“ಭಾರತೀಯ ಪರಂಪರೆಗೆ ಪೂರಕವಾಗಿ ಹುಟ್ಟುಹಬ್ಬ ಆಚರಣೆ ಅನುಸರಣೀಯ”
ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಮಾತೃ ಪೂಜನ ಕಾರ್ಯಕ್ರಮ-
ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಣೆ – ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ಸಾಮೂಹಿಕವಾಗಿ ಪೂಜೆಯನ್ನು ನಡೆಸುವುದರಿಂದ ವಿಶೇಷವಾದ ಮಹತ್ವವಿದೆ. ಮಕ್ಕಳು, ಪೋಷಕರು, ಶಿಕ್ಷಕರು ಸೇರಿ ಇಲ್ಲಿ ತ್ರಿವೇಣಿ ಸಂಗಮವಾಗಿದೆ. ಮಾತೃತ್ವ ಸೇರಿಕೊಂಡಾಗ ಮಾತ್ರ ಮಾತೆಗೆ ಬಲಬರುವುದು. ತಾಯಿ ಮತ್ತು ಮಗುವಿನ ಸಂಬAಧವೇ ವಾತ್ಸಲ್ಯ. ಮಕ್ಕಳಲ್ಲಿ ಪ್ರೀತಿಯೂ ಬೇಕು, ಭೀತಿಯೂ ಬೇಕು. ಮಕ್ಕಳ ನಿಯಂತ್ರಣಕ್ಕೆ ಭೀತಿಯ ಅಗತ್ಯವಿದೆ. ಮಕ್ಕಳು ದಾರಿ ತಪ್ಪದಂತೆ ಆಗಬೇಕಾದರೆ ಸಂಸ್ಕಾರ ಅಗತ್ಯ. ಮಕ್ಕಳನ್ನು ಬೆಳೆಸುವ ರೀತಿ ಹೇಗಿದೆ ಎಂಬ ಅರಿವಿರಬೇಕು. ಭಾರತೀಯ ಪರಂಪರೆಗೆ ಪೂರಕವಾಗಿ ಹುಟ್ಟುಹಬ್ಬವನ್ನು ಆಚರಿಸುವುದು ಅನುಸರಣೀಯ. ಭಾರತೀಯ ಪರಂಪರೆ ಬಗ್ಗೆ ಬೆಳಕು ಚೆಲ್ಲಬೇಕು. ಎಲ್ಲ ದೇಶಗಳೂ ನೋಡುವುದು ಭಾರತದೆಡೆಗೆ. ಆದರೆ ನಾವು ಮಾತ್ರ ಪಾಶ್ಚಮಾತ್ಯ ಸಂಸ್ಕೃತಿಯ ಕಡೆಗೆ ವಾಲುತ್ತಿರುತ್ತೇವೆ. ಅದಾಗಬಾರದು ಎಂಬ ದೃಷ್ಟಿಯಿಂದ ಇದಕ್ಕೆ ಪೂರಕವಾಗಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾರತವನ್ನು ಭಾರತಮಾತೆ ಎಂದು ಕರೆಯಲಾಗುತ್ತದೆ. ಮಕ್ಕಳಲ್ಲಿ ಸಂಸ್ಕಾರದ ಬೀಜಗಳನ್ನು ಬಿತ್ತಿ, ಸದ್ವಿಚಾರಗಳನ್ನು ತುಂಬಿ ಭಾರತದ ಸತ್ಪçಜೆಗಳನ್ನಾಗಿಸುವ.” ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ವತಿಯಿಂದ ಜರಗಿದ ಮಾತೃ ಪೂಜನ ಕಾರ್ಯಕ್ರಮ-ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಆಚರಣೆಯನ್ನು ಉದ್ಘಾಟಿಸಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಸಾಧ್ವಿ ಶ್ರೀ ಮಾತನಂದಮಯೀಯವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ “ಮಹಿಳೆ ಎಲ್ಲಿ ಗೌರವಿಸಲ್ಪಡುತ್ತಾಳೊ ಅಲ್ಲಿ ದೇವತೆಗಳ ಅನುಗ್ರಹವಿರುತ್ತದೆ ಎಂಬ ಉಕ್ತಿಯಿದೆ. ಆಗ ಸುಖ-ಶಾಂತಿಯು ನೆಲೆಸುತ್ತದೆ. ಸ್ತಿçà ಮತ್ತು ಶ್ರೀಯ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಶ್ರೀ ಎಂದರೆ ಲಕ್ಷಿö್ಮÃ. ಗೃಹಲಕ್ಷಿö್ಮಯೇ ತಾಯಿ. ಮಾತೆಯೇ ಗೃಹದ ಲಕ್ಷಿö್ಮÃ. ಯುವಜನಾಂಗ ಜಾಗೃತವಾಗಬೇಕಾದರೆ ಮಾತೆಯರ ಪಾತ್ರ ಮಹತ್ತರವಾದುದು. ಮಕ್ಕಳಿಗೆ ತಾಯಿಯೇ ರೋಲ್‌ಮಾಡೆಲ್. ನಮ್ಮ ನೆಲದ ಸಂಸ್ಕೃತಿ, ಆಚಾರ-ವಿಚಾರವನ್ನು ತಿಳಿಸಿ, ಬೆಳೆಸುವ ಕಾರ್ಯ ಮಾತೆಯರಿಂದಲೇ ಸಾಧ್ಯ. ಯಕ್ಷಪ್ರಶ್ನೆಯಲ್ಲಿ ಬರುವಂತಹ ವಿಚಾರವೇ ಭೂಮಿಗಿಂತ ಗುರುತರ ತಾಯಿ, ಆಕಾಶಕ್ಕಿಂತ ಎತ್ತರ ತಂದೆ. ಈ ರೀತಿಯಾಗಿ ಗೌರವಭಾವನೆಯನ್ನು ಭಾರತೀಯ ಪರಂಪರೆಯಲ್ಲಿ ಮಾತ್ರ ಕಾಣಲು ಸಾಧ್ಯ” ಎಂದು ಆಶೀರ್ವಚನಗೈದರು. ವೇ|ಮೂ| ಕುರೋಮೂಲೆ ಚಂದ್ರಶೇಖರ ಉಪಾಧ್ಯಾಯ ಮಾತೃಪೂಜನ ಕಾರ್ಯಕ್ರಮದ ವಿಧಿ-ವಿಧಾನ ನಡೆಸಿಕೊಟ್ಟರು.
ಶಾಲಾ ಮುಖ್ಯ ಶಿಕ್ಷಕಿ ರೇಣುಕಾ ಎಸ್. ರೈ ಸ್ವಾಗತಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಸೇರಾಜೆ ಗಣಪತಿ ಭಟ್ ಪ್ರಸ್ತಾವನೆಗೈದರು. ಮಾತೃಮಂಡಳಿ ಸದಸ್ಯೆ ಶ್ರೀಮತಿ ವಿಮಲ ವಂದಿಸಿದರು. ಸಹಶಿಕ್ಷಕಿ ಶ್ರೀಮತಿ ಹೇಮಾವತಿ ಕಾರ್ಯಕ್ರಮ ನಿರೂಪಿಸಿದರು.