“ಮಾತೆಯರು ಜಾಗೃತಿಗೊಂಡಾಗ ಸಮಾಜ ಪರಿವರ್ತನೆ ಸಾಧ್ಯ” ಶ್ರೀ ಒಡಿಯೂರು ರಥೋತ್ಸವ ತುಳುನಾಡ ಜಾತ್ರೆ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಪೂಜ್ಯ ಶ್ರೀಗಳವರಿಂದ ಧರ್ಮಸಂದೇಶ




ಫೆ.೦೭: “ಜಾತ್ರೆಯ ಸಂಭ್ರಮದಲ್ಲಿ ನಾವಿದ್ದೇವೆ. ನಮ್ಮ ಜೀವನ ಪಯಣದ ಹಾದಿಯ ಅರಿವು ನಮಗಿರಬೇಕು. ಧಾರ್ಮಿಕ ಶ್ರದ್ದಾಕೇಂದ್ರಗಳು ನಮಗೆ ದಾರಿದೀವಿಗೆ. ಧರ್ಮ ಶಿಕ್ಷಣ ಕೊಡುವ ಕೆಲಸ ಶ್ರದ್ಧಾಕೇಂದ್ರಗಳಿAದ ಆಗಬೇಕಿದೆ. ತಾಯಿಯ ಹೆಸರಿನಲ್ಲಿ ಮಮತೆ ಇದೆ. ಮಾತೆಯರು ಜಾಗೃತಿಯಾದಾಗ ಸಮಾಜ ಪರಿವರ್ತನೆ ಸಾಧ್ಯ. ಯುವ ಶಕ್ತಿ ಎದ್ದು ನಿಂತಾಗ ಭವ್ಯ ಭಾರತ ನಿರ್ಮಾಣ ಆದಂತೆ. ಎಳೆಯ ಮಕ್ಕಳಿಗೆ ನಾವು ಆದರ್ಶವಾಗಬೇಕು. ಮಾನವೀಯ ಮೌಲ್ಯ ತುಂಬುವ ಕೆಲಸ ಎಲ್ಲರಿಂದಲೂ ಆಗಬೇಕಿದೆ. ಯುವಜನತೆ ದಾರಿತಪ್ಪದಂತೆ ಸಂಸ್ಕಾರ-ಸAಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಸಮಾಜದಲ್ಲಿ ಸಮಾನತೆಯ ಕೊರತೆ ಇದೆ. ಸಂಪತ್ತಿನ ಸದ್ಭಳಕೆ ಮಾಡಿದಾಗ ಸಾರ್ಥಕತೆ ಪ್ರಾಪ್ತಿ. ದಾನ ಗುಣ ನಮ್ಮಲ್ಲಿರಬೇಕು. ಶ್ರೀ ಸಂಸ್ಥಾನದ ಬೆಳವಣಿಗೆಯಲ್ಲಿ ಭಕ್ತರ ಪಾತ್ರ ಮಹತ್ವದ್ದು. ಜೀವನದಲ್ಲಿ ತಾಳ್ಮೆ ಸಹನೆ ಅತೀ ಅಗತ್ಯ. ಧರ್ಮ ಶಿಕ್ಷಣ ಸಿಗುವ ಜಾಗದಲ್ಲಿ ಜಾತ್ರೆಗೆ ಮಾರ್ಗದರ್ಶನ ಸಿಗಬೇಕು. ಜಾತ್ರೆಯಲ್ಲಿ ಸಾಗುವ ರಥ ಜೀವನ ಪಥಕ್ಕೆ ಸ್ಫೂರ್ತಿಯಾಗಲಿ” ಎಂದರು.
ದಿವ್ಯ ಉಪಸ್ಥಿತಿಯನ್ನು ಕರುಣಿಸಿದ್ದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀರವರು ಆಶೀರ್ವಚನ ನೀಡಿ “ನಮ್ಮ ಭಾವನೆಗೆ ತಕ್ಕ ಪ್ರತಿಫಲ ಪ್ರಾಪ್ತಿ. ಗುರುಗಳ ಕೃಪೆಯಿಂದ ಎಲ್ಲವೂ ಸಾಧ್ಯ. ಗುರುಗಳ ಸಾನಿಧ್ಯದಲ್ಲಿ ಆಧ್ಯಾತ್ಮದ ಚಿತ್ತಹರಿಸಿ ಆನಂದ ಹೊಂದೋಣ. ಒತ್ತಡ ರಹಿತ ಸಂತೃಪ್ತ ಜೀವನ ಸಾಗಿಸೋಣ. ರಥೋತ್ಸವದಂತಹ ಕಾರ್ಯಕ್ರಮ ಎಲ್ಲದಕ್ಕೂ ಎಲ್ಲರಿಗೂ ಪ್ರೇರಣೆ ನೀಡಲಿ” ಎಂದರು.
ಇAಡಿಯನ್ ಮೆಡೆಕಲ್ ಎಸೋಸಿಯೇಶನ್ ಮಂಗಳೂರು ಇದರ ನಿಕಟಪೂರ್ವ ಕಾರ್ಯದರ್ಶಿ ಡಾ. ಅವಿನ್ ಆಳ್ವ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪ್ರಶಾಂತ ಪಕ್ಕಳ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಪುಣೆ ಘಟಕದ ಅಧ್ಯಕ್ಷ ಶ್ರೀ ಪ್ರಭಾಕರ ವಿ.ಶೆಟ್ಟಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬೈ ಇದರ ಅಧ್ಯಕ್ಷೆ ಶ್ರೀಮತಿ ಶ್ವೇತಾ ಚಂದ್ರಹಾಸ ರೈ, ಆಕಾಶವಾಣಿ ಸಹಾಯಕ ನಿರ್ದೇಶಕ ಶ್ರೀ ಪಿ.ಎಸ್.ಸೂರ್ಯನಾರಾಯಣ ಭಟ್, ಉಡುಪಿ ಗಾರ್ಡನ್ ಹೋಟೆಲ್ನ ಮ್ಹಾಲಕ ಶ್ರೀ ರಾಮಪ್ರಸಾದ್ ಕಾಸರಗೋಡು, ಮುಂಬೈ ಶ್ರೀಪ್ಯಾಕ್ ಕಂಟೇರ್ಸ್ ಪ್ರೆöÊ.ಲಿ.ನ ಆಡಳಿತ ನಿರ್ದೇಶಕ ಶ್ರೀ ಬಾಲಕೃಷ್ಣ ಎಂ.ರೈ, ಕೇರಳ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಅಜಿತ್ಕುಮಾರ್ ಪಂದಳA, ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರರತ್ನ ಶ್ರೀ ಎ. ಸುರೇಶ್ ರೈ, ಒಡಿಯೂರು ರಥೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ರೀ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಥೋತ್ಸವದ ಪ್ರಾಯೋಜಕರಿಗೆ ಪ್ರಸಾದ ಮಂತ್ರಾಕ್ಷತೆ ನೀಡಿ ಪೂಜ್ಯ ಶ್ರೀಗಳವರು ಹರಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವತಿಯಿಂದ ಅನಾರೋಗ್ಯ ಪೀಡಿತರಿಗೆ ಮತ್ತು ಆಶಕ್ತರಿಗೆ ಹಾಗೂ ಸಂಘ ಸಂಸ್ಥೆಗಳು ಸೇರಿ ೧೨೭ಮಂದಿಗೆ ಒಟ್ಟು ೧೨.೬೭ ಲಕ್ಷ ರೂಪಾಯಿಗಳಷ್ಟು ಆರ್ಥಿಕ ನೆರವು ನೀಡಲಾಯಿತು.
ಒಡಿಯೂರು ಗುರುದೇವ ಸೇವಾ ಬಳಗದ ಮುಂಬೈ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಕಾಶ ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಎಸ್.ರೈ ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ದಯಾನಂದ ಶೆಟ್ಟಿ ವಂದಿಸಿದರು. ರಥೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮದಂಗವಾಗಿ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ, ವೇ|ಮೂ| ಚಂದ್ರಶೇಖರ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಪರಾಹ್ಣ ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ತಾಲೀಮು ಪ್ರದರ್ಶನ ಹಾಗೂ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನಗೊಂಡಿತು. ಸಂಜೆ ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಪುತ್ತೂರು ಇದರ ವಿದ್ಯಾರ್ಥಿಗಳಿಂದ ವಿದುಷಿ ರುಕ್ಮಿಣಿ ಉದಯ ಇವರ ನಿರ್ದೇಶನದಲ್ಲಿ ‘ನೃತ್ಯರಂಜಿನಿ’ ನೃತ್ಯ ಕಾರ್ಯಕ್ರಮ ಜರಗಿತು.
ರಾತ್ರಿ ೭ಗಂಟೆಗೆ ಶ್ರೀ ದತ್ತಾಂಜನೇಯ ದೇವರ ವೈಭವೋಪೇತ ರಥಯಾತ್ರೆ ಶ್ರೀ ಸಂಸ್ಥಾನದಿAದ ಗ್ರಾಮ ದೈವಸ್ಥಾನ ಮಿತ್ತನಡ್ಕಕ್ಕೆ ತೆರಳಿ, ಕನ್ಯಾನ ಪೇಟೆ ಸವಾರಿ, ಬಳಿಕ ಸದ್ಗುರು ಶ್ರೀ ನಿತ್ಯಾನಂದ ಮಂದಿರದಲ್ಲಿ ವಿಶೇಷ ಪೂಜೆಯ ಬಳಿಕ ಶ್ರೀ ಸಂಸ್ಥಾನಕ್ಕೆ ರಥವು ಹಿಂದಿರುಗಿತು.
ವಿಶೇಷ ಆಕರ್ಷಣೆ: ವಿವಿಧ ಭಜನಾ ಮಂಡಳಿಗಳಿAದ ಕುಣಿತ ಭಜನೆ, ಕನ್ಯಾನ ಶ್ರೀ ಗುರುದೇವ ಕಲ್ಯಾಣಮಂಟಪದ ಬಳಿ ಪಾವಂಜೆ ಮೇಳದವರಿಂದ ‘ತ್ರಿಜನ್ಮ ಮೋಕ್ಷ’ ಯಕ್ಷಗಾನ ಬಯಲಾಟ, ಮಿತ್ತನಡ್ಕ ಶ್ರೀ ಮಲರಾಯಿ ದೇವಸ್ಥಾನದ ಬಳಿ ಟಿ.ಕೆ.ಭಟ್ ಮತ್ತು ಬಳಗದವರಿಂದ ‘ಸ್ವರಾಭಿಷೇಕ’, ಕಮ್ಮಾಜೆಯಲ್ಲಿ ಅಮ್ಮಾ ಗ್ರೂಪ್ಸ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ತಬ್ಧಚಿತ್ರಗಳು, ಚೆಂಡೆಮೇಳ, ಬ್ಯಾಂಡ್ಸೆಟ್, ಬೊಂಬೆ ಪ್ರದರ್ಶನ, ಸಿಡಿಮದ್ದು ಪ್ರದರ್ಶನ ನಡೆಯಿತು.