“ಗುರುಕುಲದ ಪುಟಾಣಿಗಳು ಜಗತ್ತನ್ನು ಬೆಳಗುವ ಕುಲದೀಪಕರಾಗಿ”
ಒಡಿಯೂರು ಶ್ರೀ ಗುರುದೇವ ಗುರುಕುಲಗಳ ‘ಗುರುಕುಲೋತ್ಸವ’ವನ್ನು ಉದ್ಘಾಟಿಸಿ ಪೂಜ್ಯ ಶ್ರೀಗಳವರಿಂದ ಆಶೀರ್ವಚನ
ದ.05: “ಗುರುಕುಲದ ಪುಟಾಣಿಗಳು ಜಗತ್ತನ್ನು ಬೆಳಗುವ ಕುಲದೀಪಕರಾಗಿ. ಬದುಕು ರೂಪಿಸುವ ಶಿಕ್ಷಣ ನೀಡುವ ಗುರುಕುಲಗಳು ಗ್ರಾಮ ಗ್ರಾಮಕ್ಕೆ ವಿಸ್ತರಣೆ ಮಾಡಲಾಗುವುದು. ಶಿಸ್ತು-ಸಂಯಮ ಮೈಗೂಡಿಸಿಕೊಂಡಾಗ ಬದುಕಿಗೆ ಯಾವುದೇ ಅಪಾಯವಿರುವುದಿಲ್ಲ. ಶ್ರೇಯಸ್ಸಿನ ಮಾರ್ಗ ಹಾಗೂ ಆಧ್ಯಾತ್ಮ ವಿದ್ಯೆ ಶ್ರೇಷ್ಠವಾಗಿದ್ದು, ಅದನ್ನು ಪ್ರತಿಯೊಬ್ಬರೂ ಅಳವಡಿಸಬೇಕಿದೆ” ಎಂದು ಪೂಜ್ಯ ಶ್ರೀಗಳವರು ರಾಜಾಂಗಣದಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಗುರುಕುಲಗಳ ‘ಗುರುಕುಲೋತ್ಸವ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನಗೈದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರಥಮ ಸೋಪಾನ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಶ್ರೀ ಪ್ರವೀಣ್ ಕುಮಾರ್, ಗುರುದೇವ ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಕಸ್ತೂರಿ ಹೆಗ್ಡೆ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ಮಾತೇಶ್ ಭಂಡಾರಿ, ಕ್ಷೇತ್ರದ ಕಾರ್ಯನಿರ್ವಾಹಕ ಶ್ರೀ ಪದ್ಮನಾಭ ಒಡಿಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ಎಸ್. ರೈ ಸ್ವಾಗತಿಸಿದರು. ಶಾಲಾ ಸಂಚಾಲಕ ಶ್ರೀ ಗಣಪತಿ ಭಟ್ ಸೇರಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕಿ ಕು| ಗಂಗಾ ಪ್ರಶಸ್ತಿ ವಿಜೇತರ ಮಾಹಿತಿ ನೀಡಿದರು. ಶಿಕ್ಷಕಿ ಶ್ರೀಮತಿ ಸಂಧ್ಯಾ ವಂದಿಸಿದರು. ಶಿಕ್ಷಕಿ ಶ್ರೀಮತಿ ದಿವ್ಯಾ ಕಾರ್ಯಕ್ರಮ ನಿರೂಪಿಸಿದರು.
ಪುಟಾಣಿಗಳ ಸುಂದರವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕವಿತಾ, ಶ್ರೀಮತಿ ರಂಜನಿ ಸಂಯೋಜಿಸಿದರು.