“ಯಜ್ಞ-ಯಾಗಾದಿಗಳಿಂದ ಭಗವಂತನ ಅನುಸಂದಾನ”




ಒಡಿಯೂರು ಶ್ರೀ ಸಂಸ್ಥಾನದಲ್ಲಿ ಸಂಪನ್ನಗೊ0ಡ ಶ್ರೀ ಹನುಮಜ್ಜಯಂತಿ ಮಹೋತ್ಸವದ ಧರ್ಮಸಭೆಯಲ್ಲಿ ದಿವ್ಯ ಉಪಸ್ಥಿತಿಯನ್ನು ಕರುಣಿಸಿ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ
“ಹನುಮಜಯಂತಿಯ ಪರ್ವಕಾಲದಲ್ಲಿ ನಾವಿದ್ದೇವೆ. ಭಾರತದ ಅಂತಃಸತ್ವ ಆಧ್ಯಾತ್ಮ. ಆಧ್ಯಾತ್ಮದಿಂದ ಶಾಶ್ವತ ಸುಖ ಸಾಧ್ಯ. ಅಂತರ0ಗವನ್ನು ಅರಳಿಸುವ ಉತ್ಸವಗಳು ನಮ್ಮ ದೇಶದಲ್ಲಿ ನಡೆಯುತ್ತಿದೆ. ಸಮಸ್ಯೆಗಳಿಗೆ ಪರಿಹಾರ ಜ್ಞಾನ. ಯಜ್ಞ-ಯಾಗಾದಿಗಳಿಂದ ಭಗವಂತನ ಅನುಸಂದಾನ ಸಾಧ್ಯ. ಸಾತ್ವಿಕ ದಾನಕ್ಕೆ ಅಧಿಕ ಫಲಪ್ರಾಪ್ತಿ. ಇಲ್ಲಿ ನಿಜಾರ್ಥದ ಸೇವಾ ಯಜ್ಞ ಸಂಪನ್ನವಾಗಿದೆ. ರಾಮನ ಸೇವೆ ಮಾಡಿದರೆ ರಾಷ್ಟç ಸೇವೆ ಮಾಡಿದಂತೆ. ನವಮಿಗೂ ರಾಮನಿಗೆ ನೇರ ಸಂಬ0ಧವಿದೆ. ದೀಪವನ್ನು ಬೆಳಗಿ ಹುಟ್ಟು ಹಬ್ಬ ಆಚರಿಸುವ ಕೆಲಸವಾಗಬೇಕು. ಒಂದು ಶಬ್ದವೂ ಕೂಡ ಬೆಳಕಾಗುತ್ತದೆ. ಅದರ ಅರಿವು ನಮಗಿರಬೇಕು. ಸುಖ-ದುಃಖ ನಾಣ್ಯದ ಎರಡು ಮುಖಗಳಿದ್ದಂತೆೆ. ಕ್ಷೀಣವಾಗುತ್ತಿರುವ ಕುಟುಂಬ ಪದ್ದತಿಯನ್ನು ಕುಟುಂಬ ಪ್ರೀತಿಯಿಂದ ತುಂಬಲು ಸಾಧ್ಯ” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಸಂಪನ್ನಗೊ0ಡ ಶ್ರೀ ಹನುಮಜ್ಜಯಂತಿ ಮಹೋತ್ಸವದ ಧರ್ಮಸಭೆಯಲ್ಲಿ ದಿವ್ಯ ಉಪಸ್ಥಿತಿಯನ್ನು ಕರುಣಿಸಿ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡಿದರು.
ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಉದ್ಯಮಿ ಶ್ರೀ ವಾಮಯ್ಯ ಬಿ.ಶೆಟ್ಟಿ ಮುಂಬೈ, ಪುಣೆಯ ಉದ್ಯಮಿ ಶ್ರೀ ಉಷಾಕುಮಾರ್ ಶೆಟ್ಟಿ, ಕೊಲ್ಲಂನ ಆರ್.ಟಿ.ಒ. ಶ್ರೀ ಅಜಿತ್ಕುಮಾರ್ ಪಂದಳ, ಒಡಿಯೂರು ಶ್ರೀ ಯುವಸೇವಾ ಬಳಗ, ಮುಂಬೈ ಘಟಕದ ಅಧ್ಯಕ್ಷ ಡಾ. ಅದೀಪ್ ಕೆ.ಶೆಟ್ಟಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಸಹಕಾರ ರತ್ನ ಲ| ಎ. ಸುರೇಶ್ ರೈ, ಸಂಘಟಕ, ಉದ್ಯಮಿ ಶ್ರೀ ಶಂಕರ ಶೆಟ್ಟಿ ವಿರಾರ್, ಮುಂಬೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಹೂವಿನಹಡಗಲಿ ಘಟಕದ ಅಧ್ಯಕ್ಷ ಶ್ರೀ ನೀಲಕಂಠಪ್ಪ, ದಾವಣಗೆರೆ ಘಟಕದ ಅಧ್ಯಕ್ಷ ಶ್ರೀ ಟಿ. ಹನುಮಂತಪ್ಪ ಇವರು ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯ ಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಆಶಯಗೀತೆ ಹಾಡಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ಸ್ವಾಗತಿಸಿದರು. ಶ್ರೀ ಸಂತೋಷ್ ಭಂಡಾರಿ ವಂದಿಸಿದರು. ಒಡಿಯೂರುದ ತುಳುಕೂಟದ ಅಧ್ಯಕ್ಷ ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಪ್ರಾತಃಕಾಲ ಅಖಂಡ (ನಿರಂತರ ೧೪೪ ಗಂಟೆಗಳ) ಭಗವನ್ನಾಮ ಸಂಕೀರ್ತನೆ ಮಂಗಲ ನಡೆಯಿತು. ಬೆಳಿಗ್ಗೆ ನಿತ್ಯಪೂಜೆಯ ಬಳಿಕ ಸ್ವಯಂಭೂ ನಾಗರಾಜ ಸನ್ನಿಧಿಯಲ್ಲಿ ನಾಗತಂಬಿಲ, ನಾಗಪೂಜೆ ನಡೆಯಿತು. ಯಜ್ಞದ ಪೂರ್ಣಾಹುತಿ, ಮಹಾಪೂಜೆ ಬಳಿಕ ಮಹಾಸಂತರ್ಪಣೆ ನಡೆಯಿತು. ಸಾಯಂಕಾಲ ಸಾಮೂಹಿಕ ಶ್ರೀ ಹನುಮದ್ವ್ರತ ಪೂಜೆ, ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸಂಪನ್ನಗೊ0ಡಿತು. ರಾತ್ರಿ ಶ್ರೀ ಹನುಮಂತ ದೇವರಿಗೆ ಉಯ್ಯಾಲೆ ಸೇವೆ ನಡೆಯಿತು.
