ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘಕ್ಕೆ ೨೦೨೪-೨೦೨೫ನೇ ಸಾಲಿನಲ್ಲಿ ದಾಖಲೆಯ ರೂ. ೬೭೩.೫೨ ಕೋಟಿ ವ್ಯವಹಾರ – ರೂ.೫.೫೦ ಕೋಟಿ ಲಾಭ
ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದದೊಂದಿಗೆ, ಸಾದ್ವೀ ಶ್ರೀ ಶ್ರೀ ಮಾತಾನಂದಮಯೀಯವರ ಗೌರವ ಮಾರ್ಗದರ್ಶನದೊಂದಿಗೆ ೨೦೧೧ರಲ್ಲಿ ಪ್ರಾರಂಭವಾದ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ೨೦೨೪-೨೦೨೫ನೇ ಸಾಲಿನಲ್ಲಿ ಸಾರ್ವಕಾಲಿಕ ಸಾಧನೆಯನ್ನು ಮಾಡಿರುತ್ತದೆ. ಸಹಕಾರಿಯು ೨೦೨೪-೨೦೨೫ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.೫.೫೦ ಕೋಟಿ ಲಾಭ ಗಳಿಸಿದೆ. ಕಳೆದ ಸಾಲಿಗೆ ಹೋಲಿಸಿದರೆ ೨೧% ಏರಿಕೆಯಾಗಿರುತ್ತದೆ.
ವರದಿ ಸಾಲಿನಲ್ಲಿ ಸಹಕಾರಿಯು ರೂ.೬೭೩.೫೨ ಕೋಟಿ ವ್ಯವಹಾರವನ್ನು ದಾಖಲಿಸಿದೆ ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ೨೨% ಏರಿಕೆಯನ್ನು ಕಂಡಿದೆ. ಸುಮಾರು ೨೩ ಶಾಖೆಗಳ ಮೂಲಕ ರೂ.೩೬೬.೫೫ ಕೋಟಿ ಠೇವಣಿ ಸಂಗ್ರಹಿಸಿ, ರೂ.೩೦೬.೯೭ ಕೋಟಿ ಸಾಲ ಮತ್ತು ಮುಂಗಡಗಳೊAದಿಗೆ, ಪಾಲು ಬಂಡವಾಳ ರೂ.೨.೨೯ ಕೋಟಿ, ನಿಧಿಗಳು ರೂ.೧೫.೬೪ ಕೋಟಿ ಮತ್ತು ದುಡಿಯುವ ಬಂಡವಾಳ ರೂ.೩೮೪.೫೦ ಕೋಟಿಯನ್ನು ಹೊಂದಿರುತ್ತದೆ. ಎಲ್ಲಾ ಶಾಖೆಗಳು ಗಣಕೀಕೃತಗೊಳಿಸಿ ಕೋರ್ ಸಿಸ್ಟಂ ಸಾಫ್ಟ್ವೇರ್ ಅಳವಡಿಸಿದೆ. ಪ್ರತಿ ವರ್ಷವು ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ಎ’ಶ್ರೇಣಿಯನ್ನು ಪಡೆದಿದೆ.
ಸಹಕಾರಿಯು ಕಳೆದ ವರ್ಷ ಸದಸ್ಯರಿಗೆ ೨೧% ಡಿವಿಡೆಂಡ್ ನೀಡಿರುತ್ತದೆ. ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಸೌಹಾರ್ದ ಸಹಕಾರ ಸಂಘ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಉತ್ತಮ ಸೌಹಾರ್ದ ಪ್ರಶಸ್ತಿಯನ್ನು ಪಡೆದಿರುತ್ತದೆ.
ಅವಿಭಜಿತ ದ.ಕ ಜಿಲ್ಲೆಗಳಲ್ಲಿ ಸುಮಾರು ೮೦೦೦ ಒಡಿಯೂರು ವಿಕಾಸವಾಹಿನಿ ಸ್ವ-ಸಹಾಯ ಗುಂಪುಗಳಲ್ಲಿ ಸುಮಾರು ೬೪೦೦೦ಕ್ಕೂ ಮಿಕ್ಕಿ ಸದಸ್ಯರಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಉಳಿತಾಯವನ್ನು ಮಾಡಿಕೊಂಡು ತಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಸಾಲವನ್ನು ಪಡೆದು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿಕೊಂಡು ಸಂಸ್ಕಾರಯುತ ಜೀವನವನ್ನು ಸಾಗಿಸುತ್ತಿದ್ದಾರೆ.
ಸಹಕಾರಿಯ ಆಡಳಿತ ಕಛೇರಿ ಮತ್ತು ಪಂಪ್‌ವೆಲ್ ಶಾಖೆಯು ಮಂಗಳೂರಿನ ಪಂಪುವೆಲ್‌ನಲ್ಲಿರುವ ಲೋಟಸ್ ಗ್ಯಾಲಕ್ಸಿಯಲ್ಲಿ ಸುಮಾರು ೭೦೦೦ ಚ.ಅ ವಿಶಾಲ ಕಟ್ಟಡ ಕೋಣೆಗಳನ್ನು ಸ್ವಂತಕ್ಕೆ ಖರೀದಿಸಿ, ಹವಾನಿಯಂತ್ರಿತ ಸುಸಜ್ಜಿತ ಆತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರ್ಯಾಚರಿಸುತ್ತಿದೆ. ಸಹಕಾರಿಯ ೫ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ಸಹಕಾರಿಯ ಅಭಿವೃದ್ಧಿ ಮತ್ತು ಕೆಲಸದ ಕೌಶಲ್ಯಗಳನ್ನು ಗಮನಿಸಿ, ರಾಜ್ಯದ ಅನೇಕ ಸೌಹಾರ್ದ ಸಹಕಾರಿಗಳು ನಮ್ಮ ಸಂಸ್ಥೆಗೆ ಅಧ್ಯಯನ ಪ್ರವಾಸಕ್ಕೆ ಬರುತ್ತಿದ್ದು, ಅವರಿಗೆ ಮೌಲ್ಯಯುತವಾದ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ಸಹಕಾರಿಯ ಆಡಳಿತ ಕಛೇರಿಯಲ್ಲಿ ನಡೆದ ಅವಲೋಕನ ಸಭೆಯಲ್ಲಿ ಸಹಕಾರಿಯ ಅಧ್ಯಕ್ಷ ಸಹಕಾರರತ್ನ ಶ್ರೀ ಲ| ಎ.ಸುರೇಶ್ ರೈಯವರು ಮಾತನಾಡಿದರು.
ಕೃಷಿ ಕೌಶಲ್ಯ ತರಬೇತಿ :
ಸಮಗ್ರ ಸುಸ್ಥಿರಕೃಷಿಯನ್ನು ಪ್ರೋತ್ಸಾಹಿಸಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತೆ ಹಾಗೂ ಮಣ್ಣಿನ ಫಲವತ್ತತೆ ಕಾಪಾಡುವಂತೆ ರೈತರಿಗೆ ಅವರ ಜಮೀನಿನಲ್ಲಿ ‘ತೋಟದಲ್ಲಿ ಪಾಠ’ ಎನ್ನುವ ಶಿರೋನಾಮೆಯಲ್ಲಿ ಕೃಷಿ ವಿಜ್ಞಾನಿಗಳಿಂದ ತರಬೇತಿ ನೀಡಿ ರೈತರನ್ನು ಪ್ರೋತ್ಸಾಹಿಸಿರುವುದು ಮತ್ತು ಸಹಕಾರಿಯ ಸಿಬ್ಬಂದಿಗಳನ್ನು ಕೃಷಿ ವಿಜ್ಞಾನ ಕೇಂದ್ರ ಮೂಲಕ ಕೃಷಿ ವಿಷಯದಲ್ಲಿ ದೇಸಿ ಕೋರ್ಸ್ ಮೂಲಕ ತರಬೇತುಗೊಳಿಸಿ, ಸಿಬ್ಬಂದಿಗಳನ್ನು ಕೃಷಿಕರ ಸೇವೆಗೆ ಸಿದ್ಧಪಡಿಸಲಾಗುತ್ತಿದೆ.
ಉಪಾಧ್ಯಕ್ಷರಾದ ಶ್ರೀ ಲಿಂಗಪ್ಪಗೌಡ ಪನೆಯಡ್ಕ, ಶ್ರೀ ಲೋಕನಾಥ ಶೆಟ್ಟಿ ಮಂಗಳೂರು, ಶ್ರೀ ವೇಣುಗೋಪಾಲ ಮಾರ್ಲ, ಸೇರಾಜೆ ಶ್ರೀ ಗಣಪತಿ ಭಟ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ದಯಾನಂದ ಶೆಟ್ಟಿ ಬಾಕ್ರಬೈಲ್ ಹಾಗೂ ಹಿರಿಯ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.