“ಪ್ರಕೃತಿ-ಸಂಸ್ಕೃತಿಯನ್ನು ತಿಳಿಸುವ ಉದ್ದೇಶವಾಗಿದೆ”

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಇಪ್ಪತ್ತಾರನೇ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವನ್ನು ದೀಪೋಜ್ವಲನಗೊಳಿಸಿ ಉದ್ಘಾಟಿಸಿ
ಪೂಜ್ಯ ಶ್ರೀಗಳವರಿಂದ ಆಶೀರ್ವಚನ
“ತುಳು ಭಾಷೆ ಪಂಚದ್ರಾವಿಡ ಭಾಷೆಗಳಲ್ಲಿ ಮೊದಲ ಸ್ಥಾನದಲ್ಲಿದೆ. ಒಡೆದ ಮನಸ್ಸುಗಳನ್ನು ಒಂದು ಮಾಡುವ ಶಕ್ತಿ ‘ವಂದೇ ಮಾತರಂ’ ಗೀತೆಗೆ ಇದೆ. ಭಾರತೀಯತೆ ನಮ್ಮಲ್ಲಿ ತುಂಬಿಕೊ0ಡಿದೆ. ದೇಶ ಕಟ್ಟುವ ಕೆಲಸ ನಮ್ಮಿಂದಲೇ ಆಗಲಿ. ಭಾರತೀಯ ಪರಂಪರೆ-ಸ0ಸ್ಕೃತಿಯ ಉಳಿವಿಗೆ ನಾವು ಒಗ್ಗಟ್ಟಾಗಬೇಕು. ಪ್ರಕೃತಿ-ಸಂಸ್ಕೃತಿಯನ್ನು ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮದ ಆಯೋಜನೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯಾದರೆ ಭವ್ಯ ಭಾರತ ನಿರ್ಮಾಣ ಸಾಧ್ಯ. ವ್ಯಕ್ತಿಯಲ್ಲಿ ವ್ಯಕ್ತಿತ್ವ ನಿರ್ಮಾಣವಾದಾಗ ಬದುಕು ಹಸನಾಗಲು ಸಾಧ್ಯ. ಭಾರತ ದೇಶದ ಶಕ್ತಿ ಅಪಾರ. ದೇಶದ ಒಳಿತಿಗೆ ನಮ್ಮನ್ನು ನಾವು ಅರಿಯುವ ಕೆಲಸವಾಗಬೇಕು. ತುಳುವರಿಗೆ ಅವರದ್ದೇ ಆದ ಸ್ಥಾನಮಾನವಿದೆ. ಭಾಷೆಯ ಒಡಲು ಸಂಸ್ಕೃತಿ. ಗ್ರಾಮರಾಜ್ಯವಾಗದೆ ರಾಮರಾಜ್ಯವಾಗದು. ಸಂಸ್ಕೃತಿಯ ಅರಿವು ಮಕ್ಕಳಿಗಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ವಿಶ್ವವಿದ್ಯಾಯಗಳಲ್ಲಿ ತುಳು ಕಲಿಯುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಸರಕಾರ ಈ ಬಗ್ಗೆ ಗಮನ ಹರಿಸಬೇಕಾದ ಅನಿವಾರ್ಯತೆ ಇದೆ. ಕೃಷಿ ಮತ್ತು ಋಷಿ ಪರಂಪರೆ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ” ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಒಡಿಯೂರು ಶ್ರೀ ಸಂಸ್ಥಾನದಲ್ಲಿ ಜರಗಿದ ಇಪ್ಪತ್ತಾರನೇ ‘ವಂದೇ ಮಾತರಂ’ ತುಳು ಸಾಹಿತ್ಯ ಸಮ್ಮೇಳನವನ್ನು ದೀಪೋಜ್ವಲನಗೊಳಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಸಮ್ಮೇಳನಾಧ್ಯಕ್ಷ ಶ್ರೀ ಕದ್ರಿ ನವನೀತ ಶೆಟ್ಟಿಯವರು ಮಾತನಾಡಿ “ಇದೊಂದು ಜೀವನದ ಅವಿಸ್ಮರಣೀಯ ಕ್ಷಣವಾಗಿದೆ. ‘ವಂದೇ ಮಾತರಂ’ನ ಬೆಲೆಯನ್ನು ತಿಳಿಸುವ ಕೆಲಸ ಕೇಂದ್ರ ಸರಕಾರದಿಂದ ಆಗುತ್ತಿರುವುದು ಸಂತಸದ ವಿಚಾರ. ಯುವ ಶಕ್ತಿ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ರಾಷ್ಟ್ರೀಯತೆ ಉಳಿದರೆ ಧರ್ಮ ಉಳಿಯುವುದು. ಹೊಸ ಸಾಹಿತ್ಯಗಳು ಸೃಷ್ಟಿಯಾಗಲಿ ರಾಷ್ಟ್ರೀಯತೆ ಬೆಳೆಯಲಿ” ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕ್ಕಾಡು ಇವರು ಮಾತನಾಡಿ “ತುಳು ಸಮ್ಮೇಳನ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಅಷ್ಟೊಂದು ಸುಲಭದ ಕೆಲಸವಲ್ಲ. ತುಳುವಿನ ಉಳಿವಿಗೆ ಒಡಿಯೂರು ಶ್ರೀಗಳ ಪ್ರಯತ್ನ ಅಭಿನಂದನೀಯ. ಚರಿತ್ರೆಯನ್ನು ಅರಿಯುವ ಕೆಲಸವಾಗಬೇಕು. ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕು. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡುವ ಪ್ರಯತ್ನ ವಿಧಾನಸಭೆಯಲ್ಲೂ ನಡೆಯುತ್ತಿದೆ. ನಾವೆಲ್ಲರೂ ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹ ನೀಡಬೇಕು. ತುಳು ಭಾಷೆಯನ್ನು ಎಲ್ಲರೂ ಮಾತನಾಡುತ್ತಾರೆ. ಇಂದು ತುಳು ಭಾಷೆ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಜನಪ್ರತಿನಿಧಿಗಳು ಮನಸ್ಸು ಮಾಡಿದಲ್ಲಿ ತುಳುವಿಗೆ ಸ್ಥಾನಮಾನ ಸಿಗಲು ಸಾಧ್ಯ. ಇಂತಹ ಸಮ್ಮೇಳನ ಇತರರಿಗೆ ಪ್ರೇರಣೆಯಾಗಲಿ” ಎಂದರು.
ಶಶಿ ಕ್ಯಾಟರಿಂಗ್ ಸರ್ವಿಸಸ್ (ಪ್ರೈ.) ಲಿಮಿಟೆಡ್‌ನ ಆಡಳಿತ ನಿರ್ದೇಶಕ ಶ್ರೀ ಶಶಿಧರ ಬಿ. ಶೆಟ್ಟಿ ಬರೋಡ ಇವರು ಮಾತನಾಡಿ “ಇದೊಂದು ಮನಸ್ಸಿಗೆ ಮುಟ್ಟುವ ಕಾರ್ಯಕ್ರಮವಾಗಿದೆ. ತುಳುವಿಗೆ ಸ್ಥಾನಮಾನ ಸಿಕ್ಕಿದಲ್ಲಿ ಅದು ಇನ್ನಷ್ಟು ಬೆಳೆಯಲು ಸಾಧ್ಯ. ಪೂಜ್ಯ ಶ್ರೀಗಳವರ ಇಂತಹ ಪ್ರಯತ್ನ ತುಳು ಉಳಿವಿಗೆ ಪೂರಕ. ನಾವು ಗಟ್ಟಿಯಾಗಬೇಕು. ತುಳುವಿನ ಬಗ್ಗೆ ಗಟ್ಟಿಧ್ವನಿ ಎತ್ತುವ ಕೆಲಸ ಎಲ್ಲರಿಂದಲೂ ಆಗಲಿ” ಎಂದರು.
ಅಲ್ಟಾçಟೆಕ್ ಸಿಮೆಂಟ್‌ನ ಹಿರಿಯ ಪ್ರಬಂಧಕ ಶ್ರೀ ಸದಾನಂದ ಸುಲಾಯ ಬೆಂಗಳೂರು, ಶ್ರೀ ಒಡಿಯೂರು ರಥೋತ್ಸವ ಸಮಿತಿ ಉಪಾಧ್ಯಕ್ಷ ಶ್ರೀ ವಾಮಯ್ಯ ಬಿ.ಶೆಟ್ಟಿ ಮುಂಬೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಪೂಜ್ಯ ಶ್ರೀಗಳವರು ತುಳುಲಿಪಿಯಲ್ಲಿ ಬರೆದ ‘ವಂದೇ ಮಾತರಂ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ತುಳು ಭಾಷೆಯನ್ನು ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ಕುರಿತು ಮಾನ್ಯ ಪ್ರಧಾನಿಗಳಿಗೆ ಹಾಗೂ ರಾಜ್ಯದ ಎರಡನೇ ಭಾಷೆಯನ್ನಾಗಿ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳವರಿಗೆ ಠರಾವು ಮಂಡನೆ ಮಾಡಲಾಯಿತು.
ಕು| ನಿತ್ಯಶ್ರೀ ಎಸ್. ರೈ ಪ್ರಾರ್ಥಿಸಿದರು. ತುಳು ಸಾಹಿತ್ಯ ಸಮ್ಮೇಳನ ಸಮಿತಿ ಪ್ರಧಾನ ಸಂಚಾಲಕರಾದ ಡಾ. ವಸಂತಕುಮಾರ್ ಪೆರ್ಲ ಸ್ವಾಗತಿಸಿ, ಪ್ರಸ್ತಾವನೆಗೈದರು. ಶ್ರೀ ಒಡಿಯೂರು ರಥೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶ್ರೀ ಮಾತೇಶ್ ಭಂಡಾರಿ ವಂದಿಸಿದರು. ಶ್ರೀ ಲೋಕೇಶ್ ಶೆಟ್ಟಿ ಬಾಕ್ರಬೈಲ್ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರೀಯತೆ – ದೇಸಿಯತೆ ತುಲಿಪು
ಪೂಜ್ಯ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ರಾಷ್ಟ್ರೀಯತೆ-ದೇಸೀಯತೆ ಎಂಬ ವಿಚಾರದಲ್ಲಿ ಗೋಷ್ಠಿ ಜರಗಿತು.
ಹಿರಿಯ ಕವಿ ಡಾ. ವಸಂತಕುಮಾರ್ ಪೆರ್ಲ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಹಿಂದೂ ಕಾರ್ಯಕರ್ತ ಶ್ರೀ ಶ್ರೀಕಾಂತ ಶೆಟ್ಟಿ ಕಾರ್ಕಳ ‘ಪೇಂಟೆದ ಪೊರ್ಲು’, ಶ್ರೀ ವಿಜೇತ್ ಎಂ. ಶೆಟ್ಟಿ ಮಂಜನಾಡಿ ‘ಹಳ್ಳಿದ ತಿರ್ಲ್’ ವಿಚಾರದ ಕುರಿತಾಗಿ ವಿಚಾರ ಮಂಡಿಸಿದರು. ಸಮ್ಮೇಳನಾಧ್ಯಕ್ಷ ಶ್ರೀ ಕದ್ರಿ ನವನೀತ ಶೆಟ್ಟಿ ಉಪಸ್ಥಿತರಿದ್ದರು. ಶ್ರೀಮತಿ ಶೀಬಾ ಸ್ವಾಗತಿಸಿದರು. ಶ್ರೀಮತಿ ಸುಮಿತ್ರ ವಂದಿಸಿದರು. ಶ್ರೀ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಕವಿಗೋಷ್ಠಿ
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ, ಹಿರಿಯ ಕವಿ ಶ್ರೀ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅವರು ಮಾತನಾಡಿ “ಕವಿತೆಯ ಆತ್ಮ ಧ್ವನಿ. ಕವಿಗಳು ಬರೆಯುವುದು ಮಾತ್ರವಲ್ಲ ಧ್ವನಿಯಾಗಬೇಕು. ನಿಮ್ಮ ಕವಿತೆಗಳು ಸಮಾಜದ ಒಂದು ಸೊತ್ತಾಗಿ ಬರಬೇಕು. ಕವಿ ಹಾಗೂ ಓದುಗನ ಅನುಭವ ಭಿನ್ನವಾಗಿರುತ್ತದೆ. ಕವಿತೆ ಬರೆಯುವವರಿಗೆ ಅನುಭವ ಅಗತ್ಯ. ಇಂದಿನ ಕವಿಕೂಟ ಯಶಸ್ವಿಯಾಗಿದೆ. ವಸ್ತು ವಿಷಯದಲ್ಲಿ ಹೊಸತನ ಬೇಕು” ಎಂದರು.
ಸಮ್ಮೇಳನಾಧ್ಯಕ್ಷ ಕದ್ರಿ ನವನೀತ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕವಿಗಳಾದ ಶ್ರೀ ಸದಾನಂದ ನಾರಾವಿ, ಶ್ರೀಮತಿ ಪದ್ಮಾವತಿ ಏದಾರು, ಶ್ರೀ ಸುಂದರ ಬಾರಡ್ಕ, ಶ್ರೀ ವಿಶ್ವನಾಥ ಕುಲಾಲ್ ಮಿತ್ತೂರು, ಶ್ರೀಶಾವಾಸವಿ ತುಳುನಾಡ್, ಶ್ರೀ ವಿಷ್ಣುಗುಪ್ತ ಪುಣಚ, ಶ್ರೀ ಚೆನ್ನಪ್ಪ ಅಳಿಕೆ, ಶ್ರೀ ದಿವಾಕರ ಬಲ್ಲಾಳ್ ಎ.ಬಿ., ಶ್ರೀಮತಿ ಅನಿತಾ ಶೆಟ್ಟಿ ಮೂಡಬಿದಿರೆ, ಶ್ರೀ ಬದ್ರುದ್ದೀನ್ ಕೂಳೂರು, ಶ್ರೀ ಅಶೋಕ ಎನ್.ಕಡೇಶಿವಾಲಯ, ಶ್ರೀ ಉಮೇಶ್ ಶಿರಿಯ, ಶ್ರೀಮತಿ ಸೌಮ್ಯಾ, ಶ್ರೀ ಪದ್ಮನಾಭ ಸುವರ್ಣ ಮಿಜಾರ್, ಶ್ರೀ ಸವಿತಾ ಕರ್ಕೇರ ಕಾವೂರು, ಶ್ರೀ ಶಂಕರ ಕುಂಜತ್ತೂರು, ಶ್ರೀ ಚೇತನ್ ವರ್ಕಾಡಿ, ಶ್ರೀ ಗಣೇಶ್‌ಪ್ರಸಾದ ಪಾಂಡೇಲು, ಶ್ರೀ ರವೀಂದ್ರ ಕುಲಾಲ್ ವರ್ಕಾಡಿ, ಶ್ರೀಮತಿ ಅಕ್ಷತಾ ಶೆಟ್ಟಿ ಪಣಿಮಜಲು, ಡಾ. ಸುರೇಶ ನೆಗಳಗುಳಿ, ಶ್ರೀ ಪ್ರಶಾಂತ್ ಆಚಾರ್ಯ, ಶ್ರೀ ಎಚ್.ಕೆ. ನಯನಾಡು, ಶ್ರೀ ಭಾಸ್ಕರ್ ವರ್ಕಾಡಿ, ಶ್ರೀ ಶೇಖರ್ ಶೆಟ್ಟಿ ಬಾಯಾರು, ಶ್ರೀ ರೇಮಂಡ್ ಡಿಕೂನ ತಾಕೊಡೆ, ಶ್ರೀಮತಿ ಲಕ್ಷ್ಮಿ ಎಸ್. ಶೆಟ್ಟಿಗಾರ್ ಸುಂಕದಕಟ್ಟೆ ಮೊದಲಾದ ಕವಿಗಳು ಕವಿತೆ ವಾಚಿಸಿದರು. ತುಳುವೆರ ಕಲ, ಕುಡ್ಲ ಇದರ ಸಂಚಾಲಕಿ ಶ್ರೀಮತಿ ಗೀತಾ ಲಕ್ಷ್ಮೀಶ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು.
ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಲೀಲಾ ವಂದಿಸಿದರು.