“ಪ್ರೀತಿ-ವಿಶ್ವಾಸದೊಂದಿಗೆ ಸಂಸ್ಕಾರಯುತ ಜೀವನ ಅನುಸರಣೀಯ”

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮಂಡೆಕೋಲು ಘಟಸಮಿತಿ ವಾರ್ಷಿಕೋತ್ಸವದಲ್ಲಿ ಪೂಜ್ಯ ಶ್ರೀಗಳವರಿಂದ ಅಶೀರ್ವಚನ
ಮಾ.೧೨: “ಮಂಡೆಕೋಲಿನ ಮಣ್ಣಿನಲ್ಲಿ ವಿಶೇಷ ಗುಣವಿದೆ. ಎಲ್ಲರೂ ಪ್ರೀತಿ-ವಿಶ್ವಾಸದಿಂದ ಸಂಸ್ಕಾರಯುತ ಜೀವನ ನಡೆಸುವುದು ಅನುಸರಣೀಯ. ಸಂಸ್ಕಾರಯುತ ಸಂಘಟನೆಯಿAದ ಉತ್ತಮ ಕಾರ್ಯಗಳು ನಡೆಯಲು ಸಾಧ್ಯ. ಆಗ ಗ್ರಾಮದ ವಿಕಾಸವಾಗುವುದು. ಇದು ಹೀಗೆ ಮುಂದುವರಿಯಲಿ. ನಾಡಿಗೆ ಒಳಿತಾಗಲಿ” ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಮಂಡೆಕೋಲು ಸಹಕಾರಿ ಸಂಘದ ಸಭಾಂಗಣದಲ್ಲಿ ಜರಗಿದ ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್(ರಿ.), ಒಡಿಯೂರು ಗುರುದೇವದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಮಂಡೆಕೋಲು ಘಟಸಮಿತಿಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಆಶೀರ್ವಚನಗೈದರು.
ಈ ಸುಸಂದರ್ಭ ವೇ|ಮೂ| ನಾಗರಾಜ ಭಟ್ ಸುಳ್ಯ ಇವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯದತ್ತವ್ರತ ಪೂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಮಂಡೆಕೋಲು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಕುಶಲ ಉದಂತಡ್ಕ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶ್ರೀ ಸದಾನಂದ ಮಾವಾಜಿ, ಮಂಡೆಕೋಲು ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಸುರೇಶ್ ಕಣಿಮರಡ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಉದಯಕುಮಾರ್.ಜಿ, ಮಂಡೆಕೋಲು ಶ್ರೀ ಮಹಾವಿಷ್ಣು ದೇವಸ್ಥಾನದ ಪವಿತ್ರಪಾಣಿ ಶ್ರೀ ಕೇಶವಮೂರ್ತಿ ಹೆಬ್ಬಾರ್, ಮಂಡೆಕೋಲು ಯಾದವ ಸಭಾ ಪ್ರಾದೇಶಿಕ ಸಮಿತಿ ಅಧ್ಯಕ್ಷ ಶ್ರೀ ಅಪ್ಪಯ್ಯ ಮಣಿಯಾಣಿ, ತಾಲೂಕು ಘಟಸಮಿತಿ ಅಧ್ಯಕ್ಷ ಶ್ರೀ ಸುಹಾಸ್ ಅಲೆಕ್ಕಾಡಿ, ಮಂಡೆಕೋಲು ಘಟಸಮಿತಿ ಅಧ್ಯಕ್ಷ ಶ್ರೀ ವಿನೋದ್ ಕುಮಾರ್ ಕಣಿಮರಡ್ಕ ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದು ಶುಭಹಾರೈಸಿದರು.
ಸಮಾರಂಭದಲ್ಲಿ ನಾಟಿವೈದ್ಯರುಗಳಾದ ಶ್ರೀಮತಿ ರಾಮಕ್ಕ ಮಾಧವ ಗೌಡ ಬಳ್ಳಕಜೆ, ಶ್ರೀ ಕೃಷ್ಣಪ್ಪ ಗೌಡ ಮಂಡೆಕೋಲು, ಸಾಮಾಜಿಕ ಕ್ಷೇತ್ರದಲ್ಲಿ ಶ್ರೀ ಸದಾನಂದ ಮಾವಾಜಿಯವರನ್ನು ಸನ್ಮಾನಿಸಲಾಯಿತು.
ಒಡಿಯೂರು ಶ್ರೀ ಹನುಮಶ್ರೀ ವಿಕಾಸವಾಹಿನಿ ಸ್ವಸಹಾಯ ಸಂಘ, ಒಡಿಯೂರು ಶ್ರೀ ವಯನಾಟ್ ಕುಲವನ್ ವಿಕಾಸವಾಹಿನಿ ಸ್ವಸಹಾಯ ಸಂಘ ಹಾಗೂ ಒಡಿಯೂರು ಶ್ರೀ ಧರ್ಮದೈವ ವಿಕಾಸವಾಹಿನಿ ಸ್ವಸಹಾಯ ಸಂಘಗಳನ್ನು ಗೌರವಿಸಲಾಯಿತು.
ಶ್ರೀ ಶಿವಪ್ರಸಾದ್ ಉಗ್ರಾಣಿಮನೆ ಸ್ವಾಗತಿಸಿದರು, ಶ್ರೀಮತಿ ಸರೋಜಿನಿ ಮಾವಂಜಿ ವರದಿ ವಾಚಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ ಪ್ರಾಸ್ತವಿಕವಾಗಿ ಮಾತನಾಡಿದರು.
ಶ್ರೀಮತಿ ಸುಜಾತ ಕಣಿಮರಡ್ಕ, ಶ್ರೀ ಸೀತಾರಾಮ ಮಂಡೆಕೋಲು ಶ್ರೀಮತಿ ಮೋಹಿನಿ ಮಂಡೆಕೋಲು ಸನ್ಮಾನಿತರ ಪರಿಚಯ ಮಾಡಿದರು.
ಮೇಲ್ವಿಚಾರಕರಾದ ಶ್ರೀಮತಿ ಗೀತಾ ಸಹಕರಿಸಿದರು. ಶ್ರೀ ಅನಿಲ್ ಅಕ್ಕಪ್ಪಾಡಿ ಮತ್ತು ದಿವ್ಯ ಬೇಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಸೀತಾರಾಮ ವಂದಿಸಿದರು.