ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಕೆಸರ್‌ದ ಕಂಡೊಡೊಂಜಿ ದಿನ’

“ಕ್ರೀಡೋತ್ಸವದಿಂದ ಬಾಂಧವ್ಯ ಬೆಸೆಯಲು ಸಾಧ್ಯ”
ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಪ್ರಯುಕ್ತ ಆಯೋಜಿಸಿದ್ದ ‘ಕೆಸರ್‌ದ ಕಂಡೊಡೊAಜಿ ದಿನ’ ಕೆಸರುಗದ್ದೆಯ ಕ್ರೀಡೋತ್ಸವ ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ಜೂ.೨೯: “ಕೃಷಿ ಎರಡೂ ಕಡೆಗಳಿಂದಲೂ ಆಗಬೇಕು. ಹೃದಯದಲ್ಲೂ ಆಗಬೇಕು, ಭೂಮಿಯಲ್ಲೂ ಆಗಬೇಕು. ನಮ್ಮ ಹತ್ತಿರದಲ್ಲೇ ಇರುವ ದೇವಸ್ಥಾನದಲ್ಲಿ ಕೃಷ್ಣ ದೇವರನ್ನು ಕಾಣಬಹುದು. ಕೃಷ್ಟನಿಗೂ ಕೃಷಿಗೂ ಬಹಳ ನಿಕಟವಾದ ಸಂಬAಧವಿದೆ. ಕೃಷಿ ಅತ್ಯಂತ ಶ್ರೇಷ್ಠವಾದುದು. ಭಾರತ ದೇಶವೇ ಕೃಷಿ ಪ್ರಧಾನವಾದ ದೇಶ. ವಿಶ್ವದ ಶ್ವಾಸವೇ ಓಂಕಾರದಲ್ಲಿ ಅಡಗಿದೆ. ಮನುಷ್ಯನ ಶರೀರದಲ್ಲಿ ಅನ್ನಮಯ ಕೋಶವೆಂಬುದಿದೆ. ಆನಂದಮಯ ಕೋಶ ಜಾಗೃತಿಯಾಗಬೇಕಾದರೆ ಅನ್ನ ಅಗತ್ಯ. ಅದು ಅಧ್ಯಾತ್ಮ ಕೋಶವೇ ಆಗಿದೆ. ಆಧ್ಯಾತ್ಮದ ಜಾಗೃತಿಯಿಂದ ಬದುಕು ಸುಂದರವಾಗುತ್ತದೆ. ಅಂತರAಗದ ಅರ್ಥಾತ್ ಅಧ್ಯಾತ್ಮ ಕೃಷಿ ಹಾಗೂ ಬಹಿರಂಗದ ಕೃಷಿಯಲ್ಲಿ ಬೆಳೆ ಬರಬೇಕಾದರೆ ಸಂಸ್ಕಾರ ಅಗತ್ಯ. ಜೀವನವೆಂದರೆ ಹಸಿರು ಎಂದರ್ಥ. ಹಸಿರು ಉಳಿದರೆ ಉಸಿರು ಉಳಿಯುವುದು. ತುಳುವರಲ್ಲಿರುವ ವಿಶೇಷತೆಗಳನ್ನು ಅರಿಯುವ ಕಾರ್ಯವಾಗಬೇಕು. ಸಮಾಜದಲ್ಲಿ ಬಾಂಧವ್ಯ ಬೆಸೆಯಲು ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮಣ್ಣಿನ ಸ್ನಾನಕ್ಕೆ ಆಯುರ್ವೇದದಲ್ಲಿ ವಿಶೇಷ ಸ್ಥಾನವಿದ್ದು. ಕೃಷಿ ಚಟುವಟಿಕೆಯ ಮೂಲಕ ಇದು ಸಾಧ್ಯವಾಗುತ್ತದೆ” ಎಂದು ಪೂಜ್ಯ ಶ್ರೀಗಳವರು ಗ್ರಾಮೋತ್ಸವದ ಪ್ರಯುಕ್ತ ಒಡಿಯೂರು ಶ್ರೀ ಸಂಸ್ಥಾನದ ಬನಾರಿಯಲ್ಲಿರುವ ಸಾಗುವಳಿ ಭೂಮಿಯಲ್ಲಿ ನಡೆದ ‘ಕೆಸರ್‌ದ ಕಂಡೊಡೊAಜಿ ದಿನ’ ಕ್ರೀಡೋತ್ಸವವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಧ್ವೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಸಹಕಾರರತ್ನ ಲ| ಎ. ಸುರೇಶ್ ರೈ, ಉಪಾಧ್ಯಕ್ಷ ಶ್ರೀ ಲಿಂಗಪ್ಪ ಗೌಡ ಪನೆಯಡ್ಕ, ಸಂಘಟನಾ ಕಾರ್ಯದರ್ಶಿ ಶ್ರೀ ಕದ್ರಿ ನವನೀತ ಶೆಟ್ಟಿ, ಕ್ರೀಡಾಕೂಟದ ಸಂಚಾಲಕ ಶ್ರೀ ಶಶಿಧರ ಶೆಟ್ಟಿ ಜಮ್ಮದ ಮನೆ, ಜನ್ಮದಿನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಕೃಷ್ಣ ಶೆಟ್ಟಿ ತಾರೆಮಾರ್, ಪ್ರಧಾನ ಕೋಶಾಧಿಕಾರಿ ಶ್ರೀ ಲೋಕನಾಥ ಶೆಟ್ಟಿ, ಒಡಿಯೂರು ಐ.ಟಿ.ಐ. ಪ್ರಾಚಾರ್ಯ ಶ್ರೀ ಪ್ರವೀಣ್‌ಕುಮಾರ್ ಎನ್., ಯೋಜನೆಯ ನಿರ್ದೇಶಕ ಶ್ರೀ ಕಿರಣ್ ಉರ್ವ, ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್ ರೈ, ತೀರ್ಪುಗಾರರಾದ ಶ್ರೀ ಚಂದ್ರಹಾಸ ಅಳಿಕೆ, ಶ್ರೀ ರವೀಂದ್ರ ಚೆಂಡುಕಳ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಯಶವಂತ ವಿಟ್ಲ ಸ್ವಾಗತಿಸಿದರು. ಉಪಾಧ್ಯಾಕ್ಷ ಶ್ರೀ ಗಣಪತಿ ಭಟ್ ಸೇರಾಜೆ ವಂದಿಸಿದರು. ಶ್ರೀ ದೇವಿಪ್ರಸಾದ್ ಶೆಟ್ಟಿ ಬೆಜ್ಜ ನಿರೂಪಿಸಿದರು.