“ಶಿಸ್ತು – ಸಂಯಮ ಬದುಕಿನ ಎರಡು ಕಣ್ಣುಗಳಿದ್ದಂತೆ”

‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪೂಜ್ಯ ಶ್ರೀಗಳವರಿಂದ ಅನುಗ್ರಹ ಸಂದೇಶ
“ದೇಶದ ಅಂದ ‘ವಂದೇ ಮಾತರಂ’ ಗೀತೆಯಲ್ಲಿದೆ. ಈ ನಿಟ್ಟಿನ ಈ ಒಂದು ಕಾರ್ಯಕ್ರಮದ ಆಯೋಜನೆಯಾಗಿದೆ. ಶಿಸ್ತು-ಸಂಯಮ ಬದುಕಿನ ಎರಡು ಕಣ್ಣುಗಳಿದ್ದಂತೆ. ಸೈನಿಕರ ಶಿಸ್ತು ಇತರರಿಗೆ ಮಾದರಿ. ಸೈನಿಕರ ತ್ಯಾಗದ ಮನೋಭಾವನೆ ಅಭಿನಂದನೀಯ. ಅವರ ತ್ಯಾಗದಿಂದ ದೇಶ ಇಂದಿಗೂ ಭದ್ರವಾಗಿದೆ. ದೇಶದ ಭದ್ರತೆಯಲ್ಲಿ ಸೈನಿಕರ ಪಾತ್ರ ವಿಶೇಷವಾದುದು. ಆದರ್ಶ ರಾಷ್ಟ್ರ ನಿರ್ಮಾಣದಲ್ಲಿ ಸೈನಿಕರ ಪಾತ್ರ ಏನೆಂಬುದನ್ನು ಅರಿಯುವ ಕೆಲಸವಾಗಬೇಕು. ತಾಯಿ ಸಂಸ್ಕೃತಿ-ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡೋಣ” ಎಂದು ಪೂಜ್ಯ ಶ್ರೀಗಳವರು ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಮುಖ್ಯ ಅತಿಥಿಗಳಾದ ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀ ಸತೀಶ್ ಕುಂಪಲ ಇವರು ಮಾತನಾಡಿ “ಇದೊಂದು ಐತಿಹಾಸಿಕ ಕಾರ್ಯಕ್ರಮ. ಆಧ್ಯಾತ್ಮಿಕ ಶಕ್ತಿ ಒಡಿಯೂರು ಶ್ರೀಗಳವರು. ಧಾರ್ಮಿಕ ವಿಚಾರಗಳ ಬಗ್ಗೆ ಆಳವಾಗಿ ಅರಿತಿರುವವರು ಶ್ರೀಗಳವರು. ತುಳುವನ್ನು ಬೆಳೆಸುವ ಕೆಲಸ ಶ್ರೀ ಸಂಸ್ಥಾನದಿ0ದ ನಿತ್ಯ ನಿರಂತರವಾಗಿ ನಡೆಯುತ್ತಿದೆ. ತುಳು ಗಟ್ಟಿಯಾಗಲು ಇಂತಹ ಗುರುಗಳ ಪ್ರಯತ್ನ ಅಪಾರ. ದೇಶದ ಮೇಲೆ ಪ್ರೀತಿ ಇಟ್ಟು ದೇಶಕಟ್ಟುವ ಕೆಲಸ ಮಾಡೋಣ. ಪೂಜ್ಯ ಶ್ರೀಗಳ ಕೆಲಸಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಂತು ಸಹಕರಿಸೋಣ” ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಶ್ರೀ ದುರ್ಗಾಪ್ರಸಾದ್ ರೈ ಕುಂಬ್ರ ಇವರು ಮಾತನಾಡಿ “ಬಹಳ ಸುಂದರ ಕಾರ್ಯಕ್ರಮ ಇದಾಗಿದೆ. ಇಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳು ಬಹಳಷ್ಟು ವಿಶೇಷತೆಗಳಿಂದ ಕೂಡಿರುತ್ತದೆ. ಪ್ರತಿಯೊಂದೂ ಅರ್ಥಪೂರ್ಣ ಕಾರ್ಯಕ್ರಮವಾಗಿರುತ್ತದೆ” ಎಂದರು.
ಶ್ರೀ ಕದ್ರಿ ನವನೀತ ಶೆಟ್ಟಿ ಇವರು ಅಧ್ಯಕ್ಷೀಯ ಭಾಷಣ ಮಾಡಿ “ಸಂಘಟನೆಯಿ0ದ ಕಾರ್ಯಸಾಧನೆ ಸಾಧ್ಯ. ಧರ್ಮ ಉಳಿಯಲು ರಾಷ್ಟ್ರೀಯತೆ ಅಗತ್ಯ. ರೈತರಿಗೆ ಹಾಗೂ ಸೈನಿಕರಿಗೆ ಗೌರವ ನೀಡುವ ಕೆಲಸ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳದ ಮೂಲಕ ನಡೆದಿದೆ. ತುಳು ಶಬ್ದ ಭಂಡಾರವನ್ನು ಉಳಿಸುವ ಕೆಲಸವಾಗಬೇಕು. ಸೈನಿಕರ ಶಿಸ್ತು ಅಪಾರ. ನಿಜಾರ್ಥದ ತುಳುವರು ನಾವಾಗಬೇಕು. ಸಂಸ್ಕೃತಿ ಕಲಿಸುವ ಕೆಲಸ ನಮ್ಮ ಮನೆಯಿಂದಲೇ ಆಗಬೇಕಿದೆ” ಎಂದರು.
ದೇಶ ಸೇವೆ ಮಾಡಿದ ಯೋಧರಿಗೆ ‘ತುಳುಸಿರಿ’ ಪ್ರಶಸ್ತಿ ಪ್ರಧಾನ:
ಸಮಾರಂಭದಲ್ಲಿ ನಿವೃತ್ತ ಯೋಧರಾದ ಶ್ರೀ ಎ.ಕೆ. ಜಯಚಂದ್ರನ್ ಮಂಗಳೂರು, ಶ್ರೀ ರಾಜೇಶ್ ಹೊಳ್ಳ ಮಂಗಳೂರು, ಶ್ರೀ ಡಿ. ಚಂದಪ್ಪ ಮೂಲ್ಯ, ಶ್ರೀ ದೀಪಕ್ ಅಡ್ಯಂತಾಯ ಮಂಗಳೂರು, ಶ್ರೀ ಸುಧೀರ್ ಪೈ ಮಂಗಳೂರು, ಶ್ರೀ ಪೂವಪ್ಪ ಪೂಜಾರಿ, ಶ್ರೀ ಅಪ್ಪು ಶೆಟ್ಟಿ ಮಂಗಳೂರು, ಶ್ರೀ ಜನಾರ್ದನ ಮಂಗಳೂರು, ಶ್ರೀ ಎಂ.ಬಿ. ರಾಜ ಮಂಗಳೂರು, ಶ್ರೀ ಪುರುಷೋತ್ತಮ ಕೆ.ಸಿ., ಶ್ರೀ ಭಾಸ್ಕರ ಮುಲ್ಕಿ, ಶ್ರೀ ಸುಂದರ ಗೌಡ ಕೆ. ನಡುಬೈಲ್, ಶ್ರೀ ವಸಂತ ಗೌಡ ದೇವಸ್ಯ, ಶ್ರೀ ನಾಗಪ್ಪ ಗೌಡ ಕೇಪುಳು, ಶ್ರೀ ಸುಂದರ ಕೆ. ನೈತ್ತಾಡಿ, ಶ್ರೀ ಪುರಂದರ ಡಿ. ಚಂದಳಿಕೆ, ಶ್ರೀ ಚಂದ್ರಶೇಖರ ಗೌಡ ಎ. ಪಡ್ನೂರು, ಶ್ರೀ ವಸಂತಕುಮಾರ್ ಬಿ. ಪುತ್ತೂರು, ಶ್ರೀ ಮೋನಪ್ಪ ಪೂಜಾರಿ ಪಾಣೆಮಂಗಳೂರು, ಶ್ರೀ ವೆಂಕಪ್ಪ ಗೌಡ ಪುಣಚ, ಶ್ರೀ ಬಾಲಕೃಷ್ಣ ಗೌಡ ಮಂಗಲಪದವು, ಶ್ರೀ ಚಂದ್ರ ಕೆ. ವಿಟ್ಲ, ಬಾಲಕೃಷ್ಣ ರೈ ಗೊಳ್ತಮಜಲು, ಶ್ರೀ ಕುಶಾಲಪ್ಪ ಗೌಡ ವಿಟ್ಲ, ಶ್ರೀ ಧನಂಜಯ ಗೌಡ ಮಂಗಲಪದವು, ಶ್ರೀ ಎಡ್ವಿನ್ ರಾಡ್ರಿಗಸ್ ವಿಟ್ಲ, ಶ್ರೀ ದಾಸಪ್ಪ ಪೂಜಾರಿ ಮಂಗಲಪದವು, ಶ್ರೀ ಅಶೋಕ ವಿಟ್ಲ, ಶ್ರೀ ಕರಿಬಸಪ್ಪ, ಬಿ.ಸಿ.ರೋಡ್, ಶ್ರೀ ಐವಾನ್ ಮೆನೆಜಸ್ ಬಿ.ಸಿ.ರೋಡ್, ಶ್ರೀ ರಮೇಶ್ ಕನ್ಯಾನ, ಶ್ರೀ ಮೋಹನ್‌ದಾಸ್ ಮಂಗಳೂರು, ಶ್ರೀ ಸೂರ್ಯಕಾಂತ್ ಮಂಗಳೂರು ಇವರುಗಳನ್ನು ‘ತುಳುಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಕು| ವಾರುಣಿ ಆಚಾರ್ಯ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಐ.ಟಿ.ಐ. ಪ್ರಾಂಶುಪಾಲ ಶ್ರೀ ಪ್ರವೀಣ್‌ಕುಮಾರ್ ವಂದಿಸಿದರು.
ಸಾ0ಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಂಕಾಲ ಮುಂಬೈಯ ಉದ್ಯಮಿ ಶ್ರೀ ವಾಮಯ್ಯ ಬಿ. ಶೆಟ್ಟಿ ಇವರ ಪ್ರಾಯೋಜಕತ್ವದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ಛಾಯಾನಂದನ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.