ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ-ಅಖಂಡ ಭಗವನ್ನಾಮ ಸಂಕೀರ್ತನೆ

ಒಡಿಯೂರು ಶ್ರೀ ಸಂಸ್ಥಾನಲ್ಲಿ ಶ್ರೀ ಹನುಮಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ-ಅಖಂಡ ಭಗವನ್ನಾಮ ಸಂಕೀರ್ತನೆ
ದಿನಾಂಕ 12-04-2025 ನೇ ಶನಿವಾರ ಶ್ರೀ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯಮಾರ್ಗದರ್ಶನದಲ್ಲಿ ಶ್ರೀ ಹನುಮಜ್ಜಯಂತಿ ಮಹೋತ್ಸವ-ಶ್ರೀಮದ್ರಾಮಾಯಣ ಮಹಾಯಜ್ಞ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಈ ಸುಸಂದರ್ಭ ತಾ.06-04-2025 ಶ್ರೀರಾಮನವಮಿಯಿಂದ ಮೊದಲ್ಗೊಂಡು ತಾ.12-04-2025 ಶ್ರೀಹನುಮಜಯಂತಿಯವರೆಗೆ ಅಖಂಡ ಭಗವನ್ನಾಮಸಂಕೀರ್ತನೆಯು ಜರಗಲಿರುವುದು. ಶ್ರೀರಾಮನವಮಿಯ ಶುಭದಿನ ಸೂರ್ಯೋದಯಕ್ಕೆ ಪೂಜ್ಯ ಶ್ರೀಗಳವರು ತಮ್ಮ ದಿವ್ಯ ಹಸ್ತದಿಂದ ದೀಪ ಪ್ರಜ್ವಲಿಸುವ ಮೂಲಕ ಅಖಂಡ ಭಗವನ್ನಾಮ ಸಂಕೀರ್ತನೆಗೆ ಚಾಲನೆ ನೀಡಲಿದ್ದಾರೆ.