್ಷಗಾನ. ಶ್ರೀಮತಿ ಶ್ರುತಿ ಹರಿಹರ ಅವರ ‘ನೃತ್ಯ ಮಂಥನ’ ತಂಡದವರಿAದ ನೃತ್ಯ ಕಾರ್ಯಕ್ರಮ. ಸಂಜೆ ಸಾಮೂಹಿಕ ಶ್ರೀ ಹನುಮದ್ವçತಪೂಜೆ, ರಾತ್ರಿ ರಂಗಪೂಜೆ, ಬೆಳ್ಳಿರಥೋತ್ಸವ, ಉಯ್ಯಾಲೆ ಸೇವೆ ಜರಗಲಿರುವುದು.