ಒಡಿಯೂರು ಶ್ರೀ ಸಂಸ್ಥಾನದಲ್ಲಿ ಆ.1ರಂದು ‘ಆಟಿದ ಆಯನೊ’

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಗಸ್ಟ್ 1ರಂದು (ಆಟಿ ತಿಂಗೊಲು 16 ಪೋಪಿನಾನಿ) ಆದಿತ್ಯವಾರ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಸಮಿತಿ ಮತ್ತು ಒಡಿಯೂರ್ದ ತುಳುಕೂಟದ ಜಂಟಿ ಆಶ್ರಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ದಿವ್ಯ ಉಪಸ್ಥಿತಿಯಲ್ಲಿ ‘ಆಟಿದ ಆಯನೊ’ ತುಳು ನಡಕೆದ ಲೇಸ್ ಜರಗಲಿರುವುದು. ಆಟಿದ ಉಲಮರ್ಗಿಲ್ ಎಂಬ ವಿಚಾರದ ಬಗ್ಗೆ ಶ್ರೀಮತಿ ರಾಜಶ್ರೀ ಟಿ. ರೈ ಪೆರ್ಲ ಮಾತನಾಡಲಿದ್ದಾರೆ.
ಬೆಳಿಗ್ಗೆ 10.00. ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮದ ಪ್ರಯುಕ್ತ ಆಟಿ ಕಲೆಂಜ ನಲಿಕೆ, ಬಾಳೆಯ ನೂಲಿನಲ್ಲಿ ತುಳಸಿ ಎಲೆಯ ಮಾಲೆ ಕಟ್ಟುವ ಸ್ಪರ್ಧೆ ಹಾಗೂ ಆಟಿ ತಿಂಗಳ ಸಸ್ಯಾಹಾರಿ ಸಿಹಿ ಮತ್ತು ಖಾರ ತಿಂಡಿ-ತಿನಸುಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ.